ಫೀಫಾ ವಿಶ್ವ ಕಪ್ 2018

ಫಿಫಾ ವಿಶ್ವಕಪ್ 2018: ಬಲಿಷ್ಠ ಬ್ರೆಜಿಲ್ ತಂಡವನ್ನು ಮಣಿಸಿ ಬೆಲ್ಜಿಯಂ ಸೆಮಿಫೈನಲ್ ಪ್ರವೇಶ

Vishwanath S
ಮಾಸ್ಕೊ (ರಷ್ಯಾ): 2018ರ ಫಿಫಾ ವಿಶ್ವಕಪ್ ಪಂದ್ಯಾವಳಿಯ ಕ್ವಾರ್ಟರ್ ಫೈನಲ್ ಪಂದ್ಯದಲ್ಲಿ ಬೆಲ್ಜಿಯಂ ತಂಡ ಬಲಿಷ್ಠ ಬ್ರೆಜಿಲ್ ತಂಡವನ್ನು ಮಣಿಸಿ ಸೆಮಿ ಫೈನಲ್ ಪ್ರವೇಶಿಸಿದೆ. 
ಪಂದ್ಯ ಆರಂಭವಾಗಿ 13ನೇ ನಿಮಿಷಕ್ಕೆ ಬೆಲ್ಜಿಯಂ ತಂಡದ ಆಟಗಾರ ಫೆರ್ನಾಂಡಿನ್ಹೊ ಮೊದಲ ಗೋಲು ಬಾರಿಸಿದರು. ನಂತರ 31ನೇ ನಿಮಿಷದಲ್ಲಿ ಕೇವಿನ್ ಡಿ ಬ್ರೂಯಿನ್ ಒಂದು ಗೋಲು ಬಾರಿಸಿದ್ದು ಬೆಲ್ಜಿಯಂ ತಂಡ ಮೊದಲಾರ್ಧದಲ್ಲಿ ಎರಡು ಗೋಲು ಬಾರಿಸಿ ಮುನ್ನಡೆ ಸಾಧಿಸಿತ್ತು. 
ಇನ್ನು ದ್ವಿತೀಯಾರ್ಧದಲ್ಲಿ ಬೆಲ್ಜಿಯಂ ತಂಡಕ್ಕೆ ಗೋಲು ಬಾರಿಸಲು ಸಾಧ್ಯವಾಗಲಿಲ್ಲ. ಈ ಮಧ್ಯೆ ಬ್ರೆಜಿಲ್ ತಂಡದ ರೆನಾಟೋ ಅಗಸ್ಟೋ 76ನೇ ನಿಮಿಷದಲ್ಲಿ ಗೋಲು ಬಾರಿಸಿದರು. ಕೊನೆಗೆ ಬೆಲ್ಜಿಯಂ ತಂಡ 2-1 ಗೋಲುಗಳಿಂದ ಸೆಮಿಫೈನಲ್ ಪ್ರವೇಶಿಸಿದೆ. 
ಇನ್ನು ಸೆಮಿಫೈನಲ್ ಪಂದ್ಯದಲ್ಲಿ ಬೆಲ್ಜಿಯಂ ತಂಡ ಫ್ರಾನ್ಸ್ ವಿರುದ್ಧ ಸೆಣೆಸಲಿದೆ.
SCROLL FOR NEXT