ಅಡುಗೆ

ಹಲಸಿನ ಹಣ್ಣಿನ ಗುಳಿಯಪ್ಪ

Sumana Upadhyaya

ಬೇಕಾಗುವ ಪದಾರ್ಥಗಳು
ದೋಸೆ ಅಕ್ಕಿ-ಒಂದು ಕುಡ್ತೆ
ಹಲಸಿನ ಹಣ್ಣಿನ ತೊಳೆ-8ರಿಂದ 10
ಬೆಲ್ಲ-ಸಿಹಿಗೆ ತಕ್ಕಷ್ಟು
ರುಚಿಗೆ ತಕ್ಕಷ್ಟು ಉಪ್ಪು
ತೆಂಗಿನ ಕಾಯಿ ತುರಿ-ಸ್ವಲ್ಪ

ಮಾಡುವ ವಿಧಾನ
ದೋಸೆ ಅಕ್ಕಿಯನ್ನು ಒಂದು ಗಂಟೆ ನೆನೆಸಿಡಿ. ನಂತರ ಅದರಿಂದ ನೀರನ್ನು ತೆಗೆದು ಹಲಸಿನ ಹಣ್ಣಿನ ತೊಳೆ, ಬೆಲ್ಲ, ಸ್ವಲ್ಪ ಉಪ್ಪು ಮತ್ತು ತೆಂಗಿನ ಕಾಯಿ ತುರಿ ಹಾಕಿ ನುಣ್ಣಗೆ ಮಿಕ್ಸಿಯಲ್ಲಿ ರುಬ್ಬಿಕೊಳ್ಳಿ. ಹಿಟ್ಟು ದೋಸೆ ಹಿಟ್ಟಿನ ಹದಕ್ಕೆ ಇರಬೇಕು.

ನಂತರ ಪಡ್ಡು ಮಾಡುವ ಪಾತ್ರೆಯನ್ನು ಗ್ಯಾಸ್ ಮೇಲಿಟ್ಟು ಪ್ರತಿ ಗುಳಿಗೆ ಎಣ್ಣೆ ಹಾಕಿ ಅದು ಕಾದ ನಂತರ ಈ ಹಿಟ್ಟನ್ನು ಹಾಕಿ. ಚೆನ್ನಾಗಿ ಎಣ್ಣೆಯಲ್ಲಿ ಬೆಂದಾಗ ಚಮಚ ಸಹಾಯದಿಂದ ಮಗುಚಿ ಹಾಕಿ. ನಂತರ ಒಂದು ಕಡ್ಡಿಯಿಂದ ಇಲ್ಲವೇ ಎರಡು ಚಮಚಗಳ ಸಹಾಯದಿಂದ ತೆಗೆಯಿರಿ.

ಘಮ ಘಮವಾದ ಬಿಸಿ ಬಿಸಿ ಹಲಸಿನ ಗುಳಿಯಪ್ಪ ಸವಿಯಲು ಸಿದ್ದ.

SCROLL FOR NEXT