ಅಡುಗೆ

ಕಡಲೆಕಾಯಿ ಬೀಜದ ಸ್ನ್ಯಾಕ್ಸ್

Manjula VN

ಬೇಕಾಗುವ ಪದಾರ್ಥಗಳು.

  • ಕಡಲೆಕಾಯಿ ಬೀಜ- 1 ಬಟ್ಟಲು
  • ಆಲೂಗಡ್ಡೆ- 2 (ಬೇಯಿಸಿದ್ದು)
  • ಉಪ್ಪು- ರುಚಿಗೆ ತಕ್ಕಷ್ಟು
  • ಹಸಿಮೆಣಸಿನ ಕಾಯಿ- 2
  • ಬೆಳ್ಳುಳ್ಳಿ- ಸ್ವಲ್ಪ
  • ಜೀರಿಗೆ-ಸ್ವಲ್ಪ
  • ಚಿಲ್ಲಿ ಫ್ಲೇಕ್ಸ್- ಸ್ವಲ್ಪ
  • ಎಣ್ಣೆ- ಕರಿಯಲು ಅಗತ್ಯವಿದ್ದಷ್ಟು

ಮಾಡುವ ವಿಧಾನ...

  • ಮೊದಲಿಗೆ ಪಾತ್ರೆಯೊಂದಕ್ಕೆ ಕಡಲೆಕಾಯಿ ಬೀಜ, ಸ್ವಲ್ಪ ನೀರು ಹಾಗೂ ಉಪ್ಪು ಹಾಕಿ 5-10 ನಿಮಿಷ ಬೇಯಿಸಿಕೊಳ್ಳಿ.
  • ನಂತರ ಮಿಕ್ಸಿ ಜಾರ್ ತೆಗೆದುಕೊಂಡು ಅದಕ್ಕೆ ಬೇಯಿಸಿದ ಕಡಲೆಕಾಯಿ ಬೀಜ, ಆಲೂಗಡ್ಡೆ, ಉಪ್ಪು, ಜೀರಿಗೆ, ಬೆಳ್ಳುಳ್ಳಿ ಹಾಕಿ ರುಬ್ಬಿಕೊಳ್ಳಿ. ರುಬ್ಬಿದ ಮಿಶ್ರಣವನ್ನು ಹಾಲಿನ ಕವರ್ ನ್ನು ಕೋನ್ ರೀತಿ ಮಾಡಿಕೊಂಡು ಅದರಲ್ಲಿ ಮಿಶ್ರಣ ತುಂಬಿಕೊಳ್ಳಿ.
  • ಬಳಿಕ ಒಲೆಯ ಮೇಲೆ ಬಾಣಲೆ ಇಟ್ಟು ಎಣ್ಣೆಯನ್ನು ಹಾಕಿ. ಎಣ್ಣೆ ಕಾದ ನಂತರ ಕೋನ್ ನಲ್ಲಿ ತುಂಬಿದ ಮಿಶ್ರಣವನ್ನು ಕಡಲೆಕಾಯಿ ಬೀಜದ ಗಾತ್ರಕ್ಕೆ ಎಣ್ಣೆಯಲ್ಲಿ ಬಿಟ್ಟು, ಚಿನ್ನದ ಬಣ್ಣ ಬರುವವರೆಗೆ ಕರಿದುಕೊಂಡರೆ ರುಚಿಕರವಾದ ಕಡಲೆಕಾಯಿ ಬೀಜದ ಸ್ನ್ಯಾಕ್ಸ್ ಸವಿಯಲು ಸಿದ್ಧ.
SCROLL FOR NEXT