- ಮೊಸರು - ಅರ್ಧ ಬಟ್ಟಲು
- ಕೇಸರಿ - 6 ದಳ
- ತುಪ್ಪ (ಎಣ್ಣೆ) - ಅರ್ಧ ಬಟ್ಟಲು
- ಸಕ್ಕರೆ - 1 1/2 ಬಟ್ಟಲು
- ಮೈದಾಹಿಟ್ಟು - 2 ಬಟ್ಟಲು
ಮಾಡುವ ವಿಧಾನ...
- ಪಾತ್ರೆಯೊಂದನ್ನು ತೆಗೆದುಕೊಂಡು ಅದಕ್ಕೆ ಮೈದಾ ಹಾಗೂ ಮೊಸರು ಹಾಕಿ 2 ಬಟ್ಟಲು ನೀರು ಹಾಕಿ ಗಂಟಾಗದಂತೆ ಚೆನ್ನಾಗಿ ಮಿಶ್ರಣ ಮಾಡಬೇಕು.
- ನಂತರ ಒಲೆಯ ಮೇಲೆ ಪಾತ್ರೆಯಿಟ್ಟು ನೀರು ಹಾಗೂ ಸಕ್ಕರೆ ಹಾಕಿ ಪಾಕವನ್ನು ತಯಾರು ಮಾಡಿಕೊಳ್ಳಬೇಕು.
- ತುಪ್ಪವನ್ನು ಬಾಣಲೆಗೆ ಹಾಕಿ ಬಿಸಿ ಮಾಡಿಕೊಳ್ಳಬೇಕು.
- ಶುಭ್ರವಾದ ಕಾಟನ್ ಬಟ್ಟೆಯೊಂದನ್ನು ತೆಗೆದುಕೊಂಡು ಅದರ ಮಧ್ಯೆ ತೂತು ಮಾಡಿ ಆ ಬಟ್ಟೆಗೆ ಈ ಮೊದಲೇ ತಯಾರಿ ಮಾಡಿಟ್ಟುಕೊಂಡ ಹಿಟ್ನನ್ನು ಹಾಸಿ ಬಿಸಿಯಾದ ತುಪ್ಪಕ್ಕೆ ಹಾಕಿ ಕೆಂಪಗಾಗುವವರೆಗೆ ಕರಿದುಕೊಳ್ಳಬೇಕು.
- ಈ ಕರಿದ ಜಿಲೇಬಿಯನ್ನು ತಣ್ಣಗಾದ ಸಕ್ಕರೆ ಪಾಕಕ್ಕೆ ಹಾಕಿದರೆ ಬಿಸಿಬಿಸಿಯಾದ ರುಚಿಕರ ಜಿಲೇಜಿ ಸವಿಯಲು ತಯಾರಾಗುತ್ತದೆ.