ಕ್ರಿಸ್ಟಿಯಾನೊ ರೊನಾಲ್ಡ್ 
ಫೀಫಾ ವಿಶ್ವ ಕಪ್ 2018

ಫಿಫಾ ವಿಶ್ವಕಪ್ ಪುಟ್ಬಾಲ್: ಟಿಮೊ ವಾರ್ನರ್, ರೊನಾಲ್ಡೊ ಸೇರಿ ಐವರು ಸ್ಟಾರ್ ಆಟಗಾರರು ಇವರು

: 2018 ಫಿಫಾ ವಿಶ್ವಕಪ್ ಪುಟ್ಬಾಲ್ ಟೂರ್ನಿಗೆ ನಾಳೆ ಚಾಲನೆ ದೊರೆಯಲಿದೆ. ಈ ಬಾರಿಯ ವಿಶ್ವಕಪ್ ನಲ್ಲಿ ಐವರು ಪೆನಾಲ್ಟಿ ಬಾಕ್ಸ್ ಆಟಗಾರರು ಅದ್ಬುತ ಪ್ರದರ್ಶನ ತೋರಲು ಕಾತುರರಾಗಿದ್ದಾರೆ.

ಸೆಂಟ್ ಪಿಟರ್ಸ್ ಬರ್ಗ್: 2018 ಫಿಫಾ ವಿಶ್ವಕಪ್ ಪುಟ್ಬಾಲ್ ಟೂರ್ನಿಗೆ ನಾಳೆ ಚಾಲನೆ ದೊರೆಯಲಿದೆ.  ಈ ಬಾರಿಯ ವಿಶ್ವಕಪ್ ನಲ್ಲಿ  ಐವರು ಪೆನಾಲ್ಟಿ ಬಾಕ್ಸ್ ಆಟಗಾರರು ಅದ್ಬುತ ಪ್ರದರ್ಶನ ತೋರಲು ಕಾತುರರಾಗಿದ್ದಾರೆ.
ಈ ಆಟಗಾರರು ಪಂದ್ಯದ ಗತಿಯನ್ನೇ ಬದಲಾಯಿಸುವಂತಹ ಶಕ್ತಿ ಹೊಂದಿದ್ದು, ಇವರ ಆಟ ವೀಕ್ಷಿಸಲು ಪ್ರಪಂಚದಾದ್ಯಂತ ಸಾವಿರಾರು ಪುಟ್ಬಾಲ್ ಪ್ರೇಮಿಗಳು ಕಾಯುತ್ತಿದ್ದಾರೆ. ಅಂತಹ ಆಟಗಾರರ ಬಗ್ಗೆ ಒಂದಿಷ್ಟು ಕಿರುಪರಿಚಯ.
ಟಿಮೊ ವಾರ್ನರ್: ಜರ್ಮನಿಯ ಮಿರೊಸ್ಲಾವ ಕ್ಲೊಸೆ 2014ರ ಅಂತಾರಾಷ್ಟ್ರೀಯ ಪುಟ್ಬಾಲ್  ಟೂರ್ನಿಯ ನಂತರ  ನಿವೃತ್ತಿಯಾದ ನಂತರ ಆ ಸ್ಥಾನವನ್ನು ವಾರ್ನರ್ ತುಂಬುತ್ತಿದ್ದಾರೆ.  ಕಳೆದ ಆವೃತ್ತಿಯಲ್ಲಿ ಅವರು 21 ಗೋಲುಗಳನ್ನು ಪಡೆದುಕೊಂಡಿದ್ದಾರೆ. 22 ವರ್ಷದ  ವಾರ್ನರ್  ಮೊದಲ ಟೂರ್ನಮೆಂಟಿನಲ್ಲಿಯೇ  ಅದ್ಬುತ ಪ್ರದರ್ಶನ ತೋರುವ ಉತ್ಸಾಹದಲ್ಲಿದ್ದಾರೆ.
ಗ್ಯಾಬ್ರಿಲ್ ಜಿಸಸ್: ಮುಂದಿನ ಸ್ಥಾನದಲ್ಲಿ ಭ್ರಜಿಲ್ ತಂಡಕ್ಕೆ ಪ್ರತಿಭಾವಂತ ಆಟಗಾರರ ಕೊರತೆ ಇದೆ. ಆದರೆ, ಫೆನಾಲ್ಟಿ ಪ್ರದೇಶದಲ್ಲಿ ಕ್ಷಿಪ್ರ ಗತಿಯಲ್ಲಿ ಚಿಂತನೆ ,ಆಟ ಪೂರ್ಣಗೊಳಿಸುವ ಕಾರಣ ಜಿಸಸ್ ಈ ಮಾರ್ಗವನ್ನು ಮುನ್ನುಗಿಸುವ ನಿರೀಕ್ಷೆ ಇದೆ.
ಹ್ಯಾರಿ ಕ್ಯಾನೆ: ಇಂಗ್ಲೆಂಡ್ ತಂಡದ ನಾಯಕರೆಂದು ಹ್ಯಾರಿಕ್ಯಾನೆ ಕಳೆದ ತಿಂಗಳಷ್ಟೇ ಅಧಿಕೃತವಾಗಿ ಘೋಷಿಸಲಾಗಿದೆ. ಕಳೆದ ಅವಧಿಯ ಟೊಟೆಹೆಮ್ ಚಾಂಫಿಯನ್ ಲೀಗ್ ನಲ್ಲಿ ಏಳು ಪಂದ್ಯಗಳಲ್ಲಿ ಏಳು ಗೋಲು ಗಳಿಸಿದ್ದರು. ಒಂದು ವೇಳೆ ಇಂಗ್ಲೆಂಡ್ ಅವಕಾಶ ಮಾಡಿಕೊಟ್ಟರೆ ಕ್ಯಾನೆ ನೆಟ್ ನ್ನು ಕಂಡುಕೊಳ್ಳಲಿದ್ದಾರೆ.
ಕ್ರಿಸ್ಟಿಯಾನೊ ರೊನಾಲ್ಡೊ: ಪೋರ್ಚಗಲ್ ತಂಡದ ಪ್ರಮುಖ ಸ್ಟ್ರೈಕರ್ ಆಗಿರುವ ರೊನಾಲ್ಡೊ, ಕಾಲು ಹಾಗೂ ಗಾಳಿಯಲ್ಲಿ ಚೆಂಡನ್ನು ಹೊತ್ತೊಯ್ಯುವಲ್ಲಿ ಅಪಾಯಕಾರಿ ಆಟಗಾರರಾಗಿದ್ದಾರೆ. 33 ವರ್ಷದ ಈ ಆಟಗಾರ 50  ಪಂದ್ಯಗಳಲ್ಲಿ 50 ಗೋಲು ಗಳಿಸಿದ್ದಾರೆ.
ಇಯಾಗೊ ಆಸ್ ಪಾಸ್:  ಡಿಯಾಗೊ ಕೊಸ್ಟಾ ಸ್ಪೇನ್ ತಂಡವನ್ನು ಮುನ್ನಡೆಸುವ ನೆಚ್ಚಿನ ಆಟಗಾರರಾಗಿದ್ದರೆ, ಆಸ್ ಪಾಸ್, ಆರಂಭದಲ್ಲಿ ಚೆಂಡನ್ನು ಪುಸ್ ಮಾಡುವುದರಲ್ಲಿ ನಿಸ್ಸಿಮರಾಗಿದ್ದಾರೆ. ಕಳೆದ ವಾರ ನಡೆದ ಟ್ಯೂನಿಸಿಯಾ ವಿರುದ್ಧದ  ಪಂದ್ಯದಲ್ಲಿ ಉತ್ತಮ ಆಟ ಪ್ರದರ್ಶಿಸಿದ್ದರು.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

GST 2.0: ಶಾಂಪುವಿನಿಂದ ಸಣ್ಣ ಕಾರುಗಳವರೆಗೆ, ಯಾವುದು ಅಗ್ಗ ಮತ್ತು ದುಬಾರಿ?

56th GST Council: ಇನ್ನು ಶೇ.5 ಮತ್ತು ಶೇ.18 ಎರಡು ಹಂತದ ತೆರಿಗೆ, ಸೆ.22ರಂದು ಜಾರಿ

GST 2.0: ಯಾವುದಕ್ಕೆ ತೆರಿಗೆ, ಯಾವುದಕ್ಕೆ ವಿನಾಯಿತಿ ಇಲ್ಲಿದೆ ಮಾಹಿತಿ...

ಮುಖ್ಯಮಂತ್ರಿ ಹುದ್ದೆಯಿಂದ ಫಡ್ನವೀಸ್ ಗೆ ಕೊಕ್; ರಾಷ್ಟ್ರ ರಾಜಕಾರಣಕ್ಕೆ ಮಹಾರಾಷ್ಟ್ರ ಸಿಎಂ?; ಬಿಜೆಪಿ ರಾಷ್ಟ್ರಾಧ್ಯಕ್ಷ ರೇಸ್ ನಲ್ಲಿ ರೂಪಾಲಾ!

ದೇಶವಾಸಿಗಳಿಗೆ ಗುಡ್ ನ್ಯೂಸ್: GST ಸ್ಲ್ಯಾಬ್‌ಗಳಲ್ಲಿ ಮಹತ್ವದ ಬದಲಾವಣೆ; ಇನ್ಮುಂದೆ ಎರಡೇ ತೆರಿಗೆ

SCROLL FOR NEXT