ಬೇಕಾಗುವ ಪದಾರ್ಥಗಳು...
ಮಶ್ರೂಮ್- 1 ಬಟ್ಟಲು
ಬೆಣ್ಣೆ- 1 ಚಮಚ
ಬೆಳ್ಳುಳ್ಳಿ- ಸ್ವಲ್ಪ (ಸಣ್ಣಗೆ ಕತ್ತರಿಸಿದ್ದು)
ಕಾಳುಮೆಣಸು- 1 ಚಮಚ (ತರಿತರಿಯಾಗಿ ಪುಡಿ ಮಾಡಿದ್ದು)
ಉಪ್ಪು-ರುಚಿಗೆ ತಕ್ಕಷ್ಟು
ಕೊತ್ತಂಬರಿಸೊಪ್ಪು-ಸ್ವಲ್ಪ
ಮಿಕ್ಸಡ್ ಹರ್ಬ್ಸ್- 1 ಚಮಚ
ಮಾಡುವ ವಿಧಾನ...
ಮಶ್ರೂಮ್ ಅನ್ನು ಚೆನ್ನಾಗಿ ತೊಳೆದು ಚಿಕ್ಕದ್ದಾಗಿ ಕತ್ತರಿಸಿಕೊಳ್ಳಿ. ನಂತರ ಗ್ಯಾಸ್ ಮೇಲೆ ಪ್ಯಾನ್ ಇಟ್ಟು ಅದಕ್ಕೆ ಬೆಣ್ಣೆ ಹಾಕಿ ಅದು ಕರಗುತ್ತಿದ್ದಂತೆ ಬೆಳ್ಳುಳ್ಳಿ ಸೇರಿಸಿ 2 ನಿಮಿಷಗಳ ಕಾಲ ಫ್ರೈ ಮಾಡಿ.
ನಂತರ ಅದಕ್ಕೆ ಮಶ್ರೂಮ್ ಸೇರಿಸಿ ಮಿಶ್ರಣ ಮಾಡಿ. ಸ್ವಲ್ಪ ಹೊತ್ತಿನ ನಂತರ ಮಶ್ರೂಮ್ ನೀರು ಬಿಡುತ್ತದೆ. ನೀರು ಆವಿಯಾಗುವವರೆಗೆ ಚೆನ್ನಾಗಿ ಬೇಯಿಸಿಕೊಳ್ಳಿ. ನಂತರ ಇದಕ್ಕೆ ಕಾಳುಮೆಣಸಿನ ಪುಡಿ, ಮಿಕ್ಸಡ್ ಹರ್ಬ್ಸ್ ಸೇರಿಸಿ ಮಿಕ್ಸ್ ಮಾಡಿ. ಬಳಿಕ ಉಪ್ಪು, ಕೊತ್ತಂಬರಿಸೊಪ್ಪು ಸೇರಿಸಿದರೆ ರುಚಿಕರವಾದ ಗಾರ್ಲಿಕ್ ಮಶ್ರೂಮ್ ಸವಿಯಲು ಸಿದ್ಧ.