ಫೀಫಾ ವಿಶ್ವ ಕಪ್ 2018

ರಷ್ಯಾ ಹುಡುಗಿಯರ ಜತೆ ತಿರುಗಾಡಬೇಡಿ, ಆಟಗಾರರಿಗೆ ಕೋಚ್ ಎಚ್ಚರಿಕೆ

Vishwanath S
ಅಬುಜಾ(ನೈಜೀರಿಯಾ): ಫಿಫಾ ವಿಶ್ವಕಪ್ ಫುಟ್ಬಾಲ್ ಪಂದ್ಯಾವಳಿಗೆ ದಿನಗಣನೆ ಶುರುವಾಗಿದ್ದು ಪಂದ್ಯಾವಳಿಯಲ್ಲಿ ಭಾಗವಹಿಸಲಿರುವ ತಂಡಗಳಿಗೆ ಕೋಚ್/ಮ್ಯಾನೇಜರ್ ಗಳು ಕೆಲ ನಿಯಮಗಳನ್ನು ಕಡ್ಡಾಯ ಮಾಡಿದ್ದಾರೆ. 
ವಿಶ್ವಕಪ್ ವೇಳೆ ತಂಡದ ಆಟಗಾರರ ಗಮನವೆಲ್ಲಾ ಟೂರ್ನಮೆಂಟ್ ನ ಮೇಲೆ ಇರಬೇಕು. ಈ ಕಾರಣಕ್ಕಾಗಿಯೇ ಆಟಗಾರರು ಯಾವುದೇ ಕಾರಣಕ್ಕೂ ಅತಿಥೇಯ ರಷ್ಯಾ ದೇಶದ ಹುಡುಗಿಯರ ಜತೆ ತಿರುಗಾಡುವಂತಿಲ್ಲ ಎಂದು ನೈಜೀರಿಯಾ ತಂಡದ ಆಟಗಾರರಿಗೆ ಕೋಚ್ ಜೆನಾರ್ಟ್ ರೊಹ್ರ್ ಖಡಕ್ ವಾರ್ನಿಂಗ್ ರವಾನಿಸಿದ್ದಾರೆ. 
ವಿಶ್ವಕಪ್ ವೇಳೆ ನೈಜೀರಿಯಾ ತಂಡ ಸ್ಟಾಮ್ರೊಪೊಲ್ಕ್ರೇಯ ಯೆಸ್ಸೆನ್ಟುಕಿಯಲ್ಲಿ ಉಳಿಯಲಿದೆ. ಸೂಪರ್ ಈಗಲ್ಸ್ ಖ್ಯಾತಿಯ ನೈಜೀರಿಯಾ ತಂಡದ ಬೇಸ್ ಕ್ಯಾಂಪ್ ನಲ್ಲಿ ಆಟಗಾರರ ಪತ್ನಿಯರು ಹಾಗೂ ಗರ್ಲ್ ಫ್ರೆಂಡ್ ಗಳಿಗೆ ಮಾತ್ರವೇ ಉಳಿದುಕೊಳ್ಳುವ ಅವಕಾಶವಿದೆ ಎಂದು ಜರ್ಮನಿ ಮೂಲದ ಕೋಚ್ ಜೆನಾರ್ಟ್ ಹೇಳಿದ್ದಾರೆ. 
ಫಿಫಾ ವಿಶ್ವಕಪ್ ಜೂನ್ 14ರಿಂದ ಆರಂಭಗೊಳ್ಳಲಿದೆ. ಅರ್ಜೆಂಟೀನಾ, ಐಸ್ಲೆಂಡ್ ಹಾಗೂ ಕ್ರೊವೇಷಿಯಾ ತಂಡಗಳೊಂದಿಗೆ ಡಿ ಗುಂಪಿನಲ್ಲಿ ನೈಜೀರಿಯಾ ತಂಡ ಸ್ಥಾನ ಪಡೆದಿದೆ.
SCROLL FOR NEXT