ರುಚಿಕರ, ಆರೋಗ್ಯಕರ ಹಾಗೂ ನಿಮಿಷಗಳಲ್ಲಿ ಮಾಡಬಹುದಾದ ರಾಗಿ ಲಾಡೂ ಮಾಡುವ ವಿಧಾನ...
ಬೇಕಾಗುವ ಪದಾರ್ಥಗಳು
ರಾಗಿ ಹಿಟ್ಟು- 1 ಬಟ್ಟಲು
ದ್ರಾಕ್ಷಿ, ಗೋಡಂಬಿ- ಸ್ವಲ್ಪ
ನೀರು- 1/2 ಬಟ್ಟಲು
ಬೆಲ್ಲ- 150 ಗ್ರಾಂ
ಏಲಕ್ಕಿ ಪುಡಿ- ಸ್ವಲ್ಪ
ತುಪ್ಪು-ಸ್ವಲ್ಪ
ಮಾಡುವ ವಿಧಾನ...
ಮೊದಲಿಗೆ ಒಲೆಯ ಮೇಲೆ ಬಾಣಲೆ ಇಟ್ಟು, ಸ್ವಲ್ಪ ತುಪ್ಪ ಹಾಕಿ ರಾಗಿ ಹಿಟ್ಟನ್ನು ಕೆಂಪಗೆ ಹುರಿದಿಟ್ಟುಕೊಳ್ಳಬೇಕು.
ಮತ್ತೊಂದು ಪ್ಯಾನ್'ಗೆ ತುಪ್ಪ ಹಾಕಿ ದ್ರಾಕ್ಷಿ ಹಾಗೂ ಗೋಡಂಬಿಯನ್ನು ಕೆಂಪಗೆ ಹುರಿದುಕೊಳ್ಳಬೇಕು.
ಪಾತ್ರೆಯೊಂದನ್ನು ಒಲೆಯ ಮೇಲಿಟ್ಟು ನೀರು ಹಾಕಿ ಬೆಲ್ಲವನ್ನು ಕರಗಿಸಿಕೊಳ್ಳಬೇಕು. ಬೆಲ್ಲ ಕರಗಿದ ಬಳಿಕ ಪಾಕ ತಣ್ಣಗಾಗಲು ಬಿಡಬೇಕು.
ಹುರಿದ ರಾಗಿ ಹಿಟ್ಟಿಗೆ ಏಲಕ್ಕಿ ಪುಡಿ, ದ್ರಾಕ್ಷಿ ಹಾಗೂ ಗೋಡಂಬಿ ಉಳಿದ ತುಪ್ಪ ಹಾಕಿ ಮಿಶ್ರಣ ಮಾಡಿಕೊಂಡು, ಪಾಕವನ್ನು ಹಾಕುತ್ತಾ ಚೆನ್ನಾಗಿ ಮಿಶ್ರಣ ಮಾಡಿಕೊಂಡು ಉಂಡೆ ಕಟ್ಟಿದರೆ ರುಚಿಕರ ಹಾಗೂ ಆರೋಗ್ಯಕರವಾದ ರಾಗಿ ಲಾಡೂ ಸವಿಯಲು ಸಿದ್ಧ.