ಅಡುಗೆ

ಹಲಸಿನ ಬೀಜದ ಹಲ್ವ

Sumana Upadhyaya

ಸಿಹಿಯಾದ ಹಲಸಿನ ಬೀಜದ ಹಲ್ವ ಮಾಡುವ ವಿಧಾನ

ಬೇಕಾಗುವ ಸಾಮಗ್ರಿಗಳು

ಹಲಸಿನ ಬೀಜ-10ರಿಂದ 15

ಹಾಲು

ಸಕ್ಕರೆ

ತುಪ್ಪ


ಮಾಡುವ ವಿಧಾನ

ಹಲಸಿನ ಬೀಜಗಳ ಸಿಪ್ಪೆ ಮೊದಲೇ ತೆಗೆದು ಕುಕ್ಕರ್ ನಲ್ಲಿ ಬೇಯಿಸಿಕೊಳ್ಳಬಹುದು. ಅಥವಾ ಬೇಯಿಸಿಕೊಂಡ ನಂತರವೂ ಬೀಜದ ಸಿಪ್ಪೆ ತೆಗೆಯಬಹುದು. ಬೀಜಗಳು ಸಂಪೂರ್ಣವಾಗಿ ಮುಳುಗುವಷ್ಟು ಹಾಲು ಹಾಕಿ ಬೇಯಿಸಿಕೊಳ್ಳಬೇಕು.ಬೆಂದ ನಂತರ ತಣ್ಣಗಾದ ಮೇಲೆ ಕುಕ್ಕರ್ ನಲ್ಲಿ ಉಳಿದಿರುವ ಹಾಲಿನಲ್ಲಿಯೇ ಬೀಜವನ್ನು ಮಿಕ್ಸಿಯಲ್ಲಿ ಹಾಕಿ ನುಣ್ಣಗೆ ರುಬ್ಬಿಕೊಳ್ಳಬೇಕು.

ನಂತರ ತೆಗೆದು ಬಾಣಲೆಯಲ್ಲಿ ಸ್ವಲ್ಪ  ಹಾಲು, ಸಕ್ಕರೆ ಹಾಕಿ ರುಬ್ಬಿದ ಹಿಟ್ಟನ್ನು ಕಾಯಿಸುತ್ತಾ ಬರಬೇಕು. ಗಟ್ಟಿಯಾಗುತ್ತಾ ಬರುವಾಗ ತುಪ್ಪ ಹಾಕಿ ಮತ್ತೆ ಕಾಯಿಸಬೇಕು. ತಳ ಬಿಡುತ್ತಾ ಬಂದಾಗ ಸ್ವಲ್ಪ ತುಪ್ಪ ಹಾಕಿ ಕಾಯಿಸಿ ತೆಗೆದು ತುಪ್ಪ ಸವರಿದ ತಟ್ಟೆಗೆ ಹಾಕಬೇಕು. ಸ್ವಲ್ಪ ಹೊತ್ತು ಬಿಟ್ಟು ಬೇಕಾದ ಆಕಾರಕ್ಕೆ ಕತ್ತರಿಸಿಕೊಂಡು ಸವಿಯಬಹುದು.

SCROLL FOR NEXT