- ಬೋನ್ ಲೆಸ್ ಚಿಕನ್ - ಅರ್ಧ ಕೆಜಿ
- ಈರುಳ್ಳಿ - 2
- ಬೆಳ್ಳುಳ್ಳಿ- 2-3 ಎಸಳು
- ಬ್ರೆಡ್ ಚೂರು - ಅರ್ಧ ಕಪ್
- ಬೆಣ್ಣೆ - ಅರ್ಧ ಕಪ್
- ಮೊಟ್ಟೆ - 1
- ಕರಿಮೆಣಸಿನ ಪುಡಿ - 1 ಚಮಚ
- ಉಪ್ಪು -ರುಚಿಗೆ ತಕ್ಕಷ್ಟು
ತಯಾರಿಸುವ ವಿಧಾನ
- ಪಾತ್ರೆಯನ್ನು ಬಿಸಿ ಮಾಡಿ, ಬೆಣ್ಣೆ ಹಾಕಬೇಕು. ನಂತರ ಕತ್ತರಿಸಿದ ಈರುಳ್ಳಿ ಮತ್ತು ಜಜ್ಜಿದ ಬೆಳ್ಳುಳ್ಳಿ ಹಾಕಿ. ಈರುಳ್ಳಿ ಚಿನ್ನದ ಬಣ್ಣ ಬರುವವರೆಗೆ ಹುರಿದುಕೊಳ್ಳಿ.
- ನಂತರ ಒಲೆಯನ್ನು ಆರಿಸಿ ಈ ಹುರಿದ ಈರುಳ್ಳಿ ಮತ್ತು ಬೆಳ್ಳುಳ್ಳಿಯನ್ನು ಒಂದು ಬಟ್ಟಲಿಗೆ ಹಾಕಿಕೊಳ್ಳಬೇಕು.
- ನಂತರ ಒಂದು ಬಟ್ಟಲಿಗೆ ಮೊಡ್ಡೆ, ಬ್ರೆಡ್ ಚೂರುಗಳು, ಸ್ವಲ್ಪ ಬೆಣ್ಣೆ, ರುಚಿಗೆ ತಕ್ಕಷ್ಟು ಉಪ್ಪು ಹಾಗೂ ಕರಿಮೆಣಸಿನ ಪುಡಿ ಹಾಕಿ ಚಮಚದಲ್ಲಿ ಚೆನ್ನಾಗಿ ಮಿಶ್ರಣ ಮಾಡಿ. ನಂತರ ಈ ಮಿಶ್ರಣಕ್ಕೆ ಚಿಕನ್ ಹಾಕಿ ಕೈಯಿಂದ ಚೆನ್ನಾಗಿ ಕಲಸಿ ಉಂಡೆಗಳನ್ನಾಗಿ ಮಾಡಿಕೊಳ್ಳಬೇಕು.
- ನಂತರ ತಟ್ಟೆಗೆ ಎಣ್ಣೆ ಸವರಿ ಅದರಲ್ಲಿ ಚಿಕನ್ ಉಂಡೆಗಳನ್ನು ಇಟ್ಟು ಮೈಕ್ರೋ ಓವನ್ ನಲ್ಲಿ ಬೇಯಿಸಿದರೆ ರುಚಿಕರವಾದ ಚಿಕನ್ ಬಾಲ್ ತಯಾರಾಗುತ್ತದೆ.