ಪಾಪ್ ಕಾರ್ನ್ ಚಿಕನ್ ಗೆ ಬೇಕಾಗುವ ಪದಾರ್ಥಗಳು
- ಬೋನ್ ಲೆಸ್ ಚಿಕನ್ -500 ಗ್ರಾಂ
- ಕೆಂಪು ಮೆಣಸಿನಕಾಯಿ ಪುಡಿ- 2 ಟೀ ಸ್ಪೂನ್
- ಮೆಣಸಿನ ಪುಡಿ- 1 ಟೀ ಸ್ಪೂನ್
- ಉಪ್ಪು-ರುಚಿಗೆ ತಕ್ಕಷ್ಟು
- ಶುಂಠಿ ಬೆಳ್ಳುಳ್ಳಿ ಪೇಸ್ಟ್
- ಅರಿಶಿನ ಪುಡಿ.
- ಬ್ರೆಡ್ ಪುಡಿ-2 ಚಮಚ
- ಮೊಟ್ಟೆ-1
- ಗರಂ ಮಸಾಲಾ - 1 ಸ್ಪೂನ್
- ಕಾರ್ನ್ ಪ್ಲೋರ್ ಅರ್ಧ ಕಪ್
- ಕರಿಯಲು ಅಡುಗೆ ಎಣ್ಣೆ
- ಮೊದಲಿಗೆ ಬೋನ್ ಲೆಸ್ ಚಿಕನ್ ಅನ್ನು ಚೆನ್ನಾಗಿ ತೊಳೆದುಕೊಂಡು ನೀರನ್ನು ಬಸಿದುಕೊಳ್ಳಿ. ನಂತರ ಸಣ್ಣ ತುಂಡುಗಳಾಗಿ ಕತ್ತರಿಸಿ.
- ಅದಕ್ಕೆ ಉಪ್ಪು, ಮೆಣಸಿನಕಾಯಿ ಪುಡಿ, ಕರಿಮೆಣಸಿನ ಪುಡಿ, ಗರಂ ಮಸಲಾ, ಶುಂಠಿ ಬೆಳ್ಳುಳ್ಳಿ ಪೇಸ್ಟ್, ಅರಿಶಿನ ಪುಡಿ, ಬ್ರೆಡ್ ಪುಡಿ ಸೇರಿಸಿ ಚೆನ್ನಾಗಿ ಮಿಕ್ಸ್ ಮಾಡಿ.
- ಮಿಕ್ಸ್ ಮಾಡಿದ ನಂತರ 1ಅರ್ಧ ಗಂಟೆ ನೆನೆಯಲು ಬಿಡಿ. ಸ್ಟವ್ ಹಚ್ಚಿ ಎಣ್ಣೆ ಕಾಯಲು ಬಿಡಿ.
- ನೆನೆದ ಚಿಕನ್ ಮಿಕ್ಸ್ ಅನ್ನು ಮೊದಲಿಗೆ ಮೊಟ್ಟೆಯ ಬಿಳಿಯ ಭಾಗದಲ್ಲಿ ಅದ್ದಿ ನಂತರ ಅದನ್ನು ಕಾರ್ನ್ ಫ್ಲೋರ್ ಗೆ ಅದ್ದಿ. ಕಾದ ಎಣ್ಣೆಯಲ್ಲಿ ಗೋಲ್ಡನ್ ಬ್ರೌನ್ ಬರುವವರೆಗೂ ಕರಿಯರಿ. ಟಮೊಟೊ ಸಾಸ್ ಜೊತೆ ಬಿಸಿಬಿಸಿಯಾದ ಪಾಪ್ ಕಾರ್ನ್ ಚಿಕನ್ ಸವಿಯಲು ಸಿದ್ದ.