ನವಣೆ ವಡೆ 
ಅಡುಗೆ

ನವಣೆ ವಡೆ | Foxtail Millet Vada Recipe in Kannada

ರುಚಿಕರವಾದ ನವಣೆ ವಡೆ ಮಾಡುವ ವಿಧಾನ...

ಬೇಕಾಗುವ ಪದಾರ್ಥಗಳು...

  • ನವಣೆ ಅಕ್ಕಿ – 2 ಬಟ್ಟಲು (ಬೇಯಿಸಿದ್ದು)

  • ಎಣ್ಣೆ- ಕರಿಯಲು ಅಗತ್ಯವಿದ್ದಷ್ಟು

  • ಈರುಳ್ಳಿ - 1 ಮಧ್ಯಮ ಗಾತ್ರದ್ದುಟ

  • ಕ್ಯಾರೆಟ್ -1 ಸಣ್ಣಗೆ ಕತ್ತರಿಸಿದ್ದು

  • ಕ್ಯಾಪ್ಸಿಕಂ -1/2 ಬಟ್ಟಲು ಸಣ್ಣಗೆ ಕತ್ತರಿಸಿದ್ದು

  • ಹಸಿಮೆಣಸಿನ ಕಾಯಿ-1 ಕತ್ತರಿಸಿದ್ದು

  • ಅಚ್ಚಖಾರದ ಪುಡಿ- 1 ಟೀ ಚಮಚ

  • ಟೊಮೆಟೊ ಕೆಚಪ್ -2 ಚಮಚ

  • ಗರಂ ಮಸಾಲ -1 ಚಮಚ

  • ಉಪ್ಪು -ರುಚಿಗೆ ತಕ್ಕಷ್ಟು

  • ಕೊತ್ತಂಬರಿ ಸೊಪ್ಪು -1/2 ಬಟ್ಟಲು

ಮಾಡುವ ವಿಧಾನ..

  • ಮೊದಲಿಗೆ ಚಮಚ ಎಣ್ಣೆಯನ್ನು ಪ್ಯಾನ್ ಗೆ ಹಾಕಿ ಅದಕ್ಕೆ ಎಲ್ಲಾ ತರಕಾರಿಯನ್ನು ಹಾಕಿ ಕೆಂಪಗೆ ಹುರಿದುಕೊಳ್ಳಿ. ಇದಕ್ಕೆ ರುಚಿಗೆ ತಕ್ಕಷ್ಟು ಉಪ್ಪು, ಖಾರದಪುಡಿ, ಗರಂ ಮಸಾಲ, ಟೊಮೆಟೋ ಕೆಚಪ್ ಹಾಕಿ ಚೆನ್ನಾಗಿ ಮಿಶ್ರಣ ಮಾಡಿಕೊಳ್ಳಿ.

  • ನಂತರ ಬೇಯಿಸಿಟ್ಟುಕೊಂಡ ನವಣೆ ಅಕ್ಕಿ, ಕೊತ್ತಂಬರಿ ಸೊಪ್ಪು ಸೇರಿಸಿ ಚೆನ್ನಾಗಿ ಮಿಶ್ರಣ ಮಾಡಿ.

  • ಇದನ್ನು ಒಂದು ಬೌಲ್ ಗೆ ತೆಗೆದಿಟ್ಟುಕೊಳ್ಳಿ. ತಣ್ಣಗಾದ ಬಳಿಕ ಕೈಯಿಂದ ಸ್ವಲ್ಪ ಸ್ವಲ್ಪವೇ ತೆಗೆದುಕೊಂಡು ವಡೆ ತರಹ ತಟ್ಟಿಕೊಳ್ಳಿ. ಕಾದ ಎಣ್ಣೆಗೆ ಬಿಟ್ಟು ಚಿನ್ನದ ಬಣ್ಣ ಬರುವವರೆಗೆ ಕರಿಯಿರಿ. ಇದೀಗ ರುಚಿಕರವಾದ ನವಣೆ ಅಕ್ಕಿ ವಡೆ ಸವಿಯಲು ಸಿದ್ಧ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಹೈಕೋರ್ಟ್‌ನಲ್ಲಿ ಮುಟ್ಟಿನ ರಜೆ ಸಮರ್ಥಿಸಿಕೊಂಡ ಸರ್ಕಾರ; ವಿಚಾರಣೆ ಜನವರಿ 20 ಕ್ಕೆ ಮುಂದೂಡಿಕೆ

ಕೇಂದ್ರ ಅರಣ್ಯ ಇಲಾಖೆಯಿಂದ ಸಿಗದ ಅನುಮತಿ: ಎತ್ತಿನ ಹೊಳೆ ಯೋಜನೆ ಮತ್ತಷ್ಟು ವಿಳಂಬ

ರಾಜ್ಯದ ಯುವ ಉದ್ಯೋಗಾಕಾಂಕ್ಷಿಗಳ ತಾಳ್ಮೆ ಪರೀಕ್ಷಿಸಬೇಡಿ: ಸರ್ಕಾರಕ್ಕೆ ವಿಜಯೇಂದ್ರ ಎಚ್ಚರಿಕೆ

ಭಾರತ ಬ್ರಿಕ್ಸ್ ಕರೆನ್ಸಿ ಬೇಡ ಎಂದದ್ದೇಕೆ? (ಹಣಕ್ಲಾಸು)

'BJP– RSS ಭಿನ್ನಾಭಿಪ್ರಾಯದಿಂದ ಪಿತೂರಿ: ವೀರೇಂದ್ರ ಹೆಗ್ಗಡೆ ಅವರ ಮೇಲೆ ಷಡ್ಯಂತ್ರ; ನನ್ನ ನಿರ್ಧಾರಕ್ಕೆ ಜೈನ ಸಮುದಾಯದಿಂದ ಮೆಚ್ಚುಗೆ'

SCROLL FOR NEXT