ಬೇಕಾಗುವ ಪದಾರ್ಥಗಳು...
ಮೊಟ್ಟೆ-4 (ಬೇಯಿಸಿ ಸಿಪ್ಪೆ ತೆಗೆದುಕೊಂಡಿದ್ದು)
ಎಣ್ಣೆ-ಕರಿಯಲು ಅಗತ್ಯವಿರುವಷ್ಟು
ಬೆಳ್ಳುಳ್ಳಿ-1 ಚಮಚ (ಸಣ್ಣಗೆ ಕತ್ತರಿಸಿಕೊಂಡಿದ್ದು)
ಶುಂಠಿ-1 ಚಮಚ (ಸಣ್ಣಗೆ ಕತ್ತರಿಸಿಕೊಂಡಿದ್ದು)
ಈರುಳ್ಳಿ-1, (ಸಣ್ಣಗೆ ಕತ್ತರಿಸಿಕೊಂಡಿದ್ದು)
ಕ್ಯಾಪ್ಸಿಕಂ-1 (ಸಣ್ಣಗೆ ಕತ್ತರಿಸಿಕೊಂಡಿದ್ದು)
ಉಪ್ಪು-ರುಚಿಗೆ ತಕ್ಕಷ್ಟು
ಸಕ್ಕರೆ-ಸ್ವಲ್ಪ
ಖಾರದ ಪುಡಿ-2 ಚಮಚ
ಕಾಳುಮೆಣಸಿನ ಪುಡಿ-1 ಚಮಚ
ಮೈದಾ-1/2 ಬಟ್ಟಲು
ಕಾರ್ನ್ ಫ್ಲೋರ್-1/2 ಬಟ್ಟಲು
ಬೇಕಿಂಗ್ ಪೌಡರ್-1 ಟೀ ಚಮಚ
ಟೊಮೆಟೊ-ಕೆಚಪ್-3 ಚಮಚ
ಸೋಯಾ ಸಾಸ್-1 ಚಮಚ
ವಿನೇಗರ್-1 ½ ಚಮಚ
ಗ್ರೀನ್ ಚಿಲ್ಲಿ ಸಾಸ್-2 ಚಮಚ
ಮಾಡುವ ವಿಧಾನ...
ಮೊದಲಿಗೆ ಒಂದು ಬೌಲ್ ಗೆ ಟೊಮೆಟೋ ಕೆಚಪ್, ಸೋಯಾ ಸಾಸ್, ವಿನೇಗರ್, ಗ್ರೀನ್ ಚಿಲ್ಲಿ ಸಾಸ್ ಅನ್ನು ಹಾಕಿಕೊಂಡು ಚೆನ್ನಾಗಿ ಮಿಕ್ಸ್ ಮಾಡಿ ಒಂದು ಕಡೆ ಇಟ್ಟುಕೊಳ್ಳಿ.
ಮತ್ತೊಂದು ಬೌಲ್ ಗೆ ಮೈದಾ, ಕಾರ್ನ್ ಫ್ಲೋರ್, ಬೇಕಿಂಗ್ ಪೌಡರ್, ರುಚಿಗೆ ತಕ್ಕಷ್ಟು ಉಪ್ಪು, ಹಾಕಿ ಸ್ವಲ್ಪ ಸ್ವಲ್ಪವೇ ನೀರು ಸೇರಿಸಿ ದಪ್ಪ ಪೇಸ್ಟ್ ಮಾಡಿಕೊಳ್ಳಿ.
ನಂತರ ಮೊಟ್ಟೆಯನ್ನು ಎರಡು ಭಾಗವಾಗಿ ಕತ್ತರಿಸಿಕೊಂಡು ಈ ಮಿಶ್ರಣದಲ್ಲಿ ಅದ್ದಿಕೊಳ್ಳಿ. ಗ್ಯಾಸ್ ಮೇಲೆ ಎಣ್ಣೆ ಬಾಣಲೆಯಲ್ಲಿಟ್ಟು ಅದು ಬಿಸಿಯಾಗುತ್ತಲೇ ಮೊಟ್ಟೆ ಹಾಕಿ ಹೊಂಬಣ್ಣ ಬರುವವರೆಗೆ ಕರಿಯಿರಿ.
ನಂತರ ಗ್ಯಾಸ್ ಮೇಲೆ ಒಂದು ಪ್ಯಾನ್ ಇಟ್ಟು ಅದು ಬಿಸಿಯಾಗುತ್ತಲೇ 1 ಟೀ ಚಮಚ ಎಣ್ಣೆ ಹಾಕಿಚ ನಂತರ ಅದಕ್ಕೆ ಬೆಳ್ಳುಳ್ಳಿ, ಶುಂಠಿ ಹಾಕಿ 1 ನಿಮಿಷಗಳ ಕಾಲ ಫ್ರೈ ಮಾಡಿ. ನಂತರ ಈರುಳ್ಳಿ ಹಾಕಿ ಕೆಂಪಾಗುವವರೆಗೆ ಫ್ರೈ ಮಾಡಿ. ಇದಾದ ಬಳಿಕ ಕ್ಯಾಪ್ಸಿಕಂ ಸೇರಿಸಿ 2 ನಿಮಿಷಗಳ ಕಾಲ ಕೈಯಾಡಿಸಿ. ಇದಕ್ಕೆ ರೆಡಿ ಮಾಡಿಟ್ಟುಕೊಂಡ ಸಾಸ್, ಖಾರದ ಪುಡಿ, ಕಾಳುಮೆಣಸಿನ ಪುಡಿ, ರುಚಿಗೆ ತಕ್ಕಷ್ಟು ಉಪ್ಪು, ಸಕ್ಕರೆ ಸೇರಿಸಿ ಇದು ದಪ್ಪಗಾಗುವವರೆಗೆ ಮಿಶ್ರಣ ಮಾಡಿ. ನಂತರ ಇದಕ್ಕೆ ಫ್ರೈ ಮಾಡಿಕೊಂಡ ಮೊಟ್ಟೆ ಸೇರಿಸಿ ಮಿಕ್ಸ್ ಮಾಡಿದರೆ ರುಚಿಕರವಾದ ಎಗ್ ಚಿಲ್ಲಿ ಸವಿಯಲು ಸಿದ್ಧ.