ರಿಯೋ ಡಿ ಜನೈರೋ: ವಿಶ್ವಕಪ್ನ ತನ್ನ ಮೊದಲ ಪಂದ್ಯದಲ್ಲಿ ಹಾಲೆಂಡ್ ವಿರುದ್ಧ 5-1 ಗೋಲುಗಳಿಂದ ಸೋಲನುಭವಿಸಿ ತೀವ್ರ ಮುಜುಗರ ಅನುಭವಿಸುತ್ತಿರುವ ಹಾಲಿ ಚಾಂಪಿಯನ್ ಸ್ಪೇನ್ ತಂಡ, ಬುಧವಾರ ನಡೆಯಲಿರುವ ಲೀಗ್ ಪಂದ್ಯದಲ್ಲಿ ಚಿಲಿ ವಿರುದ್ಧ ಕಠಿಣ ಚಾಲೆಂಜ್ ಎದುರಿಸುತ್ತಿದೆ. ಹಾಲೆಂಡ್ ವಿರುದ್ಧ ಸ್ಪೇನ್ ಅನುಭವಿಸಿದ ಸೋಲು ಕಳೆದ 51 ವರ್ಷಗಳಲ್ಲೇ ತುಂಬಾ ದುಬಾರಿಯಾದದ್ದು ಎನ್ನಲಾಗಿದೆ. ಅಲ್ಲದೆ, ಸ್ಪೇನ್ ಮಾಧ್ಯಮಗಳು ಸಹ ಪಂದ್ಯದ ಕುರಿತು ತೀವ್ರ ಟೀಕೆ ಮಾಡಿದ್ದವು. ಸ್ಪೇನ್ ಈ ಪಂದ್ಯದಲ್ಲೂ ಸೋತರೆ, 'ಬಿ' ಗುಂಪಿನ ಇನ್ನೊಂದು ಪಂದ್ಯದಲ್ಲಿ ಆಸ್ಟ್ರೇಲಿಯಾ ವಿರುದ್ಧ ಹಾಲೆಂಡ್ ಗೆದ್ದರೆ, 1996ರಲ್ಲಿ ಬ್ರೆಜಿಲ್, 2002ರಲ್ಲಿ ಫ್ರಾನ್ಸ್ ಹಾಗೂ 2010ರಲ್ಲಿ ಇಟಲಿ ತಂಡಗಳು ಹಾಲಿ ಚಾಂಪಿಯನ್ ಆಗಿ ಮೊದಲ ಸುತ್ತಿನಲ್ಲಿ ಸೋತ ಮಾದರಿಯಲ್ಲೇ ಕೈಚೆಲ್ಲಲಿದೆ.
ಫಲಿತಾಂಶ ಇದೇ ರೀತಿ ಹೊರಬಿದ್ದರೆ, ಮೊದಲ ಪಂದ್ಯದಲ್ಲಿ ಆಸ್ಟ್ರೇಲಿಯಾ ವಿರುದ್ಧ 3-1 ಗೋಲುಗಳಿಂದ ಗೆದ್ದಿರುವ ಚಿಲಿ ನಾಕೌಟ್ ಹಂತ ಪ್ರವೇಶಿಸಲಿದೆ.ಸ್ಪೇನ್ ಬಲ: ಐಕರ್ ಕ್ಯಾಸಿಲಾಸ್, ಸೆರ್ಗಿಯೊ, ರಾಮೋಸ್, ಜಾವಿ ಮಾರ್ಟೆನೆಜ್, ಗೆರಾರ್ಡ್ ಪಿಕ್, ಆ್ಯಂಡ್ರೆಸ್ ಇನಿಯೆಸ್ಟಾ, ಜಾವಿ ಆಲೊನ್ಸೊ, ಸೆಸ್ ಫ್ಯಾಬ್ರಿಗಾಸ್, ಡೇವಿಡ್ ವಿಲ್ಲಾ, ಡೇವಿಡ್ ಸಿಲ್ವಾ, ಫರ್ನಾಂಡೋ ಬೊರೇಸ್.
ಚಿಲಿ: ಶಕ್ತಿ ಆರ್ಟರೋ ವಿಡಾಲ್, ಅಲೆಕ್ಸಸ್ ಸಾಂಚೆಜ್ ಗೊಂಜಲೋ ಜರಾ, ಗ್ಯಾರಿ ಮಾಡೆಲ್, ಯಡೋರ್ಡಾ ವರ್ಗಾಸ್.