ಫಿಫಾ ವಿಶ್ವಕಪ್ 2014

ಸ್ವಿಸ್‌ಗೆ ತಿವಿದ ಫ್ರಾನ್ಸ್ ಗೂಳಿ

ಸ್ವಿಜರ್ಲೆಂಡ್ ವಿರುದ್ಧ ಅತ್ಯದ್ಭುತ ಪ್ರದರ್ಶನ ನೀಡಿದ ಫ್ರಾನ್ಸ್ ತಂಡ, ಫಿಫಾ ವಿಶ್ವಕಪ್ ಪಂದ್ಯಾವಳಿಯ ಪ್ರಿಕ್ವಾಟರ್‌ಫೈನಲ್‌ಗೆ ಪ್ರವೇಶಿಸಿದೆ...

ಸಾಲ್ವಡೋರ್: ಸ್ವಿಜರ್ಲೆಂಡ್ ವಿರುದ್ಧ ಅತ್ಯದ್ಭುತ ಪ್ರದರ್ಶನ ನೀಡಿದ ಫ್ರಾನ್ಸ್ ತಂಡ, ಫಿಫಾ ವಿಶ್ವಕಪ್ ಪಂದ್ಯಾವಳಿಯ ಪ್ರಿಕ್ವಾಟರ್‌ಫೈನಲ್‌ಗೆ ಪ್ರವೇಶಿಸಿದೆ.
ಶನಿವಾರ ನಡೆದ ಇ ಗುಂಪಿನ ಪಂದ್ಯದಲ್ಲಿ ಫ್ರಾನ್ಸ್ ತಂಡವು 5-2 ಮಹತ್ತರ ಗೋಲುಗಳ ಅಂತರದಲ್ಲಿ ಸ್ವಿಜರ್ಲೆಂಡ್ ತಂಡವನ್ನು ಬಗ್ಗುಬಡಿಯಿತು. ಈ ಗೆಲವಿನೊಂದಿಗೆ ಫ್ರಾನ್ಸ್, ಇ ಗುಂಪಿನಲ್ಲಿ ಅಗ್ರಸ್ಥಾನ ಪಡೆಯುವುದರ ಜತೆಗೆ ನಾಕೌಟ್ ಹಂತಕ್ಕೆ ಪ್ರವೇಶಿಸಿದೆ.
ಉಭಯ ತಂಡಗಳು ತಮ್ಮ ಆರಂಭಿಕ ಪಂದ್ಯಗಳಲ್ಲಿ ಗೆಲವು ದಾಖಲಿಸಿ ಶುಭಾರಂಭ ಮಾಡಿದ್ದವು. ಹಾಗಾಗಿ ಈ ಪಂದ್ಯದಲ್ಲಿ ಗೆಲವು ದಾಖಲಿಸುವ ಮೂಲಕ ಗೆಲವಿನ ಹಾದಿಯಲ್ಲಿ ತಮ್ಮ ಪಯಣವನ್ನು ಮುಂದುವರಿಸಲು ಎರಡು ತಂಡಗಳು ಪ್ರಯತ್ನಿಸಿದ್ದವು. ಅಂತಿಮವಾಗಿ ಈ ಪ್ರಯತ್ನದಲ್ಲಿ ಯಶ ಸಾಧಿಸಿದ್ದು, ಫ್ರಾನ್ಸ್.
ಆರಂಭದಿಂದಲೇ ಆಕ್ರಮಣಕಾರಿ ಆಟಕ್ಕೆ ಮುಂದಾದ ಫ್ರಾನ್ಸ್, ಎದುರಾಳಿಯ ಮೇಲೆ ತನ್ನ ಪ್ರಾಬಲ್ಯ ಮೆರೆಯಿತು. ಸ್ವಿಜರ್ಲೆಂಡ್ ತಂಡಕ್ಕೆ ಸುಲಭವಾಗಿ ಗೋಲು ದಾಖಲಿಸಲು ಅವಕಾಶ ನೀಡದ ಫ್ರಾನ್ಸ್ ಸತತವಾಗಿ 5 ಗೋಲು ದಾಖಲಿಸಿ ಪಂದ್ಯವನ್ನು ಸಂಪೂರ್ಣ ತಮ್ಮ ವಶಕ್ಕೆ ಪಡೆದುಕೊಂಡಿತು.
ಆದರೆ ಅಂತಿಮ ನಿಮಿಷಗಳಲ್ಲಿ ಸ್ವಿಜರ್ಲೆಂಡ್ ಹೋರಾಟದ ಪ್ರದರ್ಶನದೊಂದಿಗೆ 2 ಗೋಲು ದಾಖಲಿಸಿ, ಸೋಲಿನ ಅಂತರವನ್ನು ಕಡಿಮೆ ಮಾಡಿಕೊಳ್ಳಲಷ್ಟೇ ಶಕ್ತವಾಯಿತು.
ಫ್ರಾನ್ಸ್ ತಂಡದ ಪರ ಒಲಿವರ್ ಗಿರೌಡ್ (17), ಬ್ಲೈಸಿ ಮಟ್ಯುಡಿ (18), ಮ್ಯಾಥ್ಯೂ ವಾಲ್ಬೆನಾ (40), ಕರೀಮ್ ಬೆಂಜೆಮಾ (67) ಹಾಗೂ ಮೌಸಾ ಸಿಸ್ಸೊಕೊ (73) ಗೋಲು ದಾಖಲಿಸಿದರು. ಇನ್ನು ಸ್ವಿಜರ್ಲೆಂಡ್ ತಂಡದ ಪರ ಬ್ಲೆರಿಮ್ ಜಮೈಲಿ (81) ಹಾಗೂ ಗ್ರಾನಿಟ್ ಕ್ಸಾಕಾ (87) ಗೋಲು ದಾಖಲಿಸಿದರು. ಫ್ರಾನ್ಸ್ ತಂಡ ಅಂತಿಮ ಗುಂಪು ಹಂತದ ಪಂದ್ಯದಲ್ಲಿ ಜೂ.26ರಂದು ಈಕ್ವೆಡಾರ್ ತಂಡವನ್ನು ಎದುರಿಸಲಿದ್ದು, ಗೆಲವಿನ ಯಾತ್ರೆ ಮುಂದುವರಿಸುವ ವಿಶ್ವಾಸದಲ್ಲಿದೆ. ಇನ್ನು ಇ ಗುಂಪಿನಲ್ಲಿ ಎರಡನೇ ಸ್ಥಾನ ಪಡೆದು ಪ್ರಿಕ್ವಾಟರ್‌ಗೆ ಪ್ರವೇಶಿಸಲು ಚಿಂತಿಸುತ್ತಿರುವ ಸ್ವಿಜರ್ಲೆಂಡ್ ತಂಡ, ಜೂ.26ರಂದು ನಡೆಯಲಿರುವ ಪಂದ್ಯದಲ್ಲಿ ಹೋಂಡುರಾಸ್ ತಂಡವನ್ನು ಮಣಿಸಲೇಬೇಕಾದ ಅನಿವಾರ್ಯತೆಯಲ್ಲಿದೆ.

ಫ್ರಾನ್ಸ್ 5
ಒಲಿವರ್ ಗಿರೌಡ್ 17ನೇ ನಿಮಿಷ
ಮಟ್ಯುಡಿ 18ನೇ ನಿಮಿಷ
ಮ್ಯಾಥ್ಯೂ ವಾಲ್ಬೆನಾ  40 ನೇ ನಿಮಿಷ
 ಬೆಂಜೆಮಾ 67 ನೇ ನಿಮಿಷ
ಮೊಸಾ 73ನೇ ನಿಮಿಷ

ಸ್ವಿಜರ್ಲೆಂಡ್ 2
ಬ್ಲೆರಿಮ್ ಜಮೈಲಿ81ನೇ ನಿಮಿಷ
ಗ್ರಾನಿಯಾ ಕ್ಸಾಕಾ
87ನೇ ನಿಮಿಷ

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

ನಾಳೆ CJPಯ ತಿರಂಗಾ ಮೆರವಣಿಗೆ ನಡೆಯಬೇಕಿದ್ದ ದೆಹಲಿಯ ಸೆಂಟ್ರಲ್ ಪಾರ್ಕ್ ಅನ್ನು 2 ದಿನ ಮುಚ್ಚಿದ NDMC!

ದೆಹಲಿಯ ರಾಮಲೀಲಾದಲ್ಲಿ ಈ ಬಾರಿ ರಾವಣನ ಜೊತೆಗೆ 30 ಅಡಿ ಎತ್ತರದ ಕಾಕ್ರೋಚ್ ಪ್ರತಿಕೃತಿ ದಹನ!

Ramayana: 'ರಾಮಾಯಣ'ದ ರನ್ ಟೈಮ್ ಮೂರು ಗಂಟೆಗೂ ಹೆಚ್ಚು; ಅಮೆರಿಕದಲ್ಲಿ 'PG-13' ರೇಟಿಂಗ್!

15 ವರ್ಷದ ಹಳೆ ವಿಡಿಯೋ ಅದಂತೆ.., ರಾಜಕೀಯ ತೆವಲಿಗೆ ಮಾಡುತ್ತಿದ್ದಾರೆ: ಬಿ.ಕೆ ಹರಿಪ್ರಸಾದ್ ಗರಂ

'ಕುಟುಂಬದ ಕನಸು ನನಸು': 'ಜೈಲರ್ 2' ಬಿಡುಗಡೆ ಬೆನ್ನಲ್ಲೇ ನಟಿ ಮೇಘನಾ ರಾಜ್ ಮಾತು!