ಅಡುಗೆ

ಶುಂಠಿ ಕ್ಯಾಂಡಿ

Manjula VN

ಬೇಕಾಗುವ ಪದಾರ್ಥಗಳು...

  • ಶುಂಠಿ- 150 ಗ್ರಾಂ
  • ಬೆಲ್ಲೆ-  400 ಗ್ರಾಂ
  • ಕಪ್ಪು ಉಪ್ಪು- ಅರ್ಧ ಚಮಚ
  • ಅರಿಶಿಣದ ಪುಡಿ- ಕಾಲು ಚಮಚ
  • ಕಾಳು ಮೆಣಸಿನ ಪುಡಿ- ಅರ್ಧ ಚಮಚ
  • ತುಪ್ಪ- ಅರ್ಧ ಚಮಚ

ಮಾಡುವ ವಿಧಾನ...

  • ಮೊದಲನೆಯದಾಗಿ, ಶುಂಠಿಯ ಸಿಪ್ಪೆಯನ್ನು ಕತ್ತರಿಸಿಕೊಳ್ಳಿ. ಬ್ಲೆಂಡರ್ ಹಾಕಿ ಅಗತ್ಯವಿದ್ದಷ್ಟು ನೀರು ಸೇರಿಸಿ ನುಣ್ಣಗೆ ರುಬ್ಬಿಕೊಳ್ಳಿ.
  • ನಂತರ ಒಲೆಯ ಮೇಲೆ ಬಾಣಲೆ ಇಟ್ಟು, ಪೇಸ್ಟ್ ನ್ನು ಹಾಕಿ ಒಂದು ನಿಮಿಷ ಕೈಯಾಡಿಸಿ. ಬಳಿಕ ಬೆಲ್ಲವನ್ನು ಸೇರಿಸಿ. ಬೆಲ್ಲವು ಸಂಪೂರ್ಣವಾಗಿ ಕರಗುವವರೆಗೆ ಕಲಕಿ.
  • ಮಿಶ್ರಣವು ದಪ್ಪವಾಗುವವರೆಗೆ ಕೈಯಾಡಿಸುತ್ತಲೇ ಇರಿ. ಸಿರಪ್ ಅನ್ನು ನೀರಿನಲ್ಲಿ ಹಾಕಿ ಸ್ಥಿರತೆಯನ್ನು ಪರಿಶೀಲಿಸಿಸಿ. ಸಿರಪ್ ನೀರಿನಲ್ಲಿ ಹಾಕಿದ ಬಳಿಕ ಮೃದುವಾದ ಚೆಂಡಿನ ಸ್ಥಿರತೆಗೆ ಬಂದಿದ್ದರೆ ಸರಿಯಾಗಿ ಗಟ್ಟಿಯಾಗಿದೆ ಎಂದರ್ಥ.
  • ಇದೀಗ ಕಪ್ಪು ಉಪ್ಪು, ಅರಿಶಿಣದ ಪುಡಿ, ಕಾಳು ಮೆಣಸಿನ ಪುಡಿ, ತುಪ್ಪವನ್ನು ಸೇರಿಸಿ ಚೆನ್ನಾಗಿ ಮಿಶ್ರಣ ಮಾಡಿ.
  • ಬಳಿಕ ಒಂದು ಬಟರ್ ಪೇಪರ್ ತೆಗೆದುಕೊಂಡು ಅದರ ಮೇಲೆ ಒಂದು ಚಮಚದಲ್ಲಿ ಮಿಶ್ರಣವನ್ನು ಬಿಲ್ಲೆ ಗಾತ್ರಕ್ಕೆ ಹಾಕುತ್ತಾ ಹೋಗಿ. ತಣ್ಣಗಾದ ನಂತರ, ಅದು ಪೇಪರ್ ನಲ್ಲಿ ಅಂಟಿಕೊಳ್ಳುವುದನ್ನು ತಪ್ಪಿಸಲು ಸಕ್ಕರೆ ಪುಡಿಯಿಂದ ಕೋಟ್ ಮಾಡಿ. ಇದೀಗ ಶುಂಠಿ ಕ್ಯಾಂಡಿ ಸವಿಯಲು ಸಿದ್ಧ.
SCROLL FOR NEXT