ಫಿಫಾ ವಿಶ್ವಕಪ್ 2014

ನನ್ನ ಭವಿಷ್ಯ ಬ್ರೆಜಿಲ್ ಕೈಯಲ್ಲಿ

ಬ್ರೆಸಿಲಿಯಾ: ಬ್ರೆಜಿಲ್ ಫುಟ್ಬಾಲ್ ತಂಡ ಫಿಫಾ ವಿಶ್ವಕಪ್ ಪಂದ್ಯಾವಳಿಯ ಉಪಾಂತ್ಯದಲ್ಲಿ ಜರ್ಮನಿ ವಿರುದ್ಧ ಹಿನಾಯ ಸೋಲನುಭವಿಸಿದ ಹಿನ್ನಲೆಯಲ್ಲಿ ತಂಡದ ಕೋಚ್ ಲೂಯಿಜ್ ಫೆಲಿಪ್ ಸ್ಕೊಲಾರಿ, ತಮ್ಮ ಸ್ಥಾನದ ಬಗೆಗಿನ ನಿರ್ಧಾರವನ್ನು ಬ್ರೆಜಿಲ್ ಫುಟ್ಬಾಲ್ ಫೆಡರೇಷನ್‌ಗೆ ಬಿಟ್ಟಿದ್ದಾರೆ. ಕೋಚ್ ಸ್ಥಾನದ ಬಗ್ಗೆ ಫೆಡರೇಷನ್ ಅಧ್ಯಕ್ಷರು ನಿರ್ಧಾರ ತೆಗೆದುಕೊಳ್ಳುತ್ತಾರೆ. ತಂಡದಲ್ಲಿ ಏನು ಆಗಬೇಕು ಎಂಬುದರ ಬಗ್ಗೆ ವರದಿಯನ್ನು ಸಲ್ಲಿಸಿದ್ದು, ಮುಂದಿನ ನಿರ್ಧಾರ ಅವರಿಗೆ ಬಿಟ್ಟದ್ದು ಎಂದು ತಿಳಿಸಿದ್ದಾರೆ. ನನ್ನ ಭವಿಷ್ಯದ ಬಗ್ಗೆ ಚರ್ಚಿಸಲು ಇಚ್ಛಿಸುವುದಿಲ್ಲ. ಗೆಲುವಾಗಲಿ ಸೋಲಾಗಲಿ, ನಾವು ಸಾಧಿಸಿರುವುದಷ್ಟೆ. ಟೂರ್ನಿಯ ಅಂತರದಲ್ಲಿ ನಾವು ಎಡವಿದೆವು. ಆದರೆ ನಾಲ್ಕನೇ ಸ್ಥಾನ ಪಡೆದಿದ್ದೇವೆ ಹಾಗಾಗಿ ತಂಡದ ಆಟಗಾರರಿಗೆ ಅಭಿನಂದನೆ ಸಲ್ಲಿಸುತ್ತೆನೆ ಎಂದು ಸ್ಕೊಲಾರಿ ತಿಳಿಸಿದರು. ಜರ್ಮನಿ ವಿರುದ್ಧದ ಉಪಾಂತ್ಯದದ ಪಂದ್ಯಾದಲ್ಲಿ ತಂಡ ಕೆಲವು ಬಾರಿ ನಿಯಂತ್ರಣ ಸಾಧಿಸಿತ್ತು. ಆದರೆ ಅದನ್ನು ಬಳಿಸಿಕೊಳ್ಳಲು ಸಾಧ್ಯವಾಗಲಿಲ್ಲ. ಹಾಗೆಂದು ತಂಡವನ್ನು ದೂರುವುದು ಸರಿಯಲ್ಲ. ಈ ತಂಡ ಉತ್ತಮವಾಗಿ ರೂಪುಗೊಳ್ಳುತ್ತಿದ್ದು, 2018ರ ವಿಶ್ವಕಪ್‌ನಲ್ಲಿ ಪ್ರಬಲ ತಂಡವಾಗಿ ಹೊರ ಹೊಮ್ಮಲಿದೆ ಎಂದು ಅಭಿಪ್ರಾಯಪಟ್ಟಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

ದೆಹಲಿಯಲ್ಲಿ ನಾಯಕರ ಬಂಧನ, ಮೆಟ್ರೋ ಸ್ಥಗಿತ ಕುರಿತ ನ್ಯಾಯಾಂಗ ನಿಂದನೆ: ಭಾನುವಾರವೂ 'ಸುಪ್ರೀಂ' ವಿಶೇಷ ಪೀಠದಿಂದ ವಿಚಾರಣೆ!

BBK 13: ಗಾನವಿ ಹೇಳಿಕೆಗೆ ನೊಂದು ಗಗನ್ ತಾಯಿಗೆ ತಾನೇ ಕ್ಷಮೆ ಕೇಳಿ ಕಣ್ಣೀರು ಹಾಕಿದ ಸುದೀಪ್

ವಿಶ್ವಸಂಸ್ಥೆಯ ಭದ್ರತಾ ಮಂಡಳಿಯಲ್ಲಿ ಭಾರತ, ಆಫ್ರಿಕಾಗೆ ಸೂಕ್ತ ಪ್ರಾತಿನಿಧ್ಯ ಸಿಗಲೇಬೇಕು: ಜೈಶಂಕರ್ ಆಗ್ರಹ

ಪ್ರತಿಭಟನೆಗಳ ನಡುವೆಯೇ ಚು. ಆಯೋಗ ಮಹತ್ವದ ನಡೆ, ಹೊಸ ಉಪಾಯುಕ್ತರ ನೇಮಕ, 27 ಅಧಿಕಾರಿಗಳಿಗೆ ಹೊಸ ಹೊಣೆ!

ಮಣಿಪುರದಲ್ಲಿ ಮತ್ತೆ ಭುಗಿಲೆದ್ದ ಹಿಂಸಾಚಾರ: 30 ಮನೆ-ಅಂಗಡಿಗಳಿಗೆ ಬೆಂಕಿ, ಕನಿಷ್ಠ 5 ಸಾವು!