ವಾಷಿಂಗ್ ಟನ್ : ರಷ್ಯಾದಲ್ಲಿ ಒಂದು ತಿಂಗಳ ಕಾಲ ನಡೆಯುತ್ತಿರುವ ಫಿಫಾ ವಿಶ್ವಕಪ್ ಪಂದ್ಯಗಳ ಮೇಲೆ ಉಗ್ರರು ದಾಳಿ ನಡೆಸುವ ಸಾಧ್ಯತೆ ಇದೆ ಎಂದು ಅಮೆರಿಕಾ ಸರ್ಕಾರ ಅಲ್ಲಿನ ಜನತೆಗೆ ಎಚ್ಚರಿಕೆ ಸಂದೇಶ ನೀಡಿದೆ. ಆದರೆ, ಯಾವುದೇ ಸ್ಪಷ್ಟ ಬೆದರಿಕೆಯ ಮಾಹಿತಿಯನ್ನು ತಿಳಿಸಿಲ್ಲ.
ದೊಡ್ಡ ಮಟ್ಟದ ಅಂತಾರಾಷ್ಟ್ರೀಯ ಕಾರ್ಯಕ್ರಮವಾಗಿರುವ ಫಿಫಾ ವಿಶ್ವಕಪ್ ಉಗ್ರರ ದಾಳಿಯನ್ನು ಆಕರ್ಷಿಸುತ್ತಿದೆ ಎಂದು ಅಮೆರಿಕಾ ರಾಜ್ಯ ಸರ್ಕಾರ , ರಷ್ಯಾಗೆ ಹೋಗಬಯಸುವ ಪ್ರವಾಸಿಗರಿಗೆ ಸಲಹೆ ನೀಡಿದೆ.
ಪುಬ್ಬಾಲ್ ಕ್ರೀಡಾಂಗಣ, ಅಭಿಮಾನಿಗಳು ವಿಜಯೋತ್ಸಾವ ನಡೆಸುವ ಪ್ರದೇಶಗಳು, ಪ್ರವಾಸೋದ್ಯಮ ಸ್ಥಳಗಳು, ಸಾರಿಗೆ ನಿಲ್ದಾಣಗಳು ಮತ್ತಿತರ ಸಾರ್ವಜನಿಕ ಸ್ಥಳಗಳ ಮೇಲೆ ಉಗ್ರರು ದಾಳಿ ನಡೆಸುವ ಸಾಧ್ಯತೆ ಇರುವುದರಿಂದ ಇಂತಹ ಪ್ರದೇಶಗಳಲ್ಲಿ ಹೆಚ್ಚಿನ ಬಂದೋಬಸ್ತ್ ನಿಯೋಜಿಸುವಂತೆ ಅಮೆರಿಕಾ ಸರ್ಕಾರ ಹೇಳಿದೆ.
ಉಗ್ರರ ಬೆದರಿಕೆ ಹಿನ್ನೆಲೆಯಲ್ಲಿ ಅಮೆರಿಕಾದ ಜನತೆ ರಷ್ಯಾ ಪ್ರಯಾಣ ಕುರಿತು ಪುನರ್ ಪರಿಶೀಲಿಸಬೇಕಾಗಿದೆ ಎಂದು ಅಮೆರಿಕಾ ರಾಜ್ಯಸರ್ಕಾರ ಸಲಹೆ ಮಾಡಿದೆ.