ಕರ್ನಾಟಕ

ಲೋಕಾಸಮರ 2019: ಕರ್ನಾಟಕದಲ್ಲಿ 5.30ರ ಹೊತ್ತಿಗೆ ಶೇ.60.87ರಷ್ಟು ಮತದಾನ!

Srinivasamurthy VN
ಹಾಲಿ ಲೋಕಸಭಾ ಚುನಾವಣೆಯ ದೇಶದ ಮೂರನೇ ಹಂತ ಕರ್ನಾಟಕದಲ್ಲಿ ಎರಡನೇ ಹಂತದ ಮತದಾನ ಬಿಸಿಲಿನ ತಾಪ ಕಡಿಮೆಯಾಗುತ್ತಿದ್ದಂತೆಯೇ ಮತದಾನದ ಪ್ರಮಾಣ ಏರಿಕೆ ಕಂಡು ಬಂದಿದ್ದು, ಸಂಜೆ 5.30ರ ವೇಳೆಗೆ ಶೇ.60.87 ರಷ್ಟು ಮತದಾನ ದಾಖಲಾಗಿದೆ.
ಸಂಜೆ ವೇಳೆಗೆ ಚಿಕ್ಕಮಗಳೂರು ,ಶಿವಮೊಗ್ಗ ,ಉತ್ತರ ಕನ್ನಡ ಜಿಲ್ಲೆಗಳ ಬಹುತೇಕ ಭಾಗದಲ್ಲಿ ಬಿರುಗಾಳಿ ಸಮೇತ ಆಲಿಕಲ್ಲು ಮಳೆ ಸುರಿದಿದೆ. ಹೀಗಾಗಿ ಬಿಸಿಲಿನ ತಾಪ ಕಡಿಮೆಯಾದ ಬಳಿಕ ಮತದಾನ ಮಾಡುವ ಉದ್ದೇಶ ಹೊಂದಿದವರಿಗೆ ಮಳೆ ತಣ್ಣೀರೆರಚಿದೆ. ಆಲಿಕಲ್ಲು ಮಳೆಯಿಂದ ಚಿಕ್ಕಮಗಳೂರು ಉತ್ತರ ಕನ್ನಡ, ಶಿವಮೊಗ್ಗ ಜಿಲ್ಲೆಯ ಕೆಲ ವಿಧಾನ ಸಭಾ ಕ್ಷೇತ್ರಗಳಲ್ಲಿ ವಿದ್ಯುತ್ ಸಂಪರ್ಕ ಕಡಿದು ಹೋಗಿ ಮತದಾನಕ್ಕೆ ಅಡ್ಡಿಯುಂಟಾಗಿತ್ತು.
ಉಳಿದಂತೆ ಉತ್ತರ ಕರ್ನಾಟಕದ ಹಲವು ಲೋಕಸಭಾ ಕ್ಷೇತ್ರಗಳಲ್ಲಿ ಸಂಜೆ ವೇಳೆಗೆ ಮತದಾನ ಬಿರುಸುಗೊಂಡಿತ್ತು.
ಎಲ್ಲೆಲ್ಲಿ ಎಷ್ಟು ಮತದಾನ : 
ಚಿಕ್ಕೋಡಿ  : 68.53 %
ಬೆಳಗಾವಿ : 58.72%
ಬಾಗಲಕೋಟೆ : 63.92% 
ವಿಜಯಪುರ : 53.85% 
ಕಲಬುರಗಿ :  52.18% 
ರಾಯಚೂರು :  56.90% 
ಬೀದರ್ :  56.90%
ಕೊಪ್ಪಳ :  60.66% 
ಬಳ್ಳಾರಿ :  61.83% 
ಹಾವೇರಿ  : 63.22% 
ಧಾರವಾಡ : 61.95 %
ಉತ್ತರ ಕನ್ನಡ : 65.58 %
ದಾವಣಗೆರೆ : 66.38 % 
ಶಿವಮೊಗ್ಗ : 68.65 %
SCROLL FOR NEXT