ಅಪ್ಪನ ಖುಷಿ

ಮಗಳು ಪಾಸಾದಾಗ ಆದ ಖುಷಿ

Mainashree

ಹೌದು, ನನ್ನ ಮಗಳು ಎಸ್.ಎಸ್.ಎಲ್.ಸಿ ಪರೀಕ್ಷೆಯಲ್ಲಿ ೯.೮ ಶೇಕಡಾ ಅಂಕ ಪಡೆದಾಗ. ಪಿ.ಯು.ಸಿ ಪರೀಕ್ಷೆಯಲ್ಲಿ ಶೇಕಡಾ ೯೦ ರಷ್ಟು ಅಂಕ ಪಡೆದಾಗ ನಾನು ಭೂಮಿ ಮೇಲಿರಲಿಲ್ಲ. ನನಗಾದ ಆನಂದವನ್ನು ಮಗಳೊಂದಿಗೆ ಹಂಚಿಕೊಳ್ಳಲು ಕಾರ್ ನಲ್ಲಿ ಅವಳನ್ನು ಕೂರಿಸಿಕೊಂಡು ಊರ ತುಂಬಾ ಓಡಾಡಿಬಿಟ್ಟೆ.ಅವಳು ಕೇಳಿದ್ದನ್ನು ನೆನೆಪಿಸಿಕೊಂಡು ಅವಳು ಬೇಡಾ ಎಂದರೂ ಕೊಡಿಸಿಬಿಟ್ಟೆ. ಹೆಮ್ಮೆ ಅಲ್ಲವೇನ್ರಿ .! ನಾನು ಮಾಡದೆ ಇದ್ದದ್ದನ್ನು ನನ್ನ ಮಗಳು ಸಾಧಿಸಿದ್ದಳು.ಯಾವ ಅಪ್ಪ ತಾನೇ ಬೀಗುವುದಿಲ್ಲ ಹೇಳಿ.! ಆ ಕ್ಷಣ ನೆನಪಾದರೆ ಈಗಲೂ ರೋಮಾಂಚನವಾಗುತ್ತದೆ. ಮೈ ಮನ ತುಂಬಿ ಬರುತ್ತದೆ.ಆಕಾಶದಲ್ಲಿ ಹಾರಾಡಿದ ಅನುಭವ . ಮಾತುಗಳು ಅನುಭಾವಕ್ಕೆ ನಿಲುಕದ ಸೆಕೆಂಡುಗಳು ಅವು.  ನಮ್ಮ ಮನೆಯಲ್ಲಿ ಸಂಭ್ರಮ ಮನೆ ಮಾಡಿತ್ತು. ಆ ಸಂಭ್ರಮಕ್ಕೆ ನನ್ನ ಮಗಳು ಕಾರಣ ಆಗಿದ್ದಳು. ನನ್ನ ಮಗಳು ರಮ್ಯಾರಾಣಿ .ಅವಳು ಓದಿನಲ್ಲಿ ಅಷ್ಟೇ ಅಲ್ಲಾ ಸುಗಮ ಸಂಗೀತ ಹಾಡುತ್ತಾಳೆ. ಜಿಲ್ಲಾ ಪ್ರತಿಭಾ ಕಾರಂಜಿಯಲ್ಲಿ ಪ್ರಥಮ ಸ್ಥಾನ ಗಳಿಸಿದ್ದಳು. ರಾಜ್ಯ ಮಟ್ಟಕ್ಕೆ ಸ್ಪರ್ಧೆ ನೀಡಿದ್ದಳು. ಪೇಪರ್ನಲ್ಲಿ ಅವಳ ಹೆಸರು ಬಂದಾಗ ಗಂಟಲಲ್ಲಿ ಆವೇಗ. ತಡೆಯಲಾಗಲಿಲ್ಲ..ನನ್ನ ಕಂಗಳಲ್ಲಿ ನೀರಾಡಿತ್ತು. ನನ್ನ ಮಗಳು ಇಡೀ ಪ್ರಪಂಚವಾಗಿ ನನ್ನನ್ನು ಆವಿರ್ಭವಿಸಿಕೊಂಡಳು. ನಾನು ಅವಳ ಮುಂದೆ ಸಣ್ಣವನಂತೆ ಕೈಹಿಡಿದುಕೊಂಡು ದಿಟ್ಟಿಸಿದೆ..ಅಪ್ಪನನ್ನು ಮಗಳು ಮೀರಿಸಿದ್ದಳು. ಆ ನೆನಪು ಉಸಿರಿರುವತನಕ  ಮರೆಯಲಾಗದು.
       
ಜೆ.ಎಮ್.ರಾಜಶೇಖರ
ಹೌಸ್ ನಂಬರ್ ೩೬,
ಅಮ್ಮ , ಮೌಂಟ್ ವ್ಯೂ ಸ್ಕೂಲ್ ಸಮೀಪ , ಹುನಸಿಕಟ್ಟಿ ರಸ್ತೆ .ರಾಣೇಬೆನ್ನೂರು.
ಜಿಲ್ಲಾ ಹಾವೇರಿ.೫೮೧೧೧೫

SCROLL FOR NEXT