ಫೀಫಾ ವಿಶ್ವ ಕಪ್ 2018

ಸಿಕ್ಕ ಅವಕಾಶ ಹಾಳು ಮಾಡಿಕೊಂಡೆವು, ಮತ್ತೆ ಇಂತಹ ಅವಕಾಶ ಸಿಗದಿರಬಹುದು: ಕ್ರೊವೇಷಿಯಾ

Srinivasamurthy VN
ಮಾಸ್ಕೋ: ಫೀಫಾ ವಿಶ್ವಕಪ್ ಟೂರ್ನಿಯ ಫೈನಲ್ ಪಂದ್ಯದಲ್ಲಿ ಫ್ರಾನ್ಸ್ ವಿರುದ್ಧ ಸೋತ ಕ್ರೊವೇಷಿಯಾ ಇದೀಗ ಮರುಕ ಪಡುತ್ತಿದ್ದು, ಮತ್ತೆ ಇಂತಹ ಅವಕಾಶ ಸಿಗದೇ ಇರಬಹುದು ಎಂದು ಹೇಳಿಕೊಂಡಿದೆ.
ಪಂದ್ಯ ಮುಕ್ತಾಯದ ಬಳಿಕ ಮಾತನಾಡಿದ ಕ್ರೊವೇಷಿಯಾ ತಂಡದ ನಾಯಕ ಲೂಕಾ ಮೋಡ್ರಿಕ್, ವಿಶ್ವಕಪ್ ಗೆ ನಾವು ತುಂಬಾ ಹತ್ತಿರವಾಗಿದ್ದೆವು. ಆದರೆ ಅಂತಿಮ ಕ್ಷಣದಲ್ಲಿ ಕೈಗೆ ಸಿಕ್ಕ ಅವಕಾಶವನ್ನು ಹಾಳುಮಾಡಿಕೊಂಡೆವು. ಮತ್ತೆ ಇಂತಹ ಅವಕಾಶ ಸಿಗದೇ ಇರಬಹುದು. ನಾವು ನಿಜಕ್ಕೂ ಪ್ರಸ್ತುತ ದೊರೆತಿರುವುದಕ್ಕಿಂತ ಹೆಚ್ಚಿನದಕ್ಕೆ ಅರ್ಹರಾಗಿದ್ದೆವು ಎಂದು ನಾಯಕ ಲೂಕಾ ಹೇಳಿದ್ದಾರೆ.
ಇನ್ನು ಟೂರ್ನಿಯಲ್ಲಿ ಅತ್ಯುತ್ತಮ ಪ್ರದರ್ಶನ ತೋರಿದ ಲೂಕಾ ಮೋಡ್ರಿಕ್ ಗೆ ಗೋಲ್ಡನ್ ಬಾಲ್ ನೀಡಿ ಗೌರವಿಸಲಾಯಿತು. 
ವಿಶ್ವಕಪ್ ನಲ್ಲಿ ಎರಡನೇ ಬಾರಿಗೆ ಫ್ರಾನ್ಸ್ ವಿರುದ್ಧ ಮಂಡಿಯೂರಿದ ಕ್ರೊವೇಷಿಯಾ
ಇನ್ನು ಇದೇ ಫ್ರಾನ್ಸ್ ವಿರುದ್ಧ ವಿಶ್ವಕಪ್ ನಲ್ಲಿ ಕ್ರೊವೇಷಿಯಾ ಎರಡೆರಡು ಬಾರಿ ಸೋಲು ಕಂಡಿದೆ. ಈ ಹಿಂದೆ 1998ರಲ್ಲಿ ವಿಶ್ವಕಪ್ ಟೂರ್ನಿಗೆ ಪದಾರ್ಪಣೆ ಮಾಡಿದ್ದ ಕ್ರೊವೇಷಿಯಾ ಸೆಮಿಫೈನಲ್ ಹಂತ ತಲುಪಿತ್ತು. ಅಂದು ಸೆಮಿಫೈನಲ್ ನಲ್ಲಿ ಇದೇ ಫ್ರಾನ್ಸ್ ವಿರುದ್ಧ ಸೋತು ಕ್ರೊವೇಷಿಯಾ ಟೂರ್ನಿಯಿಂದ ಹೊರಬಿದ್ದಿತ್ತು. ಇದೀಗ ಎರಡನೇ ಬಾರಿಗೆ ಸೋಲು ಕಂಡಿದ್ದು. ಫೈನಲ್ ನಲ್ಲಿ ಸೋತು ವಿಶ್ವಕಪ್ ಆಸೆಯನ್ನು ಮತ್ತೆ ಕಳೆದುಕೊಂಡಿದೆ.
SCROLL FOR NEXT