ತುಮಕೂರು: ಬಂಡಾಯ ಅಭ್ಯರ್ಥಿಗಳಾದ ಮುದ್ದಹನುಮೇಗೌಡ ಹಾಗೂ ರಾಜಣ್ಣ ನಾಮಪತ್ರ ಹಿಂತೆಗೆದುಕೊಂಡರಿಂದ ತುಮಕೂರು ಲೋಕಸಭಾ ಕ್ಷೇತ್ರದಲ್ಲಿ ಮಾಜಿ ಪ್ರಧಾನಿ ದೇವೇಗೌಡರ ಹಾದಿ ಸುಗಮವಾಗಿದೆ.
ಆದಾಗ್ಯೂ, ದೇವೇಗೌಡರು ಚುನಾವಣೆಯಲ್ಲಿ ಗೆದ್ದು ಬಂದರೆ ಇಡೀ ಜಿಲ್ಲೆಯನ್ನು ತಮ್ಮ ಕುಟುಂಬದ ಬಿಗಿ ಹಿಡಿತಕ್ಕೆ ತೆಗೆದುಕೊಳ್ಳುತ್ತಾರೆ ಎಂಬ ಭೀತಿ ಕೆಲ ಬಿಜೆಪಿ ಹಾಗೂ ಕಾಂಗ್ರೆಸ್ ನಾಯಕರಲ್ಲಿ ಮನೆ ಮಾಡಿದೆ.
2008ರ ಉಪಚುನಾವಣೆಯಲ್ಲಿ ದೇವೇಗೌಡರ ಸೊಸೆ ಅನಿತಾ ಕುಮಾರಸ್ವಾಮಿ ಅವರಿಂದ ಸೋಲನ್ನುಭವಿಸಿದ್ದ ಮಧುಗಿರಿ ಕ್ಷೇತ್ರದ ಮಾಜಿ ಶಾಸಕ ಕೆಎನ್ ರಾಜಣ್ಣ, ಅನಿತಾ ಕುಮಾರಸ್ವಾಮಿ ಅವಧಿ ಮುಗಿದ ನಂತರ ರಾಮನಗರಕ್ಕೆ ಕ್ಷೇತ್ರ ಬದಲಿಸಿದ್ದರಿಂದ 2013ರ ವಿಧಾನಸಭಾ ಚುನಾವಣೆಯಲ್ಲಿ ರಾಜಣ್ಣ ಗೆಲುವು ಸಾಧಿಸಿದ್ದರು.
ಆದಾಗ್ಯೂ. 2018ರ ವಿಧಾನಸಭಾ ಚುನಾವಣೆಯಲ್ಲಿ ಹೆಚ್ ಡಿ ದೇವೇಗೌಡರ ಆಪ್ತ ಒಕ್ಕಲಿಗ ಸಮುದಾಯದ ಪ್ರಭಾವಿ ಎಂ. ವಿ. ವೀರಭದ್ರಯ್ಯ ರಾಜಣ್ಣ ಅವರನ್ನು ಸೋಲಿಸಿದ್ದರು.