- ತುಪ್ಪ- ಅರ್ಧ ಬಟ್ಟಲು
- ಬಾಸುಮತಿ ಅಕ್ಕಿ- ಒಂದು ಬಟ್ಟಲು
- ಹಾಲು- ಅರ್ಧ ಲೀಟರ್
- ದ್ರಾಕ್ಷಿ- ಸ್ವಲ್ಪ
- ಗೋಡಂಬಿ-ಸ್ವಲ್ಪ
- ಏಲಕ್ಕಿ 2-3
- ಕೇಸರಿ- ಸ್ವಲ್ಪ
- ಸಕ್ಕರೆ- ಒಂದೂವರೆ ಬಟ್ಟಲು
- ಪಿಸ್ತಾ- 10-15
- ಒಂದು ಪಾತ್ರೆಗೆ ತುಪ್ಪವನ್ನು ಹಾಕಿ ಬಿಸಿ ಮಾಡಿ. ಅದಕ್ಕೆ ಅಕ್ಕಿಯನ್ನು ಹಾಕಿ ಪ್ರೈ ಮಾಡಿ. ನಂತರ ಇದೇ ಪಾತ್ರೆಯಲ್ಲಿಯೇ ದ್ರಾಕ್ಷಿ ಹಾಗೂ ಗೋಡಂಬಿಯನ್ನು ಹುರಿದಿಟ್ಟುಕೊಳ್ಳಿ. ಮತ್ತೊಂದು ಪಾತ್ರೆಯಲ್ಲಿ ಹಾಲನ್ನು ಕುದಿಸಲು ಇಡಿ. ಅದಕ್ಕೆ ಸಕ್ಕರೆಯನ್ನು ಹಾಕಿ.
- ಹಾಲು ತಳ ಹಿಡಿಯದಂತೆ ನೋಡಿಕೊಳ್ಳಿ. ಬಳಿಕ ಏಲಕ್ಕಿ ಪುಡಿ, ಕೇಸರಿ ಹಾಗೂ ಸಣ್ಣಗೆ ಕತ್ತರಿಸಿಕೊಂಡ ಪಿಸ್ತಾವನ್ನು ಹಾಕಿ. ನಂತರ ಹಾಲಿಗೆ ಅಕ್ಕಿಯನ್ನು ಹಾಕಿ ಬೇಯಿಸಿ. ಅಕ್ಕಿ ಬೆಂದ ನಂತರ ಸ್ವಲ್ಪ ತಣ್ಣಗಾಗಲು ಬಿಡಿ. ಬಳಿಕ ಫ್ರಿಡ್ಜ್ ನಲ್ಲಿಟ್ಟು, ತಣ್ಣನೆಯ ಕೀರನ್ನು ಸವಿಯಿರಿ.