ಬಿಜೆಪಿ ಸಂಕಲ್ಪ ಯಾತ್ರೆಯಲ್ಲಿ ನಿರ್ಮಲಾ ಸೀತಾರಾಮನ್ 
ಕರ್ನಾಟಕ

ಕಾಂಗ್ರೆಸ್ ನೀಡಿದ ಭರವಸೆಗಳನ್ನು ಈಡೇರಿಸಲು ವಿಫಲವಾಗಿದೆ: ನಿರ್ಮಲಾ ಸೀತಾರಾಮನ್

ಮಾಜಿ ಪ್ರಧಾನಿ ದಿವಂಗತ ಇಂದಿರಾ ಗಾಂಧಿಯವರ ಆಡಳಿತ ಕಾಲದಿಂದ ಆರಂಭವಾದ ಗರೀಬಿ‌ ಹಠಾವೋ ...

ಉಡುಪಿ: ಮಾಜಿ ಪ್ರಧಾನಿ ದಿವಂಗತ ಇಂದಿರಾ ಗಾಂಧಿಯವರ ಆಡಳಿತ  ಕಾಲದಿಂದ ಆರಂಭವಾದ ಗರೀಬಿ‌ ಹಠಾವೋ ಮೊಮ್ಮಗ ರಾಹುಲ್ ಗಾಂಧಿ ಕಾಲದವರೆಗೆ ಬಂದರೂ ನಿವಾರಣೆಯಾಗದಿರಲು ಕಾರಣವೇನೆಂದು‌ ಕಾಂಗ್ರೆಸ್ ನವರೇ ಉತ್ತರಿಸಬೇಕು ಎಂದು ಕೇಂದ್ರ ರಕ್ಷಣಾ ಸಚಿವೆ ನಿರ್ಮಲಾ‌ ಸೀತಾರಾಮನ್‌ ಹೇಳಿದ್ದಾರೆ.
ಉಡುಪಿ-ಚಿಕ್ಕಮಗಳೂರು ಲೋಕಸಭಾ ಕ್ಷೇತ್ರದ ಅಭ್ಯರ್ಥಿಯಾಗಿ ಇಂದು ನಾಮಪತ್ರ ಸಲ್ಲಿಸಿದ ಶೋಭಾ ಕರಂದ್ಲಾಜೆಯವರಿಗೆ ಸಾಥ್ ಕೊಡಲು ಅವರು ಆಗಮಿಸಿ ಬೆಳಗ್ಗೆ ಶ್ರೀಕೃಷ್ಣ ಮಠಕ್ಕೆ ಭೇಟಿ ನೀಡಿ ನಂತರ ಮಣಿಪಾಲದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು. ಪ್ರಧಾನಿ ಮೋದಿ ಭ್ರಷ್ಟಾಚಾರ ರಹಿತ ಆಡಳಿತ ನೀಡಿದ್ದು ಕಾಂಗ್ರೆಸ್ ವಿವಿಧ ರಾಜ್ಯಗಳಲ್ಲಿ‌ ನೀಡಿದ ಭರವಸೆಗಳನ್ನು ಆಡಳಿತಕ್ಕೇರಿದ ಬಳಿಕ ಈಡೇರಿಸಲು ವಿಫಲವಾಗಿದೆ‌‌ ಎಂದು ದೂರಿದರು.
ನಂತರ ಸಚಿವೆ ಬಿಜೆಪಿ‌ ವಿಜಯ ಸಂಕಲ್ಪ ಯಾತ್ರೆಯಲ್ಲಿ ಪಾಲ್ಗೊಂಡರು. ಬಿಜೆಪಿ ವಿಜಯ ಸಂಕಲ್ಪ ಯಾತ್ರೆಯನ್ನು ವಿವಿಧ ಲೋಕಸಭಾ ಕ್ಷೇತ್ರಗಳಲ್ಲಿ ಆಯೋಜಿಸಿದ್ದು ರಾಹುಲ್ ಗಾಂಧಿ‌ ಬಡವರಿಗೆ ಮಾಸಿಕ 6000 ರೂಪಾಯಿ ನೀಡುವ ಪೊಳ್ಳು ಭರವಸೆಯನ್ನು ದೇಶದ  ಜನ ನಂಬಲ್ಲ. ಬಿಜೆಪಿ ಈಗಾಗಲೇ ಬಡವರಿಗೆ ನೆರವಾಗುವ ನಾನಾ ಯೋಜನೆ ಜಾರಿಗೆ ತಂದಿದೆ ಎಂದು ಹೇಳಿದರು.
ಉಡುಪಿ‌ ಚಿಕ್ಕಮಗಳೂರು ಕ್ಷೇತ್ರಕ್ಕೆ ಸಂಸದೆ ಶೋಭಾ‌ ಕರಂದ್ಲಾಜೆ ಕೇಂದ್ರೀಯ ವಿದ್ಯಾಲಯ, ಪಾಸ್ ಪೋಟ್೯ ಕೇಂದ್ರ, ಕುಶಲಕರ್ಮಿಗಳ ಕೌಶಲ್ಯಾಭಿವೃದ್ಧಿ ಕೇಂದ್ರ‌ ತಂದಿದ್ದಾರೆ. ಸ್ಟಾರ್ಟಪ್‌‌, ಅಟಲ್ ಜಿ ಟಿಂಕರಿಂಗ್ ಲ್ಯಾಬ್‌ ಕರಾವಳಿಯ‌ ಶಾಲಾ‌ ಕಾಲೇಜುಗಳಲ್ಲಿ ಸ್ಥಾಪಿಸಿ ಮಕ್ಕಳ ಮೂಲಕ ಸಂಶೋಧನೆಗೆ‌ ನೀತಿ ಆಯೋಗ ಅನುದಾನ ನೀಡಿದೆ. ನಿಟ್ಟೆಯಲ್ಲಿ ಸಂಶೋಧನಾ‌ ಹಬ್‌ ಆರಂಭವಾಗಿದೆ‌ ಎಂದರು.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

5 ರಾಜ್ಯಗಳಿಗೆ ರಾಜ್ಯಪಾಲರ ನೇಮಕ; ಇವರೇ ಕರ್ನಾಟಕದ ನೂತನ ರಾಜ್ಯಪಾಲರು...

ವಿಡಿಯೋ ಪ್ರಸಾರ ಮಾಡದಂತೆ ತಡೆಯಾಜ್ಞೆ ಕೋರಿ ಕೋರ್ಟ್ ಮೆಟ್ಟಿಲೇರಿದ ಮಾಜಿ ಮುಖ್ಯಮಂತ್ರಿ!

ಸ್ಯಾಂಡಲ್‌ವುಡ್‌ನಲ್ಲಿ ಮತ್ತೊಂದು ವಿಚ್ಛೇದನ: 7 ವರ್ಷದ ದಾಂಪತ್ಯಕ್ಕೆ ಅಂತ್ಯವಾಡಿದ ಕನ್ನಡದ ಕಿರುತೆರೆ ನಟಿ!

CM ಡಿಕೆಶಿ​​ ಕುರ್ತಾ ಹಿಡಿದು ಹಿಂದೆ ತಳ್ಳಿದ ರಾಹುಲ್ ಗಾಂಧಿ: ವಿಡಿಯೋ ವೈರಲ್; ಬಂಡೆಗೆ ಸಿಕ್ಕ ಮರ್ಯಾದೆ! ಫುಲ್‌ ಅನ್‌ ರೆಸ್ಪೆಕ್ಟು!

ಕರ್ನಾಟಕ ಸೇರಿ 5 ರಾಜ್ಯಗಳಿಗೆ 2 ದಿನಗಳಲ್ಲಿ ಭಾರೀ ಮಳೆ: IMD ಎಚ್ಚರಿಕೆ