ಕರ್ನಾಟಕ

ಭೋಪಾಲ್ ನಲ್ಲಿ ಸಾಧ್ವಿ ಪ್ರಾಗ್ಯ ಸಿಂಗ್ ಪರ ತೇಜಸ್ವಿ ಸೂರ್ಯ ಪ್ರಚಾರ!

Sumana Upadhyaya
ಬೆಂಗಳೂರು: ಬಿಜೆಪಿ ಯುವ ಅಭ್ಯರ್ಥಿ ತೇಜಸ್ವಿ ಸೂರ್ಯ ಮಧ್ಯ ಪ್ರದೇಶದ ಭೋಪಾಲ್ ಲೋಕಸಭಾ ಕ್ಷೇತ್ರದಲ್ಲಿ ಪ್ರಾಗ್ಯ ಸಿಂಗ್ ಠಾಕೂರ್ ಪರ ಪ್ರಚಾರ ನಡೆಸಿದ್ದಾರೆ. ಕರ್ನಾಟಕದಲ್ಲಿ ಬಿಜೆಪಿಯ 27 ಸಂಸದ ಅಭ್ಯರ್ಥಿಗಳಲ್ಲಿ ಬೇರೆ ಅಭ್ಯರ್ಥಿಗಳ ಪರವಾಗಿ ಈ ಬಾರಿ ಪ್ರಚಾರ ಮಾಡಿದವರು ತೇಜಸ್ವಿ ಸೂರ್ಯ ಮಾತ್ರ.
ರಾಜ್ಯ ಬಿಜೆಪಿ ಘಟಕದ ನಾಯಕರೊಬ್ಬರು ನ್ಯೂ ಇಂಡಿಯನ್ ಎಕ್ಸ್ ಪ್ರೆಸ್ ಗೆ ಈ ಕುರಿತು ಮಾಹಿತಿ ನೀಡಿ, ಬೇರೆ ರಾಜ್ಯಗಳ ಬಿಜೆಪಿ ಅಭ್ಯರ್ಥಿಗಳ ಪ್ರಚಾರ ನಡೆಸಲು ತೇಜಸ್ವಿ ಸೂರ್ಯ ಹೊರತುಪಡಿಸಿ ಬೇರಾವ ನಾಯಕರನ್ನು ಕೂಡ ನಿಯೋಜಿಸಿಲ್ಲ. ದೆಹಲಿ ಮತ್ತು ಭೋಪಾಲ್ ನಲ್ಲಿ ಪ್ರಚಾರ ನಡೆಸಲು ತೇಜಸ್ವಿ ಸೂರ್ಯ ಅವರನ್ನು ಕೇಂದ್ರ ಸಮನ್ವಯ ಸಮಿತಿ ನೇರವಾಗಿ ಆಯ್ಕೆ ಮಾಡಿರಬೇಕು ಎಂದು ಹೇಳಿದರು.
ರಾಜ್ಯ ಕೋರ್ ಕಮಿಟಿ ಇಬ್ಬರು ನಾಯಕರನ್ನು ನಿಯೋಜಿಸುತ್ತದೆ. ಈ ಬಾರಿ ಅರವಿಂದ ಲಿಂಬಾವಳಿ ಮತ್ತು ಸಿಟಿ ರವಿ ಅವರು ದೆಹಲಿ ಮತ್ತು ವಾರಣಾಸಿಯಲ್ಲಿ ಪ್ರಚಾರ ನಡೆಸಲಿದ್ದಾರೆ ಎಂದರು.
ತಮಗೆ ಭೋಪಾಲ್ ನಲ್ಲಿ ಪ್ರಚಾರ ನಡೆಸುವಂತೆ ಕೇಂದ್ರ ನಾಯಕರು ಸೂಚಿಸಿದ್ದು ಇದು ರಾಜ್ಯ ಬಿಜೆಪಿ ನಾಯಕರಿಗೆ ಸಹ ಗೊತ್ತಿದೆ. ತಮಗೆ ಮೊದಲ ಬಾರಿಗೆ ರಾಜ್ಯ ಸಂಘಟನಾ ಕಾರ್ಯದರ್ಶಿಗಳಿಂದ ಕರೆ ಬಂದಿತ್ತು. ಕೇಂದ್ರ ನಾಯಕರಿಂದ ಯಾವುದೇ ಕೆಲಸಕ್ಕೆ ಯಾವುದೇ ಸಂದರ್ಭದಲ್ಲಿಯಾದರೂ ಕರೆ ಬರಬಹುದು, ತಮ್ಮ ಸಮಯವನ್ನು ಮುಕ್ತವಾಗಿಡಿ ಎಂದು ಹೇಳಿದ್ದರು ಎಂದು ತೇಜಸ್ವಿ ಸೂರ್ಯ ನ್ಯೂ ಇಂಡಿಯನ್ ಎಕ್ಸ್ ಪ್ರೆಸ್ ಪತ್ರಿಕೆಗೆ ತಿಳಿಸಿದ್ದಾರೆ.
ಚುನಾವಣೆ ಸಂದರ್ಭದಲ್ಲಿ ಸ್ವಯಂ ಕಾರ್ಯಕರ್ತರಾಗಿ ಮತ್ತು ಪ್ರಚಾರಕರಾಗಿ ಯಾರು ಬೇಕಾದರೂ ಕೆಲಸ ಮಾಡಬಹುದು. ಯುವ ನಾಯಕರನ್ನು ಇಂತಹ ಸಂದರ್ಭದಲ್ಲಿ ಉತ್ತೇಜಿಸಿ ಮುಂದೆ ತರುವುದು ಬಿಜೆಪಿ ಹೈಕಮಾಂಡ್ ಉದ್ದೇಶವಾಗಿದೆ ಎಂದು ರಾಜ್ಯ ಬಿಜೆಪಿ ಪ್ರಧಾನ ಕಾರ್ಯದರ್ಶಿ ಸಿ ಟಿ ರವಿ ಹೇಳಿದ್ದಾರೆ.
SCROLL FOR NEXT