ಕರ್ನಾಟಕ

ಪ್ರಕಾಶ್ ರೈ ಬಳಿ ನಾಲ್ಕು 'ವೋಟರ್ ಐಡಿ', ನಾಮಪತ್ರ ತಿರಸ್ಕರಿಸಿ ಎಂದು ಚು.ಆಯೋಗಕ್ಕೆ ದೂರು!

Vishwanath S
ಬೆಂಗಳೂರು: ನಟ ಕಮ್ ರಾಜಕಾರಣಿ ಪ್ರಕಾಶ್ ರೈ ಅವರು ಬೆಂಗಳೂರು ಕೇಂದ್ರ ಲೋಕಸಭಾ ಕ್ಷೇತ್ರದಿಂದ ಸ್ಪರ್ಧಿಸುತ್ತಿದ್ದು ಈ ನಡುವೆ ಪ್ರಕಾಶ್ ರೈ ಅವರ ನಾಮಪತ್ರವನ್ನು ತಿರಸ್ಕರಿಸುವಂತೆ ಬೆಂಗಳೂರಿನ ಸಾಮಾಜಿಕ ಕಾರ್ಯಕರ್ತರೊಬ್ಬರು ಚುನಾವಣಾ ಆಯೋಗಕ್ಕೆ ದೂರು ನೀಡಿದ್ದಾರೆ.
ಪ್ರಕಾಶ್ ರೈ ಅವರು ಮೂರು ರಾಜ್ಯಗಳ ನಾಲ್ಕು ವೋಟರ್ ಐಡಿ ಹೊಂದಿದ್ದಾರೆ. ಈ ಮೂಲಕ ಜನರ ಹಕ್ಕುಗಳ ಪ್ರಾತಿನಿಧ್ಯ ಉಲ್ಲಂಘನೆಯಾಗದೆ. ಹೀಗಾಗಿ ಅವರ ನಾಮಪತ್ರವನ್ನು ತಿರಸ್ಕರಿಸುವಂತೆ ಸಾಮಾಜಿಕ ಕಾರ್ಯಕರ್ತ ಜಗನ್ ಕುಮಾರ್ ಎಂಬುವರು ಚುನಾವಣಾ ಆಯೋಗಕ್ಕೆ ದೂರು ನೀಡಿದ್ದಾರೆ.
ದೂರಿನಲ್ಲಿ ಪ್ರಕಾಶ್ ರೈ ಅವರು ಬೆಂಗಳೂರು ಕೇಂದ್ರ ಲೋಕಸಭೆ ಕ್ಷೇತ್ರದಿಂದ ಸ್ವತಂತ್ರ ಅಭ್ಯರ್ಥಿಯಾಗಿ ನಾಮಪತ್ರ ಸಲ್ಲಿಸಿದ್ದಾರೆ. ತಮಿಳುನಾಡಿನ ಎರಡು ಕಡೆ ಹಾಗೂ ತೆಲಂಗಾಣದಲ್ಲಿ ಪ್ರಕಾಶ್ ರೈ ಮತದಾನದ ಗುರುತಿನ ಚೀಟಿಯನ್ನು ಹೊಂದಿದ್ದಾರೆ ಇದು 1950ರ ಜನರ ಹಕ್ಕುಗಳ ಪ್ರಾತಿನಿಧ್ಯ ಕಾಯ್ದೆ ಸೆಕ್ಷನ್ 17, 18 ಮತ್ತು 31 ಸಂಪೂರ್ಣ ಉಲ್ಲಂಘನೆಯಾಗಿದೆ ಎಂದು ದೂರಿದ್ದಾರೆ.
SCROLL FOR NEXT