- ಕಾಯಿತುರಿ - 2 ಬಟ್ಟಲು
- ಘನೀಕರಿಸಿದ ಹಾಲು - 2 ಬಟ್ಟಲು
- ಸಕ್ಕರೆ - 1 ಬಟ್ಟಲು
- ಏಲಕ್ಕಿ ಪುಡಿ - ಸ್ವಲ್ಪ
- ಬಾದಾಮಿ - ಸ್ವಲ್ಪ
- ಬೆಣ್ಣೆ - ಸ್ವಲ್ಪ
ಮಾಡುವ ವಿಧಾನ...
- ಹಾಲನ್ನು ದಪ್ಪ ತಳದ ಪಾತ್ರೆಗೆ ಹಾಕಿ ಸಣ್ಣ ಉರಿಯಲ್ಲಿ ಸುಮಾರು 15 ನಿಮಿಷ ಕುದಿಸಬೇಕು. ತಳಹತ್ತದಿರಲು ಆಗಾಗ ಚಮಚದಿಂದ ಕೈಯಾಡಿಸುತ್ತಿರಬೇಕು.
- ನಂತರ ಇದಕ್ಕೆ ಕಾಯಿತುರಿ ಹಾಕಿ ಚೆನ್ನಾಗಿ ಮಿಶ್ರಣ ಮಾಡಬೇಕು. ಹಾಲನ್ನು ಕಾಯಿತುರಿ ಪೂರ್ಣವಾಗಿ ಹೀರಿಕೊಳ್ಳುವವರೆಗೂ ಕೈಯಾಡಿಸಬೇಕು.
- ಕಾಯಿತುರಿ ಹಾಲು ಹೀರಿಕೊಳ್ಳುತ್ತಿದ್ದಂತೆ ಗಟ್ಟಿಯಾಗಲು ಆರಂಭವಾಗುತ್ತದೆ. ಇದಕ್ಕೆ ಸಕ್ಕರೆ ಹಾಗೂ ಏಲಕ್ಕಿ ಹಾಕಬೇಕು.
- ಸಕ್ಕರೆ ಕರಗುತ್ತಿದ್ದಂತೆ ಒಲೆಯಿಂದ ಕೆಳಗಿಳಿಸಿಕೊಳ್ಳಬೇಕು.
- ಸ್ವಲ್ಪ ತಣ್ಣಗಾಗುತ್ತಿದ್ದಂತೆ ಎರಡೂ ಅಂಗೈಗಳಿಗೂ ಬೆಣ್ಣೆ ಸವರಿಕೊಂಡು ಚಿಕ್ಕ ಚಿಕ್ಕ ಉಂಡೆಗಳನ್ನಾಗಿ ಮಾಡಬೇಕು. ನಂತರ ಇದಕ್ಕೆ ಬಾದಾಮಿ ಚೂರುಗಳನ್ನು ಹಾಕಿ ಅಲಂಕರಿಸಿದರೆ ರುಚಿಕರವಾದ ಕೊಬ್ಬರಿ ಲಡ್ಡು ತಯಾರಾಗುತ್ತದೆ.