ಹಾರ್ಲಿಕ್ಸ್ ಬರ್ಫಿ ಬೇಕಾಗುವ ಪದಾರ್ಥಗಳು
- ಕಡ್ಲೆ ಹಿಟ್ಟು- 1 ಕಪ್
- ಹಾರ್ಲಿಕ್ಸ್- 1/2 ಕಪ್
- ಸಕ್ಕರೆ - 1 ಕಪ್
- ತುಪ್ಪ 1 ಕಪ್
- ಹಾಲು - 2/1ಕಪ್
- ಕತ್ತರಿಸಿದ ಬಾದಾಮಿ
ಮಾಡುವ ವಿಧಾನ..
- ಮೊದಲಿಗೆ ಪ್ಯಾನ್ ನಲ್ಲಿ ಸ್ವಲ್ಪ ತುಪ್ಪ ಹಾಕಿ ಕಡಲೆ ಹಿಟ್ಟನ್ನು ಹೊಂಬಣ್ಣ ಬರುವವರೆಗೂ ಹುರಿದುಕೊಳ್ಳಬೇಕು.
- ನಂತರ ಮತ್ತೊಂದು ಬಟ್ಟಲಲ್ಲಿ ಹಾಲು ಮತ್ತು ಸಕ್ಕರೆಯನ್ನು ಬೆರೆಸಿ (ಎಳೆ) ಪಾಕ ಬರುವವರೆಗೂ ಕುದಿಸಬೇಕು.
- ನಂತರ ಅದಕ್ಕೆ ಹುರಿದ ಕಡಲೆ ಹಿಟ್ಟು ಹಾಕಿ ಚೆನ್ನಾಗಿ ಮಿಶ್ರಣ ಮಾಡಿ.
- ಅದು ಸ್ವಲ್ಪ ಗಟ್ಟಿಯಾಗುತ್ತಾ ಬಂದಾಗ ಅದಕ್ಕೆ ಹಾರ್ಲಿಕ್ಸ್ ಪುಡಿ ಹಾಕಿ ಚೆನ್ನಾಗಿ ಮಿಕ್ಸ್ ಮಾಡಿ.
- ಉಳಿದ ತುಪ್ಪವನ್ನು ಹಾಕಿ ಚೆನ್ನಾಗಿ ಮಿಕ್ಸ್ ಮಾಡಿ, ಪಾತ್ರೆಯ ತಳ ಬಿಡುವವರೆಗೂ ಮಿಕ್ಸ್ ಮಾಡಿ.
- ನಂತರ ಒಂದು ಟ್ರೇ ಗೆ ಸ್ವಲ್ಪ ತುಪ್ಪ ಸವರಿ ಮಿಶ್ರಣವನ್ನು ಅದಕ್ಕೆ ಸುರಿಯಿರಿ. ಅದರ ಮೇಲೆ ಕತ್ತರಿಸಿದ ಬಾದಾಮಿ ಹಾಕಿ ಅಲಂಕರಿಸಿ
- ಐದು ನಿಮಿಷಗಳ ನಂತರ ನಿಮಗೆ ಬೇಕಾದ ಆಕಾರದಲ್ಲಿ ಹಾರ್ಲಿಕ್ಸ್ ಬರ್ಫಿಯನ್ನು ಕತ್ತರಿಸಿ.