ಸಲ್ವಾಡೋರ್: ತಾನು ನಂಬಿಕೊಂಡಿದ್ದ ಎಡಿನ್ ಜೆಕೋ ಮತ್ತು ಮಿರಾಲೆಮ್ ಪಾನಿಕ್ ಅವರು ಗೋಲು ದಾಖಲಿಸುವ ಮೂಲಕ ಬೊಸ್ನಿಯಾ ಮತ್ತು ಹೆರ್ಜ್ಗೊವಿನ ತಂಡ ಇರಾನ್ ವಿರುದ್ಧ 3-1 ಗೋಲುಗಳಿಂದ ಜಯ ಕಂಡುಕೊಂಡಿತು. ಇದರೊಂದಿಗೆ ಪಂದ್ಯಾವಳಿಯ ಮೊದಲೆರಡು ಪಂದ್ಯಗಳಲ್ಲಿ ಸೋಲನುಭವಿಸಿದ್ದ ಬೊಸ್ನಿಯಾ ಮೊದಲ ಬಾರಿಗೆ ತನ್ನ ಗೆಲುವಿನ ಖಾತೆಯನ್ನು ತೆರೆಯಿತು. ಮೊದಲೆರಡು ಪಂದ್ಯಗಳಲ್ಲಿ ಗೋಲು ದಾಖಲಿಸದೇ ತನ್ನ ಹೋರಾಟ ಅಂತ್ಯಗೊಳಿಸಿದ್ದ ಇರಾನ್ ಈ ಪಂದ್ಯದಲ್ಲಿ ರೆಜಾ ಘೂಚೆನ್ನಿಜ್ಹಾಡ್ ಪಂದ್ಯದ 82ನೇ ನಿಮಿಷದಲ್ಲಿ ಗೋಲು ದಾಖಲಿಸುವುದರೊಂದಿಗೆ ಗೋಲು ಖಾತೆ ತೆರೆಯಿತು. ಪಂದ್ಯದ 23ನೇ ನಿಮಿಷದಲ್ಲಿ ಎಡಿನ್ ಜೆಕೋ ದಾಖಲಿಸಿದ ಗೋಲಿನ ನೆರವಿನೊಂದಿಗೆ ಮೊದಲಾರ್ಧ ಪಂದ್ಯದಲ್ಲಿ ಬೊಸ್ನಿಯಾ, 1-0 ಅಂತರದಿಂದ ಮುನ್ನಡೆ ಕಂಡುಕೊಂಡಿತ್ತು. ದ್ವಿತಿಯಾರ್ಧದ 59ನೇ ನಿಮಿಷದಲ್ಲಿ ಮಿರಾಲೆಮ್ ಪಾನಿಕ್ ಗೋಲು ದಾಖಲಿಸುವ ಮೂಲಕ ಬೊಸ್ನಿಯಾ 2-0 ಅಂತರದಿಂದ ಮುನ್ನಡೆ ಕಂಡುಕೊಂಡಿತು. ನಂತರ 83ನೇ ನಿಮಿಷದಲ್ಲಿ ಅದಿಜಾ ರಸಾಜೆವಿಚ್ ಗೋಲು ದಾಖಲಿಸುವುದರೊಂದಿಗೆ ಬೊಸ್ನಿಯಾ 3-1 ಗೋಲುಗಳಿಂದ ಜಯ ಕಂಡುಕೊಂಡಿತು.
ಬೊಸ್ನಿಯಾ-3
ಎಡಿನ್ ಜೆಕೋ 23 ನೇ ನಿಮಿಷ ಮಿರಾಲೆಮ್ 59ನೇ ನಿಮಿಷ ಅದಿಜಾ 83ನೇ ನಿಮಿಷ
ಇರಾನ್-1
ರೆಜಾ 82ನೇ ನಿಮಿಷ