ಅಡುಗೆ

ಗುಜರಾತ್ ದಾಲ್ ಧೋಕ್ಲಿ

Manjula VN

ಬೇಕಾಗುವ ಪದಾರ್ಥಗಳು...

  • ತೊಗರಿಬೇಳೆ- ಅರ್ಧಗಂಟೆ ನೆನೆಸಿದ್ದು 1 ಬಟ್ಟಲು
  • ಎಣ್ಣೆ- ಸ್ವಲ್ಪ
  • ಕಡಲೆಬೀಜ- ಸ್ವಲ್ಪ
  • ತುಪ್ಪ-1 ಚಮಚ
  • ಸಾಸಿವೆ - ಅರ್ಧ ಚಮಚ
  • ಜೀರಿಗೆ - ಸ್ವಲ್ಪ
  • ಒಣಗಿನ ಮೆಣಸಿನ ಕಾಯಿ -2
  • ಇಂಗು- ಚಿಟಿಕೆಯಷ್ಟು
  • ಕರಿಬೇವು- ಸ್ವಲ್ಪ
  • ಟೊಮೆಟೋ- 1 ಸಣ್ಣಗೆ ಹೆಚ್ಚಿದ್ದು
  • ಶುಂಠಿ,ಬೆಳ್ಳುಳ್ಳು ಪೇಸ್ಟ್- ಸ್ವಲ್ಪ
  • ಅರಿಶಿಣಪುಡಿ- ಸ್ವಲ್ಪ
  • ದನಿಯಾಪುಡಿ - ಅರ್ಧ ಚಮಚ
  • ಗರಂಮಸಾಲೆ ಪುಡಿ - ಅರ್ಧ ಚಮಚ
  • ಅಚ್ಛಖಾರದ ಪುಡಿ- 1 ಚಮಚ
  • ಬೆಲ್ಲ- ಸ್ವಲ್ಪ
  • ಉಪ್ಪು- ರುಚಿಗೆ ತಕ್ಕಷ್ಟು
  • ನಿಂಬೆಹಣ್ಣಿನ ರಸ- ಅರ್ಧ ಚಮಚ
  • ಗೋಧಿ ಹಿಟ್ಟು- 1 ಬಟ್ಟಲು
  • ಓಂಕಾಳು- ಅರ್ಧ ಚಮಚ

ಮಾಡುವ ವಿಧಾನ...

  • ಮೊದಲಿಗೆ ಕುಕ್ಕರ್ ಗೆ ನೆನೆಸಿದ ಬೇಳೆ, ನೀರು ಹಾಕಿ, ಮಧ್ಯೆ ಒಂದು ಸಣ್ಣ ಬಟ್ಟನಲ್ಲಿ ಕಡಲೆಕಾಯಿ ಬೀಜ ಹಾಗೂ ಸ್ವಲ್ಪ ನೀರು ಹಾಕಿ ಚೆನ್ನಾಗಿ ಬೇಯಿಸಿಕೊಳ್ಳಬೇಕು.
  • ಒಲೆಯ ಮೇಲೆ ಬಾಣಲೆ ಇಟ್ಟು ಅದಕ್ಕೆ ಸ್ವಲ್ಪ ಎಣ್ಣೆ, ಸಾಸಿವೆ, ಜೀರಿಗೆ, ಇಂಗು, ಒಣಗಿದ ಮೆಣಸಿನಕಾಯಿ, ಕರಿಬೇವು ಹಾಕಿ ಕೆಂಪಗೆ ಹುರಿದುಕೊಳ್ಳಬೇಕು. ನಂತರ ಶುಂಠಿ, ಬೆಳ್ಳುಳ್ಳಿ ಪೇಸ್ಟ್ ಅರಿಶಿಣದ ಪುಡಿ, ದನಿಯಾಪುಡಿ, ಗರಂ ಮಸಾಲೆ ಪುಡಿ, ಅಚ್ಚ ಖಾರದ ಪುಡಿ ಬೆಲ್ಲ, ಉಪ್ಪು, ನಿಂಬೆಹಣ್ಣಿನ ರಸ ಹಾಕಿ ಕುದಿಸಿಕೊಳ್ಳಬೇಕು. 
  • ನಂತರ ಗೋಧಿ ಹಿಟ್ಟು, ಅರಿಶಿಣ, ಜೀರಿಗೆ, ಉಪ್ಪು ಖಾರದ ಪುಡಿ, ಓಂಕಾಳು, 1 ಚಮಚ ಎಣ್ಣೆ ಹಾಗೂ ನೀರು ಹಾಕಿ ಚಪಾತಿ ಹಿಟ್ಟಿನಂತೆ ಹಿಟ್ಟನ್ನು ಕಲಸಿಕೊಳ್ಳಬೇಕು. ನಂತರ ಹಿಟ್ಟನ್ನು ಉಂಡೆಗಳನ್ನಾಗಿ ಮಾಡಿಕೊಂಡು ಲಟ್ಟಿಸಿಕೊಳ್ಳಬೇಕು. ಚಪಾತಿಯಂತೆ ಲಟ್ಟಿಸಿಕೊಂಡಿದ್ದ ಹಿಟ್ಟನ್ನು ಚೌಕಾಕಾರದಲ್ಲಿ ಕತ್ತರಿಸಿಕೊಂಡು ಈಗಾಗಲೇ ಕುದಿಯುತ್ತಿರುವ ದಾಲ್'ಗೆ ಹಾಕಿ 10 ನಿಮಿಷ ಕುದಿಸಿದರೆ, ರುಚಿಕರವಾದ ಗುಜರಾತ್ ಶೈಲಿಯ ದಾಲ್ ಧೋಕ್ಲಿ ಸವಿಯಲು ಸಿದ್ಧ.
SCROLL FOR NEXT