ಬಸನಗೌಡ ಪಾಟೀಲ್ ಯತ್ನಾಳ್ 
ಕರ್ನಾಟಕ

ಅನೇಕ ಕಡೆ ಅಯೋಗ್ಯರಿದ್ದಾರೆ, ಆದ್ರೆ ಮೋದಿ ಮುಖ ನೋಡಿ ವೋಟ್ ಹಾಕುತ್ತಾರೆ: ಬಿಜೆಪಿ ಶಾಸಕ ಯತ್ನಾಳ್

ಬೆಂಗಳೂರು ದಕ್ಷಿಣ ಬಿಜೆಪಿ ಅಭ್ಯರ್ಥಿಯಾಗಿ ತೇಜಸ್ವಿ ಸೂರ್ಯ ಆಯ್ಕೆ ಪಕ್ಷದ ನಿರ್ಣಯ. ಅನೇಕ ಕಡೆ ಅಯೋಗ್ಯರೂ ಇದ್ದಾರೆ. ಆದರೆ ಅನಿವಾರ್ಯವಾಗಿ...

ಬೆಂಗಳೂರು: ಬೆಂಗಳೂರು ದಕ್ಷಿಣ ಬಿಜೆಪಿ ಅಭ್ಯರ್ಥಿಯಾಗಿ ತೇಜಸ್ವಿ ಸೂರ್ಯ ಆಯ್ಕೆ ಪಕ್ಷದ ನಿರ್ಣಯ. ಅನೇಕ ಕಡೆ ಅಯೋಗ್ಯರೂ ಇದ್ದಾರೆ. ಆದರೆ ಅನಿವಾರ್ಯವಾಗಿ ಮೋದಿ ಮುಖ ನೋಡಿ ವೋಟ್ ಹಾಕುತ್ತಾರೆ ಎಂದು ಬಿಜೆಪಿ ಶಾಸಕ ಬಸನಗೌಡ ಪಾಟೀಲ್​ ಯತ್ನಾಳ್ ಅವರು ತೇಜಸ್ವಿನಿ ಅನಂತ್ ಕುಮಾರ್ ಅವರಿಗೆ ಟಿಕೆಟ್ ತಪ್ಪಿದ್ದಕ್ಕೆ ಬೇಸರ ವ್ಯಕ್ತಪಡಿಸಿದ್ದಾರೆ.
ಇಂದು ತೇಜಸ್ವಿನಿ ಅನಂತಕುಮಾರ್ ಅವರನ್ನು ಭೇಟಿ ಮಾಡಿದ ಯತ್ನಾಳ್​​, ಅವರಿಗೆ ಟಿಕೆಟ್​ ಕೈ ತಪ್ಪಿದ್ದಕ್ಕೆ ತೀವ್ರ ಅಸಮಾಧಾನ ವ್ಯಕ್ತಪಡಿಸಿದರು.
ನಿಜಕ್ಕೂ ತೇಜಸ್ವಿನಿ ಅವರಿ​​​ಗೆ ಟಿಕೆಟ್​​ ಸಿಗಬೇಕಾಗಿತ್ತು. ಕರ್ನಾಟಕದಲ್ಲಿ ಬಿಜೆಪಿ ಕಟ್ಟಿದವರು ಅನಂತಕುಮಾರ್​ ಮತ್ತು ಯಡಿಯೂರಪ್ಪ. ಕರ್ನಾಟಕದಲ್ಲಿ ಯಾರೂ ಕೂಡ ಲೋಕಸಭಾ ಅಭ್ಯರ್ಥಿಗಳನ್ನು ನೋಡುತ್ತಿಲ್ಲ. ಮೋದಿ ಪ್ರಧಾನಿಯಾಗಬೇಕೆಂದು ಮಾತ್ರ ಕಾರ್ಯಕರ್ತರು ಕೆಲಸ ಮಾಡುತ್ತಿದ್ದಾರೆ. ರಾಜಕೀಯದಲ್ಲಿ ಇಂತಹ ದುರಂತ ನೋಡಿಕೊಂಡು ಬಂದಿದ್ದೇವೆ ಎಂದರು.
ರಾಜ್ಯದ 28 ಅಭ್ಯರ್ಥಿಗಳನ್ನು ನೋಡಿ ಜನ ಓಟು ಹಾಕುತ್ತಿಲ್ಲ. ಮೋದಿ ನೋಡಿ ಓಟು ಹಾಕುತ್ತಿದ್ದಾರೆ. ಅನೇಕ ಕಡೆ ಪಕ್ಷದ ಅಭ್ಯರ್ಥಿಗಳ ಮುಖ ನೋಡಿದರೆ ಮತ ಹಾಕಲು ಸಾಧ್ಯವಿಲ್ಲ. ಆದರೆ ಅನಿವಾರ್ಯವಾಗಿ ಮೋದಿ ಮುಖ ನೋಡಿ ಮತ ಹಾಕುತ್ತಿದ್ದಾರೆ. ಸತ್ಯ ಒಪ್ಪಿಕೊಂಡಿದ್ದೇನೆ, ಅನೇಕ ಕಡೆ ಅಯೋಗ್ಯರಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

ಭಾರತೀಯ ನಾವಿಕರ ಸುರಕ್ಷತೆ ಮುಖ್ಯ; ನಾಗರಿಕ ಮೂಲಸೌಕರ್ಯಗಳ ಮೇಲಿನ ದಾಳಿ ಸ್ವೀಕಾರಾರ್ಹವಲ್ಲ: ಇರಾನ್‌ಗೆ ಅಜಿತ್ ದೋವಲ್

ಜರ್ಮನಿಯ ವಸತಿ ಕಟ್ಟಡದಲ್ಲಿ ಶಂಕಿತ ಬೆಂಕಿ ಅವಘಡ: 3 ಭಾರತೀಯರು ಸಾವು!

ಹನಿಟ್ರ್ಯಾಪ್ ಪಿತೂರಿ ಪ್ರಶ್ನಿಸಿದ್ದಕ್ಕೆ ಕಿರುಕುಳ; JDS ಕಾರ್ಯಕರ್ತ CCB ವಶಕ್ಕೆ: ಕುಮಾರಸ್ವಾಮಿ ಆಕ್ರೋಶ

ಕಾಂಗ್ರೆಸ್‌ನ ಆಂತರಿಕ ಕಲಹದಿಂದ 'ಮೂರನೇ ಮುಖ್ಯಮಂತ್ರಿ' ಬಂದರೂ ಅಚ್ಚರಿ ಇಲ್ಲ: ಬಿ.ವೈ ವಿಜಯೇಂದ್ರ; Video

ಯೂಟ್ಯೂಬರ್ ಧ್ರುವ್ ರಾಠಿಗೆ ಸಂಕಷ್ಟ: 8 ವರ್ಷಗಳ ಹಿಂದಿನ ಪ್ರಕರಣಕ್ಕೆ ಮರುಜೀವ; ದೆಹಲಿ ಕೋರ್ಟ್ ಸಮನ್ಸ್!