ಬೆಲೊ ಹಾರಿಜಾಂಟೆಯಲ್ಲಿ ನಡೆಯಲಿರುವ ಪಂದ್ಯದಲ್ಲಿ ಕೊಲಂಬಿಯಾ ಮತ್ತು ಗ್ರೀಸ್ ತಂಡಗಳು ಮುಖಾಮುಖಿಯಾಗಲಿವೆ. ಈ ಮುನ್ನ ಉಭಯ ತಂಡಗಳು ಪರಸ್ಪರ ಒಂದು ಬಾರಿ ಸೆಣಸಿವೆ. 1994ರ ಜೂನ್ 5ರಂದು ನ್ಯೂಯಾರ್ಕ್ನಲ್ಲಿ ನಡೆದ ಸ್ನೇಹ ಸರಣಿಯ ಪಂದ್ಯದಲ್ಲಿ ಕೊಲಂಬಿಯಾ ತಂಡ 2-0 ಗೋಲುಗಳಿಂದ ಗ್ರೀಸ್ ತಂಡದ ವಿರುದ್ಧ ಜಯಗಳಿಸಿತ್ತು. 1990ರಲ್ಲಿ 16ರ ಘಟ್ಟ ತಲುಪಿದ್ದೇ ಕೊಲಂಬಿಯಾದ ಈವರೆಗಿನ ಉತ್ತಮ ಸಾಧನೆಯಾಗಿದೆ.
1994 ಮತ್ತು 2010ರ ವಿಶ್ವಕಪ್ಗಳಲ್ಲಿ ಗುಂಪು ಹಂತದ ಸೆಣಸಿನಿಂದಲೇ ಗ್ರೀಸ್ ನಿರ್ಗಮಿಸಿತ್ತು. ಈ ಹಿಂದಿನ ಟೂರ್ನಿಗಳಲ್ಲಿ ಎರಡು ಆರಂಭಿಕ ಪಂದ್ಯಗಳಲ್ಲಿ ಗ್ರೀಸ್ ಖಾತೆ ತೆರೆಯದೇ ಸೋಲುಂಡಿತ್ತು. 1994ರಲ್ಲಿ ಅರ್ಜೆಂಟೀನಾ ವಿರುದ್ಧ 0-4ರಿಂದ ಹಾಗೂ 2010ರಲ್ಲಿ ಕೊರಿಯಾ ಗಣರಾಜ್ಯ ವಿರುದ್ಧ 0-2 ಗೋಲುಗಳಿಂದ ಆಘಾತ ಅನುಭವಿಸಿತ್ತು.
2004ರಲ್ಲಿ ಯೂರೋಪಿಯನ್ ಚಾಂಪಿಯನ್ ಆಗಿದ್ದ ಗ್ರೀಸ್ ಅಚ್ಚರಿ ಫಲಿತಾಂಶ ನೀಡುವ ತಂಡವಾಗಿದೆ.
ಕೊಲಂಬಿಯಾದ ಪ್ರಮುಖರು
ಮಾರಿಯೊ ಯೆಪೇಸ್, ಡೇವಿಡ್ ಆಸ್ಪಿನಾ, ಜುವಾನ್ ಗಿಲೆರ್ಮೊ ಕ್ಯುಡ್ರಾಡೊ, ಆ್ಯಡ್ರಿಯನ್ ರಾಮೇಸ್, ಅಬೆಲ್ ಅಗುಲ್ಲರ್, ವಿಕ್ಟರ್ ಇಬಾರ್ಬೊ, ಕಾರ್ಲೊಸ್ ಸ್ಯಾಂಚೇಜ್, ಸ್ಯಾಂಟಿಯಾಗೊ ಅರಿಯಾಸ್, ಕಾರ್ಲೊಸ್ ಬಾಕಾ, ರಾಡಾಮೆಲ್ ಫಾಲ್ಕಾವೊ, ಜೇಮ್ಸ್ ರೋಡ್ರಿಗ್ಸ್, ಕ್ರಿಸ್ಟಿಯನ್ ಝಪಾಟ.
ಕೋಚ್- ಜೋಸ್ ಪೆಕರ್ಮನ್
ಗ್ರೀಸ್ನ ಪ್ರಮುಖರು
ಜಾರ್ಜಸ್ ಸಾಮಾರಸ್, ಡಿಮಿಟ್ರೀಸ್ ಸಾಲ್ಪಿಂಗಿಡಿಸ್, ಓರೆಸ್ಟೆಸ್ ಕಾರ್ನೆಜಿಸ್, ಜಾರ್ಜಸ್ ಕಾರಗೌನಿಸ್, ಜಾರ್ಜಸ್ ಝಾವೆಲಾಸ್, ಕೋಸ್ಟಾಸ್ ಮಿಟ್ರೊಗ್ಲೊ, ಥಿಯೊಫ್ಯಾನಿಸ್ ಗೆಕಾಸ್, ಲೂಕಾಸ್ ವಿಂಟ್ರಾ.
ಕೋಚ್- ಫರ್ನಾಂಡೊ ಸ್ಯಾಂಟೋಸ್
ಪಂದ್ಯ ಆರಂಭ: ರಾತ್ರಿ 9.30 ಗಂಟೆ