ಅಡುಗೆ

ಮಸಾಲಾ ಮಜ್ಜಿಗೆ

Manjula VN
ಬೇಕಾಗುವ ಪದಾರ್ಥಗಳು...
  • ಗಟ್ಟಿ ಮೊಸರು - ಮುಕ್ಕಾಲು ಬಟ್ಟಲು
  • ತಂಪಾದ ನೀರು - ಅರ್ಧ ಲೋಟ
  • ತಂಪಾದ ಸೋಡಾ - 1 ಬಟ್ಟಲು
  • ಒಣಗಿಗ ಪುದೀನಾ ಪುಡಿ - ಅರ್ಧ ಚಮಚ
  • ಪುದೀನಾ ಸೊಪ್ಪಿನ ಎಲೆ - 3-4
  • ಉಪ್ಪು - ರುಚಿಗೆ ತಕ್ಕಷ್ಟು
ಮಾಡುವ ವಿಧಾನ...
  • ಮೊಸರು, ತಂಪಾದ ನೀರು ಹಾಗೂ ಸೋಡಾವನ್ನು ಚೆನ್ನಾಗಿ ಮಿಶ್ರಣ ಮಾಡಿಕೊಳ್ಳಬೇಕು.
  • ಇದಕ್ಕೆ ಪುದೀನಾ ಪುಡಿ, ಉಪ್ಪು ಹಾಕಿ ಚೆನ್ನಾಗಿ ಮಿಶ್ರಣ ಮಾಡಿ. ನಂತರ ಒಂಟು ಲೋಟಕ್ಕೆ ಹಾಕಿ ಪುದೀನಾ ಎಲೆಗಳೊಂದಿಗೆ ಅಲಂಕರಿಸಿದರೆ, ಬಾಯಾರಿಕೆ ನೀಗಿಸುವ ರುಚಿಕರವಾದ ಮಸಾಲಾ ಮಜ್ಜಿಗೆ ಕುಡಿಯಲು ಸಿದ್ಧ.
SCROLL FOR NEXT