ಸಾವೊ ಪೌಲೊ: ಹಾಲೆಂಡ್ ವಿರುದ್ಧ ಪೆನಾಲ್ಟಿ ಶೂಟೌಟ್ನಲ್ಲಿ ಗೆಲವು ದಾಖಲಿಸಿ ಫಿಫಾ ವಿಶ್ವಕಪ್ನ ಪ್ರಶಸ್ತಿ ಸುತ್ತಿಗೆ ಪ್ರವೇಶಿಸಿದ ಸಂಭ್ರಮದಲ್ಲಿ ಅರ್ಜೆಂಟೀನಾ ಆಟಗಾರರಿದ್ದರೆ, ತಂಡದ ನಾಯಕ ಲಯೋನಲ್ ಮೆಸ್ಸಿ ಮಾತ್ರ ಅಲ್ಲಿ ಭಾಗವಹಿಸಲು ಸಾಧ್ಯವಾಗಲಿಲ್ಲ. ಕಾರಣ ಅವರನ್ನು ಡೋಪಿಂಗ್ ಪರೀಕ್ಷೆಗಾಗಿ ಕರೆದೊಯ್ದಿದ್ದರು.
ಇಸ್ಟಾಗ್ರಾಮ್ ಸಾಮಾಜಿಕ ತಾಣದಲ್ಲಿ ಡೋಪಿಂಗ್ ಪರೀಕ್ಷೆಗೆ ತೆರಳಿದ್ದಾಗ ಚಿತ್ರವನ್ನು ಹಾಕಿಕೊಂಡಿರುವ ಮೆಸ್ಸಿ, ನನ್ನನ್ನು ಡೋಪಿಂಗ್ ಪರೀಕ್ಷೆಗೆ ಒಳಪಡಿಸಿರುವ ಹಿನ್ನೆಲೆಯಲ್ಲಿ ಗೆಲವಿನ ಸಂಭ್ರಮಾಚರಣೆಯಲ್ಲಿ ಭಾಗವಹಿಸಲು ಸಾಧ್ಯವಾಗಲಿಲ್ಲ ಎಂದು ತಿಳಿಸಿದ್ದಾರೆ. ಈ ತಂಡದ ಭಾಗವಾಗಿರಲು ನನಗೆ ಹೆಮ್ಮೆಯಾಗುತ್ತದೆ ಎಂದು ತಿಳಿಸಿದ್ದಾರೆ.
ಇದೊಂದು ಮಹತ್ವದ ಪಂದ್ಯವಾಗಿತ್ತು. ನಾವು ಈಗ ಫೈನಲ್ಗೆ ಪ್ರವೇಶಿಸಿದ್ದು, ಕೇವಲ ಒಂದು ಹೆಜ್ಜೆ ಮಾತ್ರ ಬಾಕಿ ಉಳಿದಿದೆ ಎಂದು ಅಭಿಪ್ರಾಯಪಟ್ಟಿದ್ದಾರೆ.