- ದೊಡ್ಡ ಗಾತ್ರದ - ಮೀನು (ಅರ್ಧ ಕೆಜಿ)
- ಖಾರದ ಪುಡಿ - 1 ಚಮಚ
- ಕಡಲೆ ಹಿಟ್ಟು - 100 ಗ್ರಾಂ
- ಅರಿಶಿನ ಪುಡಿ - ಅರ್ಧ ಚಮಚ
- ಶುಂಠಿ-ಬೆಳ್ಳುಳ್ಳಿ ಪೇಸ್ಟ್ - ಅರ್ಧ ಚಮಚ
- ಗರಂ ಮಸಾಲ - 1 ಚಮಚ
- ಜೀರಿಗೆ ಪುಡಿ - ಅರ್ಧ ಚಮಚ
- ನಿಂಬೆ ಹಣ್ಣು - 1
- ಸೋಂಪು - 1 ಚಮಚ
- ಉಪ್ಪು - ರುಚಿಗೆ ತಕ್ಕಷ್ಟು
- ತಂದೂರಿ ಮಸಾಲ - ಅರ್ಧ ಚಮಚ
ಗರಂ ಮಸಾಲಗೆ ಬೇಕಾಗುವ ಪದಾರ್ಥಗಳು
- ಲವಂಗ - 3
- ಏಲಕ್ಕಿ - 2
- ನಕ್ಷತ್ರ ಮೊಗ್ಗು - 2
- ಚಕ್ಕೆ - 1
ಮಾಡುವ ವಿಧಾನ...
- ಮೀನನ್ನು ಶುದ್ಧ ಮಾಡಿ ಅರಿಶಿನ ಪುಡಿ ಮತ್ತು ಉಪ್ಪು ಹಾಕಿ ಚೆನ್ನಾಗಿ ಅರ್ಧಗಂಟೆಗಳ ಕಾಲ ಮಿಶ್ರಣ ಮಾಡಬೇಕು.
- ಗರಂ ಮಸಾಲೆಗಾಗಿ ಲವಂಗ ಏಲಕ್ಕಿ, ನಕ್ಷತ್ರ ಮೊಗ್ಗು, ಚಕ್ಕೆ ಎಲ್ಲವನ್ನೂ ಕೆಂಪಗೆ ಹುರಿದುಕೊಂಡು ಪುಡಿ ಮಾಡಿಕೊಳ್ಳಬೇಕು.
- ನಂತರ ಕಡಲೆ ಹಿಟ್ಟು, ಗರಂ ಮಸಾಲ ಪುಡಿ, ಜೀರಿಗೆ ಪುಡಿ, ಸ್ವಲ್ಪ ಸೋಂಪು, ಉಪ್ಪು, ತಂದೂರಿ ಮಸಾಲೆ ಸ್ವಲ್ಪ, ಶುಂಠಿ-ಬೆಳ್ಳುಳ್ಳಿ ಪೇಸ್ಟ್, ಖಾರದ ಪುಡಿ, ಅರಿಶಿನ ಪುಡಿ, ಸ್ವಲ್ಪ ನೀರು ಹಾಕಿ ಎಲ್ಲವನ್ನು ಸೇರಿಸಿ ಚೆನ್ನಾಗಿ ಮಿಶ್ರಣ ಮಾಡಿಕೊಳ್ಳಬೇಕು.
- ಒಲೆಯ ಮೇಲೆ ಬಾಣಲೆಯಿಟ್ಟು ಅದು ಕಾದ ನಂತರ ಸ್ವಲ್ಪ ಎಣ್ಣೆ ಹಾಕಿ ಮಿಶ್ರಣ ಮಾಡಿದ ಮಸಾಲೆಯಲ್ಲಿ ಮೀನನ್ನು ಅದ್ದಿ ಡೀಪ್ ಫ್ರೈ ಮಾಡಿದರೆ ಮೀನಿನ ವಡೆ ತಯಾರಾಗುತ್ತದೆ. ಇದಕ್ಕೆ ನಿಂಬೆಹಣ್ಣಿನ ರಸ ಹಾಕಿ ತಿನ್ನಬಹುದು.