ಅಡುಗೆ

ಮೆಣಸಿನ ರಸಮ್

Manjula VN

ಬೇಕಾಗುವ ಪದಾರ್ಥಗಳು...

  • ಹುಣಸೆಹಣ್ಣು: ಸ್ವಲ್ಪ
  • ಟೊಮೆಟೊ: ಕತ್ತರಿಸಿದ್ದು 1
  • ತುಪ್ಪ: 1 ಚಮಚ
  • ಕಾಳು ಮೆಣಸಿನ ಪುಡಿ: 2 ಚಮಚ
  • ಅರಿಶಿನ ಪುಡಿ: 1/4 ಚಮಚ
  • ಬೆಲ್ಲ: 1 ಚಮಚ
  • ಇಂಗು: 1/8 ಚಮಚ
  • ಉಪ್ಪು- ರುಚಿಗೆ ತಕ್ಕಷ್ಟು
  • ಸಾಸಿವೆ: ಸ್ವಲ್ಪ
  • ಕರಿಬೇವು- ಸ್ವಲ್ಪ
  • ಕೊತ್ತಂಬರಿ ಸೊಪ್ಪು: ಸ್ವಲ್ಪ

ಮಾಡುವ ವಿಧಾನ...

  • ಹುಣಸೆಹಣ್ಣನ್ನು ಒಂದು ಬೆಚ್ಚಗಿನ ನೀರಿನಲ್ಲಿ 15 ನಿಮಿಷಗಳ ಕಾಲ ನೆನೆಸಿಡಿ. ತಿರುಳು ಮತ್ತು ಬೀಜಗಳನ್ನು ತೆಗೆದು ರಸವನ್ನು ತೆಗೆದಿಟ್ಟುಕೊಳ್ಳಿ
  • ಬಳಿಕ ಒಂದು ಪಾತ್ರೆಯಲ್ಲಿ ಹುಣಸೆ ನೀರು, ಟೊಮ್ಯಾಟೋ, ಮೆಣಸಿನ ಪುಡಿ, ಬೆಲ್ಲ, ಅರಿಶಿಣದ ಪುಡಿ, ಉಪ್ಪು ಹಾಗೂ ನೀರು ಸೇರಿ ಚೆನ್ನಾಗಿ ಮಿಶ್ರಣ ಮಾಡಿ.
  • ನಂತರ ಒಲೆಯ ಮೇಲಿಟ್ಟು ಚೆನ್ನಾಗಿ ಕುದಿಸಿ. ಪ್ಯಾನ್ ವೊಂದರಲ್ಲಿ ತುಪ್ಪ ಹಾಕಿ. ಕಾದ ನಂತರ ಸಾಸಿವೆ, ಕರಿಬೇವು ಹಾಗೂ ಇಂಗು ಹಾಕಿ ಕೆಂಪಗಾದ ಬಳಿಕ ಸಣ್ಣಗೆ ಕತ್ತರಿಸಿದ ಕೊತ್ತಂಬರಿ ಸೊಪ್ಪಿನ ಜೊತೆಗೆ ಇದನ್ನು ರಸಕ್ಕೆ ಸೇರಿಸಿದರೆ ರುಚಿಕರವಾದ ಮೆಣಸಿನ ರಸಮ್ ಸವಿಯಲು ಸಿದ್ಧ.
SCROLL FOR NEXT