ಇಂಗ್ಲೆಂಡ್ ಮಣಿಸಿದ ಬೆಲ್ಜಿಯಂಗೆ ಮೂರನೇ ಸ್ಥಾನ
ಮಾಸ್ಕೋ: ಫೀಫಾ ವಿಶ್ವಕಪ್ 2018ರ ಟೂರ್ನಿಯಲ್ಲಿ ಇಂಗ್ಲೆಂಡ್ ತಂಡವನ್ನು ಮಣಿಲುವ ಮೂಲರ ಬೆಲ್ಜಿಯಂ ತಂಡ ಟೂರ್ನಿಗೆ ಗೆಲುವಿನ ವಿದಾಯ ಹೇಳಿದೆ.
ಟೂರ್ನಿಯಲ್ಲಿ ಮೂರನೇ ಸ್ಥಾನಕ್ಕಾಗಿ ನಿನ್ನೆ ನಡೆದ ಇಂಗ್ಲೆಂಡ್ ವಿರುದ್ಧದ ಪಂದ್ಯದಲ್ಲಿ ಇಂಗ್ಲೆಂಡ್ ವಿರುದ್ಧ ಬೆಲ್ಜಿಯಂ 2-0 ಅಂತರದ ಭರ್ಜರಿ ಜಯ ಸಾಧಿಸಿತು. ಗೋಲು ಗಳಿಸಲು ಸಿಕ್ಕ ಸುವರ್ಣ ಅವಕಾಶಗಳನ್ನು ಕೈ ಚೆಲ್ಲಿದ ಇಂಗ್ಲೆಂಡ್ ಫಿಫಾ ವಿಶ್ವಕಪ್ ಟೂರ್ನಿಯ ಮೂರನೇ ಸ್ಥಾನಕ್ಕೆ ನಡೆದ ಪಂದ್ಯದಲ್ಲಿ ಪರಾಭವಗೊಂಡು ನಾಲ್ಕನೇ ಸ್ಥಾನಿಯಾಗಿ ಉಳಿಯಿತು.
ಪಂದ್ಯ ಆರಂಭವಾದ ಕೇವಲ ನಾಲ್ಕನೇ ನಿಮಿಷದಲ್ಲೇ ಬೆಲ್ಜಿಯಂ ತಂಡ ಗೋಲು ಭಾರಿಸುವ ಮೂಲಕ ಶುಭಾರಂಭ ಮಾಡಿತು. ಬೆಲ್ಜಿಯಂ ತಂಡದ ಥಾಮಸ್ ಮ್ಯುನಿಯರ್ 4ನೇ ನಿಮಿಷದಲ್ಲಿ ಗೋಲು ದಾಖಲಿಸಿದರು, ಆ ಬಳಿಕ ಪಂದ್ಯದ 82 ನೇ ನಿಮಿಷದಲ್ಲಿ ಮತ್ತೆ ಬೆಲ್ಜಿಯಂ ತಂಡ ಈಡೆನ್ ಹೆಜಾರ್ಡ್ ಗೋಲು ದಾಖಲಿಸುವ ಮೂಲಕ ಬೆಲ್ಜಿಯಂ ತಂಡದ ಗೆಲುವನ್ನು ಖಚಿತ ಪಡಿಸಿದರು. ಆಂತಿಮವಾಗಿ ಪಂದ್ಯದ ನಿಗದಿತ ಅವಧಿ ಮುಕ್ತಾಯಕ್ಕೆ ಬೆಲ್ಜಿಯಂ ತಂಡ 2-0 ಅಂತರದ ಭರ್ಜರಿ ಜಯ ಸಾಧಿಸಿತು.
ಅಲ್ಲದೆ ಟೂರ್ನಿಯಲ್ಲಿ ಮೂರನೇ ಸ್ಥಾನಿಯಾಗಿ ಟೂರ್ನಿಯಿಂದ ನಿರ್ಗಮಿಸಿತು.
ವಿಶ್ವಕಪ್ ಇತಿಹಾಸದಲ್ಲಿ ಬೆಲ್ಜಿಯಂನ ಅತ್ಯುತ್ತಮ ಪ್ರದರ್ಶನ
ಇಂಗ್ಲೆಂಡ್ ವಿರುದ್ಧ ಸಂಪೂರ್ಣ ನಿಯಂತ್ರಣ ಸಾಧಿಸಿದ ಬೆಲ್ಜಿಯಂ 2-0 ಗೋಲುಗಳ ಅಂತರದಿಂದ ಜಯಿಸಿತು. ಈ ಮೂಲಕ ತೃತೀಯ ಸ್ಥಾನಿಯಾಗಿ ತನ್ನ 2018ರ ಫಿಫಾ ಅಭಿಯಾನಕ್ಕೆ ಅಂತ್ಯ ಹಾಡಿತು. ಇದು ವಿಶ್ವಕಪ್ ಇತಿಹಾಸದಲ್ಲಿ ಬೆಲ್ಜಿಯಂ ತೋರಿದ ಅತ್ಯುತ್ತಮ ಪ್ರದರ್ಶನವಾಗಿದೆ. ಬೆಲ್ಜಿಯಂ ಪರ ಮೌನೇರ್ 4ನೇ ಹಾಗೂ ಹಜರ್ಡ್ 82ನೇನಿಮಿಷದಲ್ಲಿ ಗೋಲು ದಾಖಲಿಸಿತಂಡದ ಗೆಲುವಿನ ರುವಾರಿಯಾದರು. ಇಂಗ್ಲೆಂಡ್ ತಂಡದ ಪರ ಸ್ಟಾರ್ ಆಟಗಾರ ಹ್ಯಾರಿಕೇನ್ ಹಾಗೂ ಇತರೆ ಆಟಗಾರರನಿರೀಕ್ಷಿತ ಪ್ರದರ್ಶನ ನೀಡದಿರುವುದು ತಂಡದ ಸೋಲಿಗೆ ಕಾರಣವಾಯಿತು.