ಅಡುಗೆ

ಮಕ್ಕಳಿಗೆ ಪೌಷ್ಟಿಕಯುಕ್ತ ಕುಚ್ಚಿಲಕ್ಕಿ ಉಂಡೆ

Sumana Upadhyaya

ಬೇಕಾಗುವ ಪದಾರ್ಥಗಳು
ಕುಚ್ಚಿಲಕ್ಕಿ-ಒಂದು ಕಪ್
ಬೆಲ್ಲ-ಮುಕ್ಕಾಲಿನಿಂದ ಒಂದು ಕಪ್
ತೆಂಗಿನಕಾಯಿ ತುರಿ-1 ಸಣ್ಣ ಕಪ್
ಗೋಡಂಬಿ, ದ್ರಾಕ್ಷಿ-ಸ್ವಲ್ಪ
ತುಪ್ಪ-ಒಂದು ಚಮಚ


ಮಾಡುವ ವಿಧಾನ:
ಕುಚ್ಚಿಲಕ್ಕಿಯನ್ನು ಚೆನ್ನಾಗಿ ತೊಳೆದುಕೊಂಡು ಒಂದು ಬಾಣಲೆಯಲ್ಲಿ ಕುಚ್ಚಿಲಕ್ಕಿ ಹಾಕಿ ಚೆನ್ನಾಗಿ ಹುರಿದುಕೊಳ್ಳಬೇಕು.ಮಧ್ಯಮ ಉರಿಯಲ್ಲಿಟ್ಟು 15ರಿಂದ 20 ನಿಮಿಷಗಳವರೆಗೆ ಅಕ್ಕಿ ಉಬ್ಬುವವರೆಗೆ ಹುರಿದುಕೊಳ್ಳಬೇಕು.

ಹುರಿದ ಅಕ್ಕಿಯನ್ನು ಮಿಕ್ಸಿಯಲ್ಲಿ ನುಣ್ಣಗೆ ರುಬ್ಬಿ ಪಾತ್ರೆಗೆ ಹಾಕಿಟ್ಟುಕೊಳ್ಳಬೇಕು. ನಂತರ ಒಂದು ಪಾತ್ರೆಗೆ ಬೆಲ್ಲ ಹಾಕಿ ಸ್ವಲ್ಪ ನೀರು ಹಾಕಿ ಪಾಕ ಮಾಡಬೇಕು. 

ಬೆಲ್ಲ ಒಂದೆಳೆ ಪಾಕ ಬರುವವರೆಗೆ ಕುದಿಸಿ ಅದಕ್ಕೆ ತೆಂಗಿನಕಾಯಿ ತುರಿ ಹಾಕಿ. ನಂತರ ಅದಕ್ಕೆ ರುಬ್ಬಿಟ್ಟ ಕುಚ್ಚಿಲಕ್ಕಿ ಪುಡಿ, ತುಪ್ಪದಲ್ಲಿ ಗೋಡಂಬಿ, ದ್ರಾಕ್ಷಿ ಹುರಿದು ಹಾಕಬೇಕು.ಮಿಶ್ರಣವನ್ನು ಚೆನ್ನಾಗಿ ಕಲಸಿಕೊಳ್ಳಿ.

ನಂತರ ಕೈಗೆ ತುಪ್ಪ ಸವರಿಕೊಂಡು ಮಿಶ್ರಣವನ್ನು ಉಂಡೆ ಕಟ್ಟಿ. ಈ ಉಂಡೆಯನ್ನು ಮಕ್ಕಳಿಗೆ ಕೊಟ್ಟರೆ ತುಂಬಾ ಒಳ್ಳೆಯದು. ಪೌಷ್ಟಿಕಯುಕ್ತ ಆರೋಗ್ಯಕರ ತಿನಿಸು ಇದು.

SCROLL FOR NEXT