ಗ್ರೀನ್ ಎಗ್ ಮಸಾಲಾ 
ಅಡುಗೆ

ಗ್ರೀನ್ ಎಗ್ ಮಸಾಲಾ

ಗ್ರೀನ್ ಎಗ್ ಮಸಾಲಾ ಮಾಡುವ ವಿಧಾನ...

ಬೇಕಾಗುವ ಪದಾರ್ಥಗಳು...

  • ಮೊಟ್ಟೆ- 4 (ಬೇಯಿಸಿದ್ದು)
  • ಶುಂಠಿ- ಸ್ವಲ್ಪ
  • ಬೆಳ್ಳುಳ್ಳಿ-ಸ್ವಲ್ಪ
  • ಗೋಡಂಬಿ- 10
  • ಹಸಿಮೆಣಸಿನ ಕಾಯಿ-4
  • ಮೊಸರು- 5 ಚಮಚ
  • ಪುದೀನಾ- ಸ್ವಲ್ಪ
  • ಕೊತ್ತಂಬರಿ - ಸ್ವಲ್ಪ
  • ಎಣ್ಣೆ- ಸ್ವಲ್ಪ
  • ಜೀರಿಗೆ- ಅರ್ಧ ಚಮಚ
  • ಕರಿಬೇವು-ಸ್ವಲ್ಪ
  • ಈರುಳ್ಳಿ- 1 (ಸಣ್ಣಗೆ ಕತ್ತರಿಸಿಕೊಂಡಿದ್ದು)
  • ದನಿಯಾ ಪುಡಿ- 1 ಚಮಚ
  • ಅಚ್ಚಖಾರದ ಪುಡಿ- ಅರ್ಧ ಚಮಚ
  • ಅರಿಶಿಣದ ಪುಡಿ- ಸ್ವಲ್ಪ
  • ಚಕ್ಕೆ/ಲವಂಗ ಪುಡಿ ಅಥವಾ ಗರಂ ಮಸಾಲಾ ಪುಡಿ- ಅರ್ಧ ಚಮಚ
  • ಕಾಳು ಮೆಣಸಿನ ಪುಡಿ- ಅರ್ಧ ಚಮಚ
  • ಉಪ್ಪು- ರುಚಿಗೆ ತಕ್ಕಷ್ಟು

ಮಾಡುವ ವಿಧಾನ...

  • ಮೊದಲಿಗೆ ಮಿಕ್ಸಿ ಜಾರ್'ಗೆ ಶುಂಠಿ, ಬೆಳ್ಳುಳ್ಳಿ, ಗೋಡಂಬಿ, ಹಸಿಮೆಣಸಿನ ಕಾಯಿ, ಮೊಸರು, ಪುದೀನಾ ಹಾಗೂ ಕೊತ್ತಂಬರಿ ಹಾಕಿ ಸ್ವಲ್ಪ ನೀರು ಸೇರಿಸಿ ನುಣ್ಣಗೆ ರುಬ್ಬಿಕೊಳ್ಳಿ.
  • ಬಾಣಲೆಯನ್ನು ಒಲೆಯ ಮೇಲಿಟ್ಟು ಎಣ್ಣೆ ಹಾಕಿ. ಕಾದ ನಂತರ ಜೀರಿಗೆ, ಕರಿಬೇವು ಹಾಗೂ ಈರುಳ್ಳಿ ಹಾಕಿ ಕೆಂಪಗೆ ಹುರಿದುಕೊಳ್ಳಿ. ಇದೀಗ ರುಬ್ಬಿದ ಮಿಶ್ರಣವನ್ನು ಹಾಕಿ 10 ನಿಮಿಷ ಕೈಯಾಡಿಸಿ. ಇದೀಗ ದನಿಯಾ ಪುಡಿ, ಅಚ್ಚಖಾರದ ಪುಡಿ, ಅರಿಶಿಣದ ಪುಡಿ, ಚಕ್ಕೆ/ಲವಂಗ ಪುಡಿ ಅಥವಾ ಗರಂ ಮಸಾಲಾ ಪುಡಿ, ಕಾಳು ಮೆಣಸಿನ ಪುಡಿ, ಉಪ್ಪು ಹಾಕಿ ಮಿಶ್ರಣ ಮಾಡಿ.
  • ಈ ಮಸಾಲೆ ಎಣ್ಣೆ ಬಿಟ್ಟುಕೊಳ್ಳುವವರೆಗೆ ಕೈಯಾಡಿಸುತ್ತಿರಿ. ಇದೀಗ ಮೊಟ್ಟೆಯನ್ನು ವೃತ್ತಾಕಾರದಲ್ಲಿ ಕತ್ತರಿಸಿಕೊಂಡು. ಇದನ್ನು ಮಸಾಲೆಗೆ ಸೇರಿಸಿ ಮಿಶ್ರಣ ಮಾಡಿ. 3- ನಿಮಿಷ ಮಸಾಲೆಯೊಂದಿಗೆ ಕುಡಿಯಲು ಬಿಡಿ. ಇದೀಗ ಕೊತ್ತಂಬರಿ ಸೊಪ್ಪಿನೊಂದಿಗೆ ಅಲಂಕರಿಸಿದರೆ ರುಚಿಕರವಾದ ಗ್ರೀನ್ ಎಗ್ ಮಸಾಲೆ ಸವಿಯಲು ಸಿದ್ಧ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

45 ಮಂದಿಗೆ ಪದ್ಮಶ್ರೀ ಪ್ರಶಸ್ತಿ ಘೋಷಣೆ: ಕರ್ನಾಟಕದ 3 ಸಾಧಕರಿಗೆ ಗೌರವ

CCL 2026: ಭೋಜ್‌ಪುರಿ ದಬಾಂಗ್ಸ್ ವಿರುದ್ಧ ಕರ್ನಾಟಕ ಬುಲ್ಡೋಜರ್ಸ್ಗೆ 18 ರನ್‌ಗಳ ರೋಚಕ ಜಯ, ಸೆಮಿಫೈನಲ್‌ಗೆ ಎಂಟ್ರಿ!

ನಮಗೂ 'ಟೈಮ್' ಬರುತ್ತೆ: ದೇವೇಗೌಡರ ಹೇಳಿಕೆಗೆ ಸಿಎಂ ಸಿದ್ದರಾಮಯ್ಯ ತಿರುಗೇಟು!

ದಶಕಗಳ ಕಾಲ ಭಾರತದಲ್ಲಿನ ಹಲವು ಘಟನೆಗಳ 'BBC ವರದಿ' ಹಿಂದಿದ್ದ ಹಿರಿಯ ಪತ್ರಕರ್ತ ಮಾರ್ಕ್ ಟುಲ್ಲಿ ನಿಧನ!

'ಬೆಂಗಳೂರಿನ ಮೂಲಕ ಜಗತ್ತು ನೋಡುತ್ತಿದೆ.. ವಿದೇಶದಲ್ಲಿ ಭಾರತದ ವಿರುದ್ಧ ಮಾತನಾಡುವುದಿಲ್ಲ': ಡಿಸಿಎಂ ಡಿಕೆ ಶಿವಕುಮಾರ್

SCROLL FOR NEXT