ಟ್ಯುನಿಷಿಯಾ ಮತ್ತು ಪನಾಮಾ ಹೋರಾಟ 
ಫೀಫಾ ವಿಶ್ವ ಕಪ್ 2018

ಟ್ಯುನಿಷಿಯಾ ದಾಖಲೆ, 40 ವರ್ಷಗಳ ಬಳಿಕ ಫೀಫಾ ವಿಶ್ವಕಪ್ ನಲ್ಲಿ ಮೊದಲ ಗೆಲುವು!

ಫೀಫಾ ವಿಶ್ವಕಪ್ ಟೂರ್ನಿಯ ಗುರುವಾರ ನಡೆದ ಜಿ ಗುಂಪಿನ ಪಂದ್ಯದಲ್ಲಿ ಟ್ಯುನಿಷಿಯಾ ತಂಡ ವಿಶೇಷ ದಾಖಲೆಯೊಂದಕ್ಕೆ ಸಾಕ್ಷಿಯಾಗಿದ್ದು, ವಿಶ್ವಕಪ್ ಟೂರ್ನಿಯಲ್ಲಿ ಬರೊಬ್ಬರಿ 40 ವರ್ಷಗಳ ಬಳಿಕ ಮೊದಲ ಗೆಲುವು ಸಾಧಿಸಿದೆ.

ಮಾಸ್ಕೋ: ಫೀಫಾ ವಿಶ್ವಕಪ್ ಟೂರ್ನಿಯ ಗುರುವಾರ ನಡೆದ ಜಿ ಗುಂಪಿನ ಪಂದ್ಯದಲ್ಲಿ ಟ್ಯುನಿಷಿಯಾ ತಂಡ ವಿಶೇಷ ದಾಖಲೆಯೊಂದಕ್ಕೆ ಸಾಕ್ಷಿಯಾಗಿದ್ದು, ವಿಶ್ವಕಪ್ ಟೂರ್ನಿಯಲ್ಲಿ ಬರೊಬ್ಬರಿ 40 ವರ್ಷಗಳ ಬಳಿಕ ಮೊದಲ ಗೆಲುವು ಸಾಧಿಸಿದೆ.
ಗುರುವಾರ ನಡೆದ ಪನಾಮಾ ವಿರುದ್ಧದ ಪಂದ್ಯದಲ್ಲಿ ಟ್ಯುನಿಷಿಯಾ 2-1 ಅಂತರದ ಗೋಲುಗಳ ಜಯ ಸಾಧಿಸುವ ಮೂಲಕ ವಿಶ್ವಕಪ್ ನಲ್ಲಿನ ತನ್ನ ಸುಧೀರ್ಘ ಗೆಲುವಿನ ಬರಕ್ಕೆ ಅಂತ್ಯ ಹಾಡಿಗೆ. 1978ರಲ್ಲಿ ನಡೆದಿದ್ದ ವಿಶ್ವಕಪ್ ಟೂರ್ನಿಯಲ್ಲಿ ಟ್ಯುನಿಷಿಯಾ ಅರ್ಜೆಂಟೀನಾ ವಿರುದ್ಥ ತನ್ನ ಮೊದಲ ಗೆಲುವು ಸಾಧಿಸಿತ್ತು. ಆ ಬಳಿಕ ವಿಶ್ವಕಪ್ ಟೂರ್ನಿಯಲ್ಲಿ ಟ್ಯುನಿಷಿಯಾಗೆ ಗೆಲುವು ಎಂಬುದು ಕಬ್ಬಿಣದ ಕಡಲೆಯಾಗಿತ್ತು.
ಇದೀಗ ತನ್ನ ಗೆಲುವಿನ ಸುಧೀರ್ಘ ಬರ ನೀಗಿಸಿಕೊಂಡಿರುವ ಟ್ಯುನಿಷಿಯಾ ಪನಾಮವನ್ನು 2-1 ಅಂತರದಲ್ಲಿ ಮಣಿಸಿ ವಿಶ್ವಕಪ್ ಟೂರ್ನಿಯಿಂದ ಹೊರ ನಡೆದಿದೆ.
ವಿಶ್ವಕಪ್ ನಲ್ಲಿ 2500ನೇ ಗೋಲು ದಾಖಲಿಸಿದ ಫಕ್ರೆದಿನ್ ಬೆನ್ ಯುಸೇಫ್
ಇನ್ನು ಇದೇ ಟ್ಯುನಿಷಿಯಾ ಮತ್ತೊಂದು ದಾಖಲೆ ನಿರ್ಮಾಣ ಮಾಡಿದ್ದು, ವಿಶ್ವಕಪ್ ಟೂರ್ನಿಯಲ್ಲಿ 2500ನೇ ಗೋಲು ದಾಖಲಿಸಿದ ಕೀರ್ತಿಗೂ ಟ್ಯುನಿಷಿಯಾದ ಸ್ಟ್ರೈಕರ್ ಫಕ್ರೆದಿನ್ ಬೆನ್ ಯುಸೇಫ್ ಪಾತ್ರರಾದರು. ಪಂದ್ಯದ 51ನೇ ನಿಮಿಷದಲ್ಲಿ ಫಕ್ರೆದಿನ್ ಬೆನ್ ಯುಸೇಫ್ ಟ್ಯುನಿಷಿಯಾ ಪರ ಮೊದಲ ಗೋಲು ದಾಖಲಿಸಿದ್ದಲ್ಲದೆ ಪನಾಮಾ ವಿರುದ್ಧ ತಂಡ ಸಮಬಲ ಸಾಧಿಸುವಂತೆ ಮಾಡಿದ್ದರು.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

ಬಿಜೆಪಿ ಸಂಸದೀಯ ಮಂಡಳಿಯಲ್ಲಿ ಮಹತ್ತರ ಬದಲಾವಣೆ ಸಾಧ್ಯತೆ; ನಾಲ್ವರು ಮುಖ್ಯಮಂತ್ರಿಗಳಿಗೆ ಸ್ಥಾನ?

ಇರಾನ್‌ ತೈಲ ವಹಿವಾಟಿಗೆ ಅಮೆರಿಕಾ ಬ್ರೇಕ್: ಭಾರತದ 4 ಕಂಪನಿಗಳು ಕಪ್ಪುಪಟ್ಟಿಗೆ, 3 ಪ್ರಜೆಗಳ ಮೇಲೂ ನಿರ್ಬಂಧ..!

"ಮದುವೆ ಅಂದ್ರೆ ಗುಲಾಮಗಿರಿಯಲ್ಲ, ಮನೆಗೆಲಸ ಮಾಡು-ಅತ್ತೆ-ಮಾವನ ನೋಡ್ಕೋ ಅನ್ನೋಕೆ ಗಂಡನಿಗೆ ಹಕ್ಕಿಲ್ಲ": ಹೈಕೋರ್ಟ್ ಮಹತ್ವದ ತೀರ್ಪು..!

ಬಿಡದಿ ಟೌನ್‌ಶಿಪ್‌ ಯೋಜನೆ: ರೈತರ ಭೂಮಿ ಕಸಿಯಲ್ಲ, denotification ಮಾಡಲ್ಲ- ಸಿಎಂ ಡಿಕೆ. ಶಿವಕುಮಾರ್ ಸ್ಪಷ್ಟನೆ

Operation Sindoor; Kirana Hills ಪರಮಾಣು ನೆಲೆಗೆ ಅಪ್ಪಳಿಸಿದ ಭಾರತದ ಡ್ರೋನ್? ಬೆಚ್ಚಿಬಿದ್ದ ಪಾಕಿಸ್ತಾನ..! Indian Army ಹೇಳಿದ್ದೇನು?