ಈ ಬಾರಿಯ ವಿಶ್ವಕಪ್ನಲ್ಲಿ ಡಿಇಎಸ್ಎಸ್ಒ ಗ್ರಾಸ್ ಮಾಸ್ಟರ್ ವ್ಯವಸ್ಥೆಯನ್ನು ಅಳವಡಿಸಿದ್ದು, ಶೇ.100 ಪೂರ್ಣ ಪ್ರಮಾಣದ ಹುಲ್ಲಿನ ಅಂಗಣದ ಗುಣಮಟ್ಟವನ್ನು ನೀಡಲಿದೆ. ಅಂಗಣದಲ್ಲಿ ಹುಲ್ಲನ್ನು ಬೆಳೆಸಿದ್ದು, ನಂತರಪ್ರತಿ 2 ಸೆ.ಮಿನಷ್ಟು ಅಂತರದಲ್ಲಿ ಕೃತಕ ಫ್ಯಾಬ್ರಿಕ್ ಮಾದರಿಯ ಹುಲ್ಲನ್ನು ಅಳವಡಿಸಲಾಗಿದೆ. ಇದರಿಂದ ಪಂದ್ಯಾವಳಿಯುದ್ದಕ್ಕೂ ಅಂಗಣವನ್ನು ಒಂದೇ ರೀತಿಯಲ್ಲಿ ಕಾಯ್ದುಕೊಳ್ಳಲು ಅವಕಾಶ ನೀಡಲಿದೆ. ಈ ಕೃತಕ ಫ್ಯಾಬ್ರಿಕ್ ಮೇಲೆ ನೈಜ್ಯ ಹುಲ್ಲನ್ನು ಬೆಳೆಸುವುದರಿಂದ ಅಂಗಣ, ವರ್ಷದ ಎಲ್ಲಾ ಋತುವಿಗೂ ಹೊಂದಿಕೊಳ್ಳಲಿದೆ. ಇದೇ ಮಾದರಿಯ ಅಂಗಣ ವ್ಯವಸ್ಥೆಯನ್ನು 2010ರ ಫಿಫಾ ವಿಶ್ವಕಪ್ನಲ್ಲೂ ಬಳಸಲಾಗಿತ್ತು.