ಫೀಫಾ ವಿಶ್ವ ಕಪ್ 2018

ಫಿಫಾ ವಿಶ್ವಕಪ್: ಕಡೆ ಕ್ಷಣದ ಟ್ವಿಸ್ಟ್, ಚಾಂಪಿಯನ್ ಜರ್ಮನಿ ವಿರುದ್ಧ ಕೊರಿಯಾಗೆ ಜಯ

Raghavendra Adiga
ಕಝಾನ್ ಅರೇನಾ (ರಶ್ಯಾ): ವಿಶ್ವ ಪ್ರಸಿದ್ಧ ಫಿಪಾ ವಿಶ್ವಕಪ್ ಫುಟ್ಬಾಲ್ ಎಫ್ ಗುಂಪಿನ ಪಂದ್ಯದಲ್ಲಿ ದಕ್ಷಿಣ ಕೊರಿಯಾ ಬಲಿಷ್ಠ ಜರ್ಮನಿ ವಿರುದ್ಧ 2-0 ಅಂತರದ ಜಯ ದಾಖಲಿಸಿದೆ. ಪಂದ್ಯದ ಕಡೆ ಕ್ಷಣದಲ್ಲಿ ಗೋಲು ಗಳಿಸಿಕೊಳ್ಳುವ ಮೂಲಕ ಕೊರಿಯಾ ಜರ್ಮನಿಯನ್ನು ಮಣಿಸಿ ಟೂರ್ನಿಯಿಂದ ಹೊರದಬ್ಬಿದೆ.
ಹಾಲಿ ಚಾಂಪಿಯನ್ ಜರ್ಮನಿಗೆ ಈ ಸಾಲಿನ ವಿಶ್ವಕಪ್ ನಾಕೌಟ್ ಹಂತಕ್ಕೆ ಸಹ ಪ್ರವೇಶಿಸಲಾಗದೆ ಹೋಗಿರುವುದು ಬಹುದೊಡ್ಡ ಆಘಾತ ತಂದಿದೆ.
ಪಂದ್ಯದುದ್ದಕ್ಕೆ ಕೆಟ್ಟ ಪ್ರದರ್ಶನ ನೀಡಿದ್ದ ಜರ್ಮನಿ ಆಟಗಾರರು ತಮಗೆ ಸಿಕ್ಕಿದ್ದ ಹಲವು ಅದ್ಭುತ ಅವಕಾಶಗಳನ್ನು ಕೈಚೆಲ್ಲಿದ್ದರು. ಆದರೆ ಕೊರಿಯಾ ಕಡೆ ಕ್ಷಣಗಳಲ್ಲಿ ಎರಡು ಗೋಲುಗಳನ್ನು ಗಳಿಸುವುದರೊಡನೆ ಉತ್ತಮ ಸಾಧನೆ ಮಾಡಿದೆ.
ಕೊರಿಯಾದ ಕಿಮ್ ಯೊಂಗ್ ಗೊನ್ (90+2) ಹಾಗೂ ಸೊನ್ ಹ್ಯೂಂಗ್ ಮಿನ್ (90+6) ತಲಾ ಒಂದೊಂದು ಗೋಲುಗಳನ್ನು ಗಳಿಸಿದ್ದಾರೆ.
ಪ್ರಬಲ ಜರ್ಮನಿ ನಂಬರ್ ಒನ್ ಶ್ರೇಯಾಂಕದೊಂದಿಗೆ ಫಿಫಾ ವಿಶ್ವಕಪ್ ಸರಣಿಯನ್ನು ಪ್ರವೇಶಿಸಿದ್ದು ತನ್ನ ಮೊದಲ ಪಂದ್ಯದಲ್ಲಿ ಮೆಕ್ಸಿಕೊ ವಿರುದ್ಧ ಸೋತಿತ್ತು. ಎರಡನೇ ಪಂದ್ಯ ಸ್ವೀಡನ್ ವಿರುದ್ಧ ನಡೆದಿದ್ದು ಅದರಲ್ಲಿ ಜಯ ಸಾಧಿಸಿದ್ದ ತಂಡ ನಿರ್ಣಾಯಕವಾಗಿದ್ದ ಮೂರನೇ ಪಂದ್ಯ ಕೈಚೆಲ್ಲುವ ಮೂಲಕ ಸರಣಿಯಿಂದ ಹೊರನಡೆದಿದೆ.
ಎಫ್ ಗುಂಪಿನಲ್ಲಿ ಸ್ವೀಡನ್ ಹಾಗೂ ಮೆಕ್ಸಿಕೊ ತಂಡಗಳು ತಲಾ ಎರಡು ಗೆಲುವುಗಳೊಂದಿಗೆ ಮುಂದಿನ ಹಂತಕ್ಕೆ ಪ್ರವೇಶ ಗಿಟ್ಟಿಸಿಕೊಂಡಿವೆ.
SCROLL FOR NEXT