- ಒಂದು ಕಪ್ ಬೆಳ್ತಿಗೆ ಅಕ್ಕಿ
- 1/2 ಕಪ್ ಹೆಸರು ಬೇಳೆ
- 1 1/2 ಕಪ್ ಬೆಲ್ಲ ತುರಿ
- 1/4 ಕಪ್ ತೆಂಗಿನ ತುರಿ
- 2 ಚಮಚ ಗೇರು ಬೀಜ
- 2 ಚಮಚ ಒಣದ್ರಾಕ್ಷಿ
- 3ರಿಂದ 4ಚಮಚ ಏಲಕ್ಕಿ ಪುಡಿ
- 3ರಿಂದ 4 ಚಮಚ ತುಪ್ಪ
- 3ರಿಂದ 4 ಕಪ್ ನೀರು ಹೆಸರು ಬೇಳೆ ಬೇಯಿಸಲು ಮತ್ತು ಬೆಲ್ಲ ಕರಗಿಸಲು
- ಹೆಸರು ಬೇಳೆ ಮತ್ತು ಅಕ್ಕಿಯನ್ನು ತೊಳೆದು ಸ್ವಚ್ಛಗೊಳಿಸಿ ಒಟ್ಟಿಗೆ ಹಾಕಿ ಮೂರು ಕಪ್ ನೀರು ಹಾಕಿ ಪ್ರೆಶರ್ ಕುಕ್ಕರ್ ನಲ್ಲಿ ಬೇಯಿಸಿ. ಎರಡು ವಿಶಲ್ ಹಾಕಿಸಿದರೆ ಸಾಕು. ಕುಕ್ಕರ್ ನ ಗ್ಯಾಸ್ ಹೋದ ನಂತರ ಹೆಸರು ಬೇಳೆ ಮತ್ತು ಅನ್ನವನ್ನು ಚಮಚದಿಂದ ಹಿಸುಕಿ ಪಕ್ಕಕ್ಕಿಡಿ.
- ಮತ್ತೊಂದು ತವಾದಲ್ಲಿ 2-3ಚಮಚ ತುಪ್ಪ ಹಾಕಿ ಗೇರುಬೀಜ, ಒಣದ್ರಾಕ್ಷಿ ಹಾಕಿ ಹುರಿಯಿರಿ. ಅದನ್ನು ಸಣ್ಣ ಬೌಲ್ ನಲ್ಲಿ ಹಾಕಿ ಪಕ್ಕಕ್ಕಿಡಿ.
- ತವದಲ್ಲಿ ಅರ್ಧ ಕಪ್ ಬೆಲ್ಲ ಹಾಕಿ ಮಧ್ಯಮ ಉರಿಯಲ್ಲಿ ಸ್ಟೌನಲ್ಲಿ ಕರಗಿಸಿಕೊಳ್ಳಿ. ಅದರಲ್ಲಿ ಮರಳು, ಕಸವಿದ್ದರೆ ತೆಳುವಾದ ಶುಭ್ರ ಬಟ್ಟೆಯೊಂದಕ್ಕೆ ಹಾಕಿ ಸೋಸಿಕೊಳ್ಳಿ. ನಂತರ ಮತ್ತೊಮ್ಮೆ ಬೆಲ್ಲಪಾಕ ಹದ ಬರುವವರೆಗೆ ಕುದಿಸಿಕೊಳ್ಳಿ.
- ನಂತರ ಬೆಲ್ಲಪಾಕಕ್ಕೆ ಬೇಯಿಸಿ ಹಿಸುಕಿಟ್ಟ ಅನ್ನ ಮತ್ತು ಹೆಸರುಬೇಳೆ ಮಿಶ್ರಣ ಹಾಕಿ. ನಂತರ ಅದನ್ನು ಸಣ್ಣ ಉರಿಯಲ್ಲಿ ಸೀದು ಹೋಗದಂತೆ ಸೌಟಿನಿಂದ ತಿರುಗಿಸುತ್ತಾ 5 ನಿಮಿಷ ಇರಿ.
- ನಂತರ ಅದಕ್ಕೆ ತೆಂಗಿನ ತುರಿ ಸೇರಿಸಿ.ತುಪ್ಪ ಸೇರಿಸುತ್ತಿದ್ದರೆ ತುಪ್ಪ ಹಾಕಿ ಸ್ವಲ್ಪ ಹೊತ್ತು ಬಿಸಿ ಮಾಡಿ. ನಂತರ ಅದಕ್ಕೆ ದ್ರಾಕ್ಷಿ, ಗೋಡಂಬಿ, ಏಲಕ್ಕಿ ಪುಡಿ ಹಾಕಿ ಮಿಶ್ರಣ ಮಾಡಿ. ಸಿಹಿ ಪೊಂಗಲ್ ಸಿದ್ಧ.