ಕೊಲಂಬಿಯಾದ ಜುವಾನ್ ಜುನಿಗಾ ಅವರು ನೇಮಾರ್ ಬೆನ್ನಿಗೆ ಒದ್ದ ಪರಿ. 
ಫಿಫಾ ವಿಶ್ವಕಪ್ 2014

ನೇಮಾರ್ ಔಟ್ ಬ್ರೆಜಿಲ್‌ಗೆ ಬಿತ್ತು ಬರೆ

ತವರಿನಲ್ಲಿ ನಡೆಯುತ್ತಿರುವ ಫಿಫಾ ವಿಶ್ವಕಪ್ ಪಂದ್ಯಾವಳಿಯನ್ನು ಗೆಲ್ಲಬೇಕೆಂಬ ಕನಸು..

ಪೊರ್ಟೆಲೆಜಾ: ತವರಿನಲ್ಲಿ ನಡೆಯುತ್ತಿರುವ ಫಿಫಾ ವಿಶ್ವಕಪ್ ಪಂದ್ಯಾವಳಿಯನ್ನು ಗೆಲ್ಲಬೇಕೆಂಬ ಕನಸು ಹೊತ್ತಿರುವ ಬ್ರೆಜಿಲ್ ತಂಡಕ್ಕೆ ಬರೆ ಬಿದ್ದಿದೆ. ಕಾರಣ ತಂಡದ ಆಧಾರವಾಗಿದ್ದ ಆಟಗಾರ ನೇಮಾರ್, ಕೊಲಂಬಿಯಾ ವಿರುದ್ಧದ ಕ್ವಾರ್ಟರ್‌ಫೈನಲ್ ಪಂದ್ಯದಲ್ಲಿ ಬೆನ್ನು ನೋವಿಗೆ ತುತ್ತಾಗಿದ್ದು, ಪಂದ್ಯಾವಳಿಯಿಂದ ಹೊರಗುಳಿಯುವಂತಾಗಿದೆ.
ಶನಿವಾರ ನಸುಕಿನ ಸಮಯದಲ್ಲಿ ನಡೆದ ಅಂತಿಮ ಎಂಟರ ಘಟ್ಟದ ಪಂದ್ಯದಲ್ಲಿ ಕೊಲಂಬಿಯಾ ಆಟಗಾರ ಜುವಾನ್ ಜುನಿಗಾ ಅವರು ತಮ್ಮ ಮಂಡಿಯಿಂದ ನೇಮಾರ್ ಅವರ ಬೆನ್ನಿನ ಕೆಳ ಭಾಗಕ್ಕೆ ಒದ್ದ ಹಿನ್ನೆಲೆಯಲ್ಲಿ ನೇಮಾರ್‌ಗೆ ಹೆಚ್ಚಿನ ಪೆಟ್ಟಾಗಿದೆ.
ನಂತರ ತೀವ್ರ ನೋವಿನಿಂದ ಬಳಲಿದ ನೇಮಾರ್ ಮೈದಾನದಲ್ಲೇ ಕುಸಿದರು. ನಂತರ ಅವರನ್ನು ಸ್ಟ್ರೇಚರ್‌ನಲ್ಲಿ ಮೈದಾನದ ಹೊರಗೆ ಕರೆದೋಯ್ದು ಚಿಕಿತ್ಸೆ ನೀಡಿಲಾಯಿತು. ಬ್ರೆಜಿಲ್ ತಂಡದ ವೈದ್ಯರಾದ ರೊಡ್ರಿಗೊ ಲಸ್ಮರ್, ನೇಮಾರ್‌ಗೆ ಯಾವುದೇ ರೀತಿಯ ಶಸ್ತ್ರ ಚಿಕಿತ್ಸೆಯ ಅಗತ್ಯವಿಲ್ಲ. ಅವರಿಗೆ ನಾಲ್ಕು ವಾರಗಳ ವಿಶ್ರಾಂತಿ ಅಗತ್ಯವಿದ್ದು, ಅವರು ವಿಶ್ವಕಪ್‌ನಿಂದ ಹೊರಗುಳಿಯಲಿದ್ದಾರೆ ಎಂದು ಖಚಿತಪಡಿಸಿದ್ದಾರೆ.
ಪ್ರಸಕ್ತ ಪಂದ್ಯಾವಳಿಯಲ್ಲಿ ನೇಮಾರ್ 4 ಗೋಲು ದಾಖಲಿಸುವ ಮೂಲಕ ತಂಡದ ಯಶಸ್ಸಿನಲ್ಲಿ ಪ್ರಮುಖ ಪಾತ್ರ ವಹಿಸಿದ್ದು, ಈಗ ಪಂದ್ಯಾವಳಿಯಿಂದ ಹೊರಗುಳಿರುವುದು ಬ್ರೆಜಿಲ್‌ಗೆ ಬರೆ ಎಳೆದಂತಾಗಿದೆ.
ಇದು ತೀವ್ರ ಪ್ರಮಾಣದ ಗಾಯದ ಸಮಸ್ಯೆಯಲ್ಲ ಹಾಗಾಗಿ ಶಸ್ತ್ರ ಚಿಕಿತ್ಸೆಯ ಅಗತ್ಯವಿಲ್ಲ. ಆದರೆ ಆತ ಚೇತರಿಸಿಕೊಳ್ಳಲು ಸಮಯಾವಕಾಶದ ಅಗತ್ಯವಿದ್ದು, ತಂಡ ಫೈನಲ್ ಪ್ರವೇಶಿಸಿದರೂ ಆತ ಆಡಲು ಸಾಧ್ಯವಿಲ್ಲ ಎಂದು ಲಸ್ಮರ್ ಸ್ಥಳೀಯ ಮಾಧ್ಯಮವೊಂದಕ್ಕೆ ತಿಳಿಸಿದ್ದಾರೆ.
ನೇಮಾರ್ ಅವರನ್ನು ಸಾವೊ ಕಾರ್ಲೊಸ್ ಆಸ್ಪತ್ರೆಗೆ ದಾಖಲಿಸಿಲಾಯಿತು. ಪಂದ್ಯದ ನಂತರ ಬ್ರೆಜಿಲ್ ಅಭಿಮಾನಿಗಳು ಆಸ್ಪತ್ರೆ ಮುಂದೆ ಜಮಾಯಿಸಿದ್ದರು.
ಈ ಘಟನೆ ನಂತರ ನೇಮಾರ್‌ಗೆ ವಿಶ್ವದಾದ್ಯಂತ ಹಾರೈಕೆಯ ಸಂದೇಶ ಬಂದಿದ್ದು, ಆದಷ್ಟು ಬೇಗ ಗುಣಮುಖರಾಗುವಂತೆ ಟ್ವಿಟರ್‌ಗಳು ಹರಿದು ಬಂದಿವೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

ಭಾರತೀಯ ನಾವಿಕರ ಸುರಕ್ಷತೆ ಮುಖ್ಯ; ನಾಗರಿಕ ಮೂಲಸೌಕರ್ಯಗಳ ಮೇಲಿನ ದಾಳಿ ಸ್ವೀಕಾರಾರ್ಹವಲ್ಲ: ಇರಾನ್‌ಗೆ ಅಜಿತ್ ದೋವಲ್

ಜರ್ಮನಿಯ ವಸತಿ ಕಟ್ಟಡದಲ್ಲಿ ಶಂಕಿತ ಬೆಂಕಿ ಅವಘಡ: 3 ಭಾರತೀಯರು ಸಾವು!

ಹನಿಟ್ರ್ಯಾಪ್ ಪಿತೂರಿ ಪ್ರಶ್ನಿಸಿದ್ದಕ್ಕೆ ಕಿರುಕುಳ; JDS ಕಾರ್ಯಕರ್ತ CCB ವಶಕ್ಕೆ: ಕುಮಾರಸ್ವಾಮಿ ಆಕ್ರೋಶ

ಕಾಂಗ್ರೆಸ್‌ನ ಆಂತರಿಕ ಕಲಹದಿಂದ 'ಮೂರನೇ ಮುಖ್ಯಮಂತ್ರಿ' ಬಂದರೂ ಅಚ್ಚರಿ ಇಲ್ಲ: ಬಿ.ವೈ ವಿಜಯೇಂದ್ರ; Video

ಯೂಟ್ಯೂಬರ್ ಧ್ರುವ್ ರಾಠಿಗೆ ಸಂಕಷ್ಟ: 8 ವರ್ಷಗಳ ಹಿಂದಿನ ಪ್ರಕರಣಕ್ಕೆ ಮರುಜೀವ; ದೆಹಲಿ ಕೋರ್ಟ್ ಸಮನ್ಸ್!