ಅಡುಗೆ

ಹಲಸಿನ ಹಣ್ಣಿನ ಪಡ್ಡು

Sumana Upadhyaya

ಹಲಸಿನ ಹಣ್ಣಿನ ಪಡ್ಡು ಮಾಡುವ ವಿಧಾನ ಇಂತಿದೆ.

ಬೇಕಾಗುವ ಸಾಮಾಗ್ರಿಗಳು
ಹಲಸಿನ ಹಣ್ಣಿನ ತೊಳೆ-ಒಂದು ಕಪ್
ಬೆಳ್ತಕ್ಕಿ- ಎರಡು ಕಪ್
ಬೆಲ್ಲದ ತುರಿ-ಸಿಹಿಗೆ ಬೇಕಾದಷ್ಟು, ಸುಮಾರು ಒಂದು ಕಪ್
ಉಪ್ಪು-ರುಚಿಗೆ ತಕ್ಕಷ್ಟು
ತೆಂಗಿನ ತುರಿ-ಅರ್ಧ ಕಪ್
ಕಪ್ಪು ಎಳ್ಳು ಸ್ವಲ್ಪ

ಮಾಡುವ ವಿಧಾನ
ಬೆಳ್ತಕ್ಕಿಯನ್ನು ಚೆನ್ನಾಗಿ ತೊಳೆದು 3ರಿಂದ ನಾಲ್ಕು ಗಂಟೆಗಳ ಕಾಲ ನೀರಿನಲ್ಲಿ ನೆನೆಯಿಡಿ. ನಂತರ ನೀರನ್ನು ತೆಗೆದು ಹಲಸಿನ ಹಣ್ಣಿನ ತೊಳೆಯನ್ನು ಅದಕ್ಕೆ ಹಾಕಿ ಸ್ವಲ್ಪ ಉಪ್ಪು, ಬೆಲ್ಲದ ತುರಿ ಮತ್ತು ಕಾಯಿತುರಿಯನ್ನು ಹಾಕಿ ಚೆನ್ನಾಗಿ ನುಣ್ಣಗೆ ಮಿಕ್ಸಿಯಲ್ಲಿ ರುಬ್ಬಿ.



ತುಂಬ ನೀರು ನೀರು ಆಗಬಾರದು. ಹದವಾಗಿರಬೇಕು. ಒಂದು ಚಮಚದಷ್ಟು ಕಪ್ಪು ಎಳ್ಳು ಹಿಟ್ಟಿಗೆ ಹಾಕಿ.

ಪಡ್ಡು ತಯಾರಿಸುವ ಗುಳಿ ಪಾತ್ರೆಗೆ ತುಪ್ಪ ಅಥವಾ ಎಣ್ಣೆಯನ್ನು ಹಾಕಿ ಅದು ಬಿಸಿಯಾದ ನಂತರ ಹಿಟ್ಟನ್ನು ಎರೆಯಿರಿ. ಬೆಂದ ಬಳಿಕ ಎರಡು ಚಮಚಗಳ ಸಹಾಯದಿಂದ ಗುಳಿಯಿಂದ ತೆಗೆಯಿರಿ, ಬಿಸಿ ಬಿಸಿ ಇರುವಾಗಲೇ ಸೇವಿಸಲು ಚೆನ್ನಾಗಿರುತ್ತದೆ.

ಫೋಟೋ ಕೃಪೆ: ಒಪ್ಪಣ್ಣ.ಕಾಂ

SCROLL FOR NEXT