ಪನ್ನೀರ್ ಕರಿ 
ಅಡುಗೆ

ಪನ್ನೀರ್ ಕರಿ

ಪನ್ನೀರ್ ಕರಿ ಮಾಡು ವಿಧಾನ

ಪನ್ನೀರ್ ಕರಿ
ಬೇಕಾಗುವ ಸಾಮಾಗ್ರಿಗಳು

  • 250 ಗ್ರಾಂ ಪನ್ನೀರ್
  • 2 ಟೇಬಲ್ ಸ್ಪೂನ್ ಎಣ್ಣೆ
  • 1 ಈರುಳ್ಳಿ
  • 1 ಟೊಮೊಟೊ
  • 1 ಟೀ ಸ್ಪೂನ್ ಶುಂಠಿ ಪೇಸ್ಟ್
  • 1 ಟೀ ಸ್ಪೂನ್ ಬೆಳ್ಳುಳ್ಳಿ ಪೇಸ್ಟ್
  • 1/2 ಸ್ಪೂನ್ ಮೆಣಸಿನಕಾಯಿ ಪುಡಿ
  • 1/4 ಸ್ಪೂನ್ ಧನಿಯಾ ಪುಡಿ
  • 1/4 ಸ್ಪೂನ್ ಗರಂ ಮಸಾಲ
  • 1/2 ಸ್ಪೂನ್ ಜೀರಿಗೆ ಪುಡಿ
  • 1/2 ಸ್ಪೂನ್ ಅರಿಶಿನ ಪುಡಿ
  • 1 ಟೀ ಸ್ಪೂನ್ ಹೆಚ್ಚಿದ ಹಸಿ ಮೆಣಸಿನಕಾಯಿ
  • 1  ಕಪ್ ನೀರು
  • ಉಪ್ಪು
ಮಾಡುವ ವಿಧಾನ
  • ಮೊದಲಿಗೆ ಪನ್ನೀರ್ ಅನ್ನು ಸಣ್ಣದಾಗಿ ನಿಮಗೆ ಬೇಕಾದ ಆಕಾರದಲ್ಲಿ ಕತ್ತರಿಸಿಕೊಳ್ಳಿ
  • ನಂತರ ಟಮೊಟೊ ಮತ್ತು ಈರುಳ್ಳಿಯನ್ನು ಹೆಚ್ಚಿ ರುಬ್ಬಿಕೊಳ್ಳಿ,
  • ಕಾದ ಬಾಣಲೆಗೆ ಎಣ್ಣೆ ಹಾಕಿ ಅದಕ್ಕೆ ಹೆಚ್ಚಿದ ಹಸಿ ಮೆಣಸಿನಕಾಯಿ ಹಾಕಿ ಫ್ರೈ ಮಾಡಿ
  • ರುಬ್ಬಿದ ಟಮೊಟೊ ಈರುಳ್ಳಿ ಮಿಶ್ರಣ ಬೆರೆಸಿ ಹಸಿ ವಾಸನೆ ಹೋಗುವವರೆಗೂ ಬೇಯಿಸಿ.
  • ನಂತರ ಶುಂಠಿ, ಬೆಳ್ಳುಳ್ಳಿ ಪೇಸ್ಟ್ ಹಾಕಿ 2 ನಿಮಿಷ ಕುದಿಸಿ.
  • ನಂತರ ಧನಿಯಾ ಪುಡಿ, ಜೀರಿಗೆ, ಅರಶಿನ ಪುಡಿ, ಗರಂ ಮಸಾಲಾ, ಮೆಣಸಿನಕಾಯಿ ಪುಡಿ, ರುಚಿಗೆ ತಕ್ಕಷ್ಟು ಉಪ್ಪು ಸೇರಿಸಿ.
  • ಚೆನ್ನಾಗಿ ಕುದಿಯತೊಡಗಿದಾಗ ಅದಕ್ಕೆ ಕತ್ತರಿಸಿಕೊಂಡ ಪನ್ನೀರ್ ಮತ್ತು 1 ಕಪ್ ನೀರನ್ನು ಹಾಕಿ ಸುಮಾರು 5 ರಿಂದ 10 ನಿಮಿಷಗಳ ಕಾಲ ಬೆಯಿಸಿ.
  • ಚಪಾತಿ ಇಲ್ಲವೇ ಪರೋಟಾ ಜೊತೆ ತಿನ್ನಲು ಪನ್ನೀರ್ ಕರಿ ರೆಡಿ

- ಶಿಲ್ಪ.ಡಿ

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ನಾವು ಏಕೆ ತಡೆಯಲಿ... ತಾಂತ್ರಿಕ ಸಮಸ್ಯೆ ಹೊರತು ಉದ್ದೇಶಪೂರ್ವಕವಲ್ಲ: ಮಹಿಳಾ ಪತ್ರಕರ್ತರನ್ನು ದೂರವಿಟ್ಟ ಬಗ್ಗೆ ಮುತ್ತಕಿ ಸ್ಪಷ್ಟನೆ

ಪಾಕಿಸ್ತಾನ-ಅಫ್ಘಾನಿಸ್ತಾನ ಯುದ್ಧ: 58 ಪಾಕ್ ಸೈನಿಕರು ಹತ, ತಾಲಿಬಾನ್ ಸರ್ಕಾರದ 'ದೊಡ್ಡ' ಹೇಳಿಕೆ

ಭಾರತ- ಬಾಂಗ್ಲಾದೇಶ ಗಡಿ: ರೂ. 2.82 ಕೋಟಿ ಮೌಲ್ಯದ 'ಚಿನ್ನದ ಬಿಸ್ಕತ್ತು' ಜೊತೆಗೆ ಕಳ್ಳಸಾಗಣೆದಾರನನ್ನು ಬಂಧಿಸಿದ BSF!

ದೇಶದ ಮುಸ್ಲಿಂರನ್ನು ಗುರಿಯಾಗಿಸಿಕೊಳ್ಳುವ ಬಿಜೆಪಿ ಅಫ್ಘಾನಿಸ್ತಾನದ ಜೊತೆ ಸಂಬಂಧ ಬೆಳೆಸುವುದು 'ಬೂಟಾಟಿಕೆ': ಮೆಹಬೂಬಾ ಮುಫ್ತಿ

'ಬ್ಲೂ ಸ್ಟಾರ್ ಆಪರೇಷನ್' ಕಾರ್ಯಾಚರಣೆ ತಪ್ಪಿಗೆ ಇಂದಿರಾ ಗಾಂಧಿ ಪ್ರಾಣ ತೆತ್ತರು: ಪಿ ಚಿದಂಬರಂ

SCROLL FOR NEXT