ಕರ್ನಾಟಕ

ಕರ್ನಾಟಕದಲ್ಲಿ ಬಿಜೆಪಿ ಸರ್ಕಾರ ರಚನೆ ಕೇವಲ ಕನಸು: ಖರ್ಗೆ ವ್ಯಂಗ್ಯ

Raghavendra Adiga
ಕಲ್ಬುರ್ಗಿ: ಕರ್ನಾಟಕದಲ್ಲಿ ಭಾರತೀಯ ಜನತಾ ಪಕ್ಷ (ಬಿಜೆಪಿ) ಸರ್ಕಾರ ರಚನೆ ಮಾಡುವ ಕನಸು ಕಾಣುತ್ತಿದೆ, ಇದು ಎಂದಿಗೂ ನಿಜವಾಗುವುದಿಲ್ಲ ಎಂದು ಹಿರಿಯ ಕಾಂಗ್ರೆಸ್ ನಾಯಕ, ಕಲ್ಬುರ್ಗಿ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಮಲ್ಲಿಕಾರ್ಜುನ ಖರ್ಗೆ ಹೇಳಿದ್ದಾರೆ.
ಬಿಜೆಪಿ ರಾಜ್ಯಾಧ್ಯಕ್ಷ ಯಡಿಯೂರಪ್ಪ ಅವರ ಹೇಳಿಕೆಗಳನ್ನು ತಳ್ಳಿ ಹಾಕಿರುವ ಖರ್ಗೆ ಲೋಕಸಭಾ ಚುನಾವಣೆ ಫಲಿತಾಂಶದ ನಂತರ 20 ಕ್ಕೂ ಹೆಚ್ಚು ಶಾಸಕರು ಕಾಂಗ್ರೆಸ್ ನಿಂದ ಹೊರನಡೆಯಲಿದ್ದಾರೆ ಎಂಬುದು ಶುದ್ದ ಸುಳ್ಲು ಎಂದಿದ್ದಾರೆ.
"ಅವರು ಕನಸು ಕಾಣುತ್ತಿದ್ದಾರೆ. ಅವರು (ಬಿಜೆಪಿ) ಕರ್ನಾಟಕದಲ್ಲಿ ಸರ್ಕಾರ ರಚಿಸುತ್ತದೆ ಎಂಬುದು ಕೇವಲ ಕನಸು. ಅವರಿಗೆ ಸರ್ಕಾರ ರಚಿಸಲು, ಬಹುಮತ ಸಾಬಿತಿಗೆ ಅವಕಾಶ ಒದಗಿದೆ ಎನ್ನುವುದು ಸಹ ಕನಸು" ಖರ್ಗೆ ಹೇಳಿದ್ದಾರೆಸಾರ್ವತ್ರಿಕ 
ಚುನಾವಣಾ ಫಲಿತಾಂಶ ಘೋಷಣೆ ಮಾಡಿದ ಬಳಿಕ 20 ಕ್ಕೂ ಹೆಚ್ಚು "ಅತೃಪ್ತ"ಶಾಸಕರು ಕಾಂಗ್ರೆಸ್ ತೊರೆದು ಬಿಜೆಪಿ ಸೇರಲಿದ್ದಾರೆ ಎಂದು ಕಳೆದ ವಾರ ಯಡಿಯೂರಪ್ಪ ಹೇಳಿಕೊಂಡಿದ್ದರು. ಇದರ ನಡುವೆ ಕಾಂಗ್ರೆಸ್ ನಾಯಕ ಕೆ.ಸಿ. ವೇಣುಗೋಪಾಲ್ ಹಲವು ಬಿಜೆಪಿ ಶಾಸಕರು ತಮ್ಮ ಸಂಪರ್ಕದಲ್ಲಿದ್ದಾರೆ, ಮೇ 23ರ ನಂತರ ಅವರು ನಮ್ಮೊಡನೆ ಸೇರಲಿದ್ದಾರೆ ಎಂದೂ ಹೇಳಿದ್ದರು,
"ಮೊದಲನೆಯದಾಗಿ ಯಾರೂ ಚುನಾವಣೆಗೆ ಹೋಗಲು ಸಿದ್ದವಾಗಿಲ್ಲ, ಎರಡನೆಯದಾಗಿ ಮೈತ್ರಿ ಸರ್ಕಾರ ಸುಭದ್ರವಾಗಿದೆ" ಎಂದು ಖರ್ಗೆ ಹೇಳಿಕೆಯಲ್ಲಿ ತಿಳಿಸಿದ್ದಾರೆ.
ಸಮೀಕ್ಷೆ ನಿಜವಾದರೆ ಇವಿಎಂ ಮೇಲೆ ಸಂಶಯ
ಹಲವಾರು ಸಂಸ್ಥೆಗಳು ನಾನಾ ಪ್ರದೇಶಗಳ ನಾನಾ ಜನರ ಮಾತುಗಳನ್ನು ಆಧರಿಸಿ ಮತಗಟ್ಟೆ ಸಮೀಕ್ಷೆ ನಡೆಸಿದೆ. ಆದರೆ ನನಗೆ ಈ ಎಕ್ಸಿಟ್ ಪೋಲ್ ಗಳಲ್ಲಿ ನಂಬಿಕೆ ಇಲ್ಲ. ಒಂದೊಮ್ಮೆ ಈ ಎಕ್ಸಿಟ್ ಪೋಲ್ ಸತ್ಯವಾಗಿದ್ದರೆ ಆಗ ಇವಿಎಂ ಗಳ ಮೇಲೆ ಸಂದೇಹವಾಗಲಿದೆ ಎಂದು ಕರ್ಗೆ ಹೇಳಿದ್ದಾರೆ.
ಸುದ್ದಿಗಾರರೊಡನೆ ಮಾತನಾಡಿದ ಖರ್ಗೆ "ಸಮೀಕ್ಷೆಗಳು ಹೇಳುವಷ್ಟು ಕಡಿಮೆ ಸ್ಥಾನ ಕಾಂಗ್ರೆಸ್ ಗೆ ಎಂದೂ ಸಿಕ್ಕಿಲ್ಲ, ಈ ಬಾರಿ ಸಹ ಸಮೀಕ್ಷೆಗಳು ತೋರಿಸಿದ್ದಕ್ಕಿಂತ ಹೆಚ್ಚು ಸ್ಥಾನದಲ್ಲಿ ಪಕ್ಷ ಜಯಗಳಿಸಲಿದೆ" ಅವರು ಹೇಳಿದ್ದಾರೆ.
SCROLL FOR NEXT