ಅಡುಗೆ

ಸೀಮೆಬದನೆಕಾಯಿ ಸೂಪ್

Prasad SN

ಬೇಕಾಗುವ ಪದಾರ್ಥಗಳು:

  • ಸೀಮೆಬದನೆಕಾಯಿ (ಮಧ್ಯಮ ಗಾತ್ರ): 1
  • ಹೆಸರು ಬೇಳೆ: 3 ಟೀಸ್ಪೂನ್
  • ಕರಿಮೆಣಸು: 1/2 ಟೀಸ್ಪೂನ್
  • ಜೀರಿಗೆ: 1/2 ಟೀಸ್ಪೂನ್
  • ಕರಿಬೇವಿನ ಸೊಪ್ಪು: ಕೆಲವು
  • ನಿಂಬೆ ರಸ: 1/2 ಟೀಸ್ಪೂನ್
  • ತುಪ್ಪ: 1 ಟೀಸ್ಪೂನ್
  • ಅಗತ್ಯಕ್ಕೆ ತಕ್ಕಷ್ಟು ಅರಿಶಿನ ಪುಡಿ, ಇಂಗು ಮತ್ತು ಉಪ್ಪು

ಮಾಡುವ ವಿಧಾನ

  • ಸೀಮೆಬದನೆಕಾಯಿಯನ್ನು (ಎಳೆಯದಾಗಿದ್ದರೆ) ಅದರ ಸಿಪ್ಪೆ ಸಮೇತವಾಗಿ ಸಣ್ಣ ತುಂಡುಗಳಾಗಿ ಕತ್ತರಿಸಿ. ಕರಿಬೇವಿನ ಸೊಪ್ಪನ್ನು ಕತ್ತರಿಸಿ. ಕರಿಮೆಣಸನ್ನು ಪುಡಿ ಮಾಡಿಕೊಳ್ಳಿ.
  • ಅಗತ್ಯ ಪ್ರಮಾಣದ ನೀರಿನಲ್ಲಿ ಸೀಮೆಬದನೆಕಾಯಿ ಮತ್ತು ಹೆಸರು ಬೇಳೆಗೆ ಉಪ್ಪು ಮತ್ತು ಅರಿಶಿನ ಪುಡಿಯನ್ನು ಸೇರಿಸಿ ಮತ್ತು ಪ್ರೆಶರ್ ಕುಕ್ ಮಾಡಿ. ನಂತರ, ಚೆನ್ನಾಗಿ ಕಿವುಚಿರಿ.
  • ಕರಿಮೆಣಸು ಪುಡಿ, ಜೀರಿಗೆ, ಇಂಗು, ಕರಿಬೇವಿನ ಸೊಪ್ಪನ್ನು ತುಪ್ಪದಲ್ಲಿ ಹದಗೊಳಿಸಿ.
  • ನಿಂಬೆ ರಸದೊಂದಿಗೆ ಬೇಯಿಸಿದ ತರಕಾರಿಗೆ ಸೇರಿಸಿ.
  • ಎಲ್ಲವನ್ನೂ ಚೆನ್ನಾಗಿ ಮಿಶ್ರಣ ಮಾಡಿ. 
ಬೇಕಾಗುವ ಪದಾರ್ಥಗಳು

ಈಗ ಬಿಸಿಬಿಸಿ ಸೂಪ್ ಸವಿಯಲು ಸಿದ್ಧವಾಗಿದೆ.

- ಅಖಿಲಾ ತ್ಯಾಗರಾಜನ್, ಬೆಂಗಳೂರು

SCROLL FOR NEXT