ಫಿಫಾ ವಿಶ್ವಕಪ್ 2014

ಇಲ್ಲಿ ಕದನವೇ ಕುತೂಹಲ

ಪಂದ್ಯಾವಳಿಯ 8ನೇ ಮತ್ತು ಅಂತಿಮ ಗುಂಪಾದ 'ಎಚ್' ನಾಲ್ಕು ಸಮರ್ಥ ತಂಡಗಳನ್ನು ಹೊಂದಿದ್ದು, ಲೀಗ್ ಹಂತ ರೋಚಕತೆಯಿಂದ ...

ಪಂದ್ಯಾವಳಿಯ 8ನೇ ಮತ್ತು ಅಂತಿಮ ಗುಂಪಾದ 'ಎಚ್' ನಾಲ್ಕು ಸಮರ್ಥ ತಂಡಗಳನ್ನು ಹೊಂದಿದ್ದು, ಲೀಗ್ ಹಂತ ರೋಚಕತೆಯಿಂದ ಕೂಡಿರುವ ಭರವಸೆ ಮೂಡಿಸಿದೆ.
ಬೆಲ್ಜಿಯಂ, ಅಲ್ಜೀರಿಯಾ, ರಷ್ಯಾ ಹಾಗೂ ದಕ್ಷಿಣ ಕೊರಿಯಾ ತಂಡಗಳು ಅಂತಿಮ 16ರ ಘಟ್ಟಕ್ಕೆ ಪ್ರವೇಶ ಪಡೆಯುವ ಕಾತರದಲ್ಲಿವೆ. ವಿಶ್ವದ ನಂಬರ್ 12 ತಂಡ ಬೆಲ್ಜಿಯಂ ಈ ಗುಂಪಿನಲ್ಲಿ ಅಗ್ರಸ್ಥಾನ ಪಡೆಯುವ ಫೇವರಿಟ್ ಎನಿಸಿದೆ. ಆದರೆ, ಎರಡನೇ ಸ್ಥಾನಕ್ಕೆ ಉಳಿದ ಮೂರು ತಂಡಗಳ ನಡುವೆ ಭಾರೀ ಪೈಪೋಟಿ ಏರ್ಪಡಲಿದೆ.
ಸತತ ಏಳು ಪಂದ್ಯಗಳಲ್ಲಿ ಜಯ ಸಾಧಿಸಿ ದಾಖಲೆ ಬರೆಯುವ ಮೂಲಕ ಬೆಲ್ಜಿಯಂ ತಂಡ ವಿಶ್ವಕಪ್ಗೆ ಅರ್ಹತೆ ಪಡೆದುಕೊಂಡಿದೆ. ಅಲ್ಲದೆ, ಅರ್ಹತಾ ಸುತ್ತಿನಲ್ಲಿ 10 ಪಂದ್ಯಗಳಲ್ಲಿ 8ರಲ್ಲಿ ಗೆದ್ದಿರುವ ಬೆಲ್ಜಿಯಂ ಎರಡು ಪಂದ್ಯಗಳಲ್ಲಿ ಡ್ರಾ ಸಾಧಿಸಿತ್ತು. ಇನ್ನು ನಾಲ್ಕನೇ ವಿಶ್ವಕಪ್ನಲ್ಲಿ ಭಾಗವಹಿಸಿರುವ ಅಲ್ಜೇರಿಯಾವನ್ನು ಹಗುರವಾಗಿ ಪರಿಗಣಿಸುವಂತಿಲ್ಲ. ಬರುವ 2018ರ ವಿಶ್ವಕಪ್ ತನ್ನ ತವರಿನಲ್ಲಿ ನಡೆಯಲಿರುವ ಹಿನ್ನೆಲೆಯಲ್ಲಿ ವಿಶ್ವದ 18ನೇ ರ್ಯಾಂಕಿಂಗ್ ಹೊಂದಿರುವ ರಷ್ಯಾ, ಬ್ರೆಜಿಲ್ನಲ್ಲಿ ಪರಿಣಾಮಕಾರಿ ಪ್ರದರ್ಶನ ನೀಡುವ ಕಾತರದಲ್ಲಿದೆ. 2002ರಲ್ಲಿ ಸೆಮಿಫೈನಲ್ ಪ್ರವೇಶಿಸಿದ್ದ ಕೊರಿಯಾ ಸಹ ಗುಂಪಿನ ಯಾವುದೇ ತಂಡದ ವಿರುದ್ಧ ಪವಾಡದ ಪ್ರದರ್ಶನ ನೀಡಿದರೆ ಅಚ್ಚರಿ ಪಡಬೇಕಿಲ್ಲ.

ಎಚ್ ಗುಂಪು
ಬೆಲ್ಜಿಯಂ
ಕೋಚ್: ಮಾರ್ಕ್ ವಿಲ್ಮೋಟ್ಸ್
ಸ್ಟಾರ್ ಆಟಗಾರ: ಎಡೆನ್ ಹಜರ್ಡ್
ಶ್ರೇಷ್ಠ ಪ್ರದರ್ಶನ: 1986ರಲ್ಲಿ 4ನೇ ಸ್ಥಾನ
ಶ್ರೇಷ್ಠ ಸಾಮರ್ಥ್ಯವನ್ನು ಹೊಂದಿದ ಆಟಗಾರರನ್ನು ಹೊಂದಿದ ತಂಡ ವಿಲ್ಮೋಟ್ಸ್ ಗರಡಿಯಲ್ಲಿ ಪಳಗಿದ್ದು, ಬ್ರೆಜಿಲ್ನಲ್ಲಿ ಮಿಂಚುವ ಸಾಧ್ಯತೆಗಳಿವೆ. ಮ್ಯಾಂಚೆಸ್ಟರ್ ಯುನೈಟೆಡ್ನ ಮಾರೋನೆ ಫೆಲ್ಲೈನಿ ಮತ್ತು ಮ್ಯಾಂಚೆಸ್ಟರ್ ಸಿಟಿ ತಂಡದ ವಿನ್ಸೆಂಟ್ ಕೊಂಪನಿ ಅವರು ಬೆಲ್ಜಿಯಂ ತಂಡದ ಪರ ಅತ್ಯುತ್ತಮ ಪ್ರದರ್ಶನ ನೀಡುವ ಆಟಗಾರರು ಎನಿಸಿದ್ದಾರೆ. ಆದರೆ, ಥಾಮಸ್ ವರ್ಮಾಲೇನಾ, ಕೇವಿನ್ ಡಿ ಬ್ರೂನೆ, ನೆಸರ್ ಚಾಂಡ್ಲಿ ಹಾಗೂ ಮಾರೌನೆ ಫೆಲ್ಲೈನಿ ಅವರು ಕ್ಲಬ್ ಮಟ್ಟದಲ್ಲಿ ಸಾಕಷ್ಟು ಪಂದ್ಯಗಳನ್ನು ಆಡದಿರುವುದು ಕಳವಳ ಉಂಟು ಮಾಡಿದೆ ಎಂದಿದ್ದಾರೆ ಕೋಚ್. ಚೆಲ್ಸಿ ತಂಡದ ಎಡೆನ್ ಹಜಾರ್ಡ್, ತಂಡದ ಪರ ತಕ್ಕ ಪ್ರದರ್ಶನ ನೀಡುವ ಭರವಸೆ ಮೂಡಿಸಿದ್ದಾರೆ.

ರಷ್ಯಾ
ಕೋಚ್: ಫ್ಯಾಬಿಯೋ ಕಾಪೆಲ್ಲೋ
ಸ್ಟಾರ್ ಆಟಗಾರ: ಅಲೆಗ್ಸಾಂಡರ್ ಕೊಕೊರಿನ್
ಶ್ರೇಷ್ಠ ಪ್ರದರ್ಶನ: 1966ರಲ್ಲಿ 4ನೇ ಸ್ಥಾನ
ಸೋವಿಯತ್ ಯೂನಿಯನ್ ಒಡೆದ ನಂತರ 1994 ಮತ್ತು 2002ರಲ್ಲಿ ಎರಡು ಬಾರಿ ಮಾತ್ರ ರಷ್ಯಾ ವಿಶ್ವಕಪ್ಗೆ ಅರ್ಹತೆ ಪೆಡೆದುಕೊಂಡಿದೆ. ಉತ್ತಮ ಆಟಗಾರರನ್ನು ಹೊಂದಿರುವ ರಷ್ಯಾ ನಾಕೌಟ್ ಹಂತ ಪ್ರವೇಶಿಸಲು ಎದುರು ನೋಡುತ್ತಿದೆ. 22 ವರ್ಷದ ಫಾರ್ವರ್ಡ್ ಆಟಗಾರ ಕೊಕೊರಿನ್ ತಂಡದ ಭರವಸೆಯ ಆಟಗಾರ ಎನಿಸಿದ್ದಾರೆ.  ಇನ್ನು ಅನುಭವಿಗಳಾದ ಗೋಲ್ಕೀಪರ್ ಐಗೋರ್ ಅಕಿನ್ಫೆವ್ ಹಾಗೂ ಸ್ಟ್ರೈಕರ್ ಅಲೆಗ್ಜಾಂಡರ್ ಕೆರ್ಝೆಕೋವ್ ಅವರು ತಂಡಕ್ಕೆ ಆಸರೆಯಾಗಲಿದ್ದಾರೆ.

ಅಲ್ಜೀರಿಯಾ
ಕೋಚ್: ವಾಹಿದ್ ಹಲೀಲ್ಹಾಜಿಕ್
ಸ್ಟಾರ್ ಆಟಗಾರ: ಮಾಜಿದ್ ಬೋಗೆರಾ
ಶ್ರೇಷ್ಠ ಪ್ರದರ್ಶನ: 1982, 1986, 2010ರಲ್ಲಿ ಗುಂಪು ಹಂತ.
ಅರ್ಹತಾ ಸುತ್ತಿನಲ್ಲಿ ಒದ್ದಾಡಿದ್ದ ಆಫ್ರಿಕಾ ತಂಡ ಅಲ್ಜೀರಿಯಾ ಈ ಗುಂಪಿನಲ್ಲಿ ಶ್ರೇಷ್ಠ ಪ್ರದರ್ಶನ ನೀಡುವುದು ಕೊಂಚ ಕಷ್ಟ. ಆಫ್ರಿಕಾ ನೇಷನ್ಸ್ ಕಪ್ನಲ್ಲೂ ಅದು ಕಳಪೆ ಪ್ರದರ್ಶನ ನೀಡಿತ್ತು.  ಒಂದು ವೇಳೆ ಅಲ್ಜೀರಿಯಾ ಈ ಪಂದ್ಯಾವಳಿಯಲ್ಲಿ ನಾಕೌಟ್ ಹಂತ ತಲುಪಿದರೆ, ಅದೊಂದು ಇತಿಹಾಸವಾಗಲಿದೆ. ಸೋಫಿಯಾನೆ ಫೆಗೌಲಿ ಅವರು ಅಲ್ಜೀರಿಯಾ ತಂಡದ ದೊಡ್ಡ ಆಸ್ತಿ ಎನಿಸಿದ್ದಾರೆ.

ದಕ್ಷಿಣ ಕೊರಿಯಾ
ಕೋಚ್: ಹಾಂಗ್ ಮಯೂಂಗ್ -ಬೊ
ಸ್ಟಾರ್ ಆಟಗಾರ: ಸನ್ ಹೇಂಗ್-ಮಿನ್
ಶ್ರೇಷ್ಠ ಪ್ರದರ್ಶನ: 2002ರಲ್ಲಿ 4ನೇ ಸ್ಥಾನ
2002ರಲ್ಲಿ ಕೊರಿಯಾ ತಂಡದ ನಾಯಕತ್ವ ವಹಿಸಿಕೊಂಡಿದ್ದ ಹಾಂಗ್ ಅವರು ಆಟಗಾರರಲ್ಲಿ ಸ್ಫೂರ್ತಿ ತುಂಬಿದ್ದಾರೆ. ಅದೇ ನೆನಪಿನಲ್ಲಿ ಅತ್ಯುತ್ತಮ ಪ್ರದರ್ಶನ ನೀಡುವ ಕಾತರದಲ್ಲಿದೆ ತಂಡ. ಸನ್ ಹೇಂಗ್ ಮಿನ್ ಅವರು ತಂಡದಲ್ಲಿ ಪ್ರಮುಖ ಪಾತ್ರವಹಿಸಲಿದ್ದಾರೆ ಎನ್ನಲಾಗಿದೆ. ಆದರೆ, ತಂಡ ಅಂತಿಮ 16ರ ಘಟ್ಟ ತಲುಪಿದಲ್ಲಿ ಅದೇ ಶ್ರೇಷ್ಠ ಸಾಧನೆಯಾಗಲಿದೆ ಎನ್ನಲಾಗುತ್ತಿದೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

ನಾಳೆ CJPಯ ತಿರಂಗಾ ಮೆರವಣಿಗೆ ನಡೆಯಬೇಕಿದ್ದ ದೆಹಲಿಯ ಸೆಂಟ್ರಲ್ ಪಾರ್ಕ್ ಅನ್ನು 2 ದಿನ ಮುಚ್ಚಿದ NDMC!

ದೆಹಲಿಯ ರಾಮಲೀಲಾದಲ್ಲಿ ಈ ಬಾರಿ ರಾವಣನ ಜೊತೆಗೆ 30 ಅಡಿ ಎತ್ತರದ ಕಾಕ್ರೋಚ್ ಪ್ರತಿಕೃತಿ ದಹನ!

Ramayana: 'ರಾಮಾಯಣ'ದ ರನ್ ಟೈಮ್ ಮೂರು ಗಂಟೆಗೂ ಹೆಚ್ಚು; ಅಮೆರಿಕದಲ್ಲಿ 'PG-13' ರೇಟಿಂಗ್!

15 ವರ್ಷದ ಹಳೆ ವಿಡಿಯೋ ಅದಂತೆ.., ರಾಜಕೀಯ ತೆವಲಿಗೆ ಮಾಡುತ್ತಿದ್ದಾರೆ: ಬಿ.ಕೆ ಹರಿಪ್ರಸಾದ್ ಗರಂ

'ಕುಟುಂಬದ ಕನಸು ನನಸು': 'ಜೈಲರ್ 2' ಬಿಡುಗಡೆ ಬೆನ್ನಲ್ಲೇ ನಟಿ ಮೇಘನಾ ರಾಜ್ ಮಾತು!