ನೈಯ್ಯಪ್ಪ  
ಅಡುಗೆ

ನೈಯ್ಯಪ್ಪ | Neiappa Recipe in Kannada

ರುಚಿಕರವಾದ ನೈಯ್ಯಪ್ಪ ಮಾಡುವ ವಿಧಾನ...

ಬೇಕಾಗುವ ಪದಾರ್ಥಗಳು...

  • ದೋಸೆ ಅಕ್ಕಿ- 2 ಬಟ್ಟಲು

  • ಬೆಲ್ಲ- 1.5 ಬಟ್ಟಲು

  • ಕಪ್ಪು ಎಳ್ಳು- 1 ಚಮಚ

  • ಏಲಕ್ಕಿ- ಚಿಟಿಕೆ

  • ಮೈದಾ- 3 ಟೀ ಚಮಚ

  • ತುಪ್ಪ- 2 ಚಮಚ

  • ತೆಂಗಿನತುರಿ- 2 ಚಮಚ

  • ಉಪ್ಪು- ಚಿಟಿಕೆ

  • ಅಡುಗೆ ಸೋಡಾ- ಚಿಟಿಕೆ

ಮಾಡುವ ವಿಧಾನ...

  • ಮೊದಲಿಗೆ ದೋಸೆ ಅಕ್ಕಿಯನ್ನು ಚೆನ್ನಾಗಿ ತೊಳೆದು, ನೀರು ಹಾಕಿ 5 ಗಂಟೆಗಳ ನೆನೆಯಲು ಬಿಡಿ. ನಂತರ ಮಿಕ್ಸಿ ಜಾರಿಗೆ ಅಕ್ಕಿ, ಸೋಸಿದ ಬೆಲ್ಲ, ಚಿಟಿಕೆ ಉಪ್ಪು ಹಾಗೂ ಏಲಕ್ಕಿ ಹಾಕಿ ರುಬ್ಬಿಕೊಳ್ಳಿ.

  • ಬಳಿಕ ಈ ಹಿಟ್ಟಿಗೆ ಕಪ್ಪು ಎಳ್ಳು ಹಾಗೂ ಮೈದಾ ಹಾಕಿ ಚೆನ್ನಾಗಿ ಮಿಶ್ರಣ ಮಾಡಿ. ನಂತರ ತೆಂಗಿನತುರಿಯನ್ನು ತುಪ್ಪದಲ್ಲಿ ಹುರಿಯಿರಿ.

  • ರುಬ್ಬಿದ ಹಿಟ್ಟಿಗೆ ತೆಂಗಿನ ತುರಿ ಹಾಕಿ ಮಿಶ್ರಣ ಮಡಿ, 7 ರಿಂದ 8 ಗಂಟೆ ಕಾಲ ಹಾಗೆ ಇಡಿ. ಹಿಟ್ಟು ದೋಸೆ ಹಿಟ್ಟಿನ ಹದಕ್ಕಿಂತ ಸ್ವಲ್ಪ ತೆಳ್ಳಗಿರಲಿ.

  • ಒಂದು ಬಾಣಲೆಯನ್ನು ಒಲೆಯ ಮೇಲಿಟ್ಟು ಎಣ್ಣೆ ಹಾಕಿ ಈ ವೇಳೆ ಹಿಟ್ಟಿಗೆ ಸ್ವಲ್ಪ ಅಡುಗೆ ಸೋಡಾ ಹಾಕಿ ಮಿಶ್ರಣ ಮಾಡಿ.

  • ನಂತರ ಎಣ್ಣೆ ಬಿಸಿಯಾದಾಗ ಹಿಟ್ಟನ್ನು ಎಣ್ಣೆಗೆ ಹಾಕಿ, ಈ ವೇಳೆ ಪೂರಿಯಂತೆ ಉಬ್ಬಿ ಬರುತ್ತದೆ. ಚಿನ್ನದ ಬಣ್ಣ ಬರುವವರೆಗೆ ಕರಿಯಿರಿ. ಇದೀಗ ರುಚಿಕರವಾದ ನೈಯ್ಯಪ್ಪ ಸವಿಯಲು ಸಿದ್ಧ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಜಾತಿ ಗಣತಿ: ಇಲ್ಲಿಯವರೆಗೆ ಕೇವಲ ಶೇ. 2 ರಷ್ಟು ಪ್ರಗತಿ; ಪ್ರತಿದಿನ ಶೇ. 10 ರಷ್ಟು ಸಮೀಕ್ಷೆಗೆ ಸಿಎಂ ಸೂಚನೆ, ಗಡುವಿನೊಳಗೆ ಪೂರ್ಣ

ಮೈಸೂರು: ಪಂಚಭೂತಗಳಲ್ಲಿ ಸಾಹಿತಿ ಎಸ್‌.ಎಲ್‌ ಭೈರಪ್ಪ ಲೀನ; ಸಕಲ ಸರ್ಕಾರಿ ಗೌರವಗಳೊಂದಿಗೆ 'ಅಕ್ಷರ ಮಾಂತ್ರಿಕ'ನ ಅಂತ್ಯಕ್ರಿಯೆ

'RJD ಯಾವತ್ತೂ ಅಧಿಕಾರಕ್ಕೆ ಬರದಂತೆ ನೋಡಿಕೊಳ್ಳಿ': ಬಿಹಾರ ಮಹಿಳೆಯರಿಗೆ ಪ್ರಧಾನಿ ಮೋದಿ ಕರೆ

ಲಡಾಖ್ ಘರ್ಷಣೆ: Sonam Wangchuk ಬಂಧನ

Indore: Patch Up ನಿರಾಕರಿಸಿದ ಮಾಜಿ ಪ್ರೇಯಸಿಗೆ ಸ್ಕೂಟರ್ ನಿಂದ ಗುದ್ದಿದ 'ಭೂಪ', Video Viral

SCROLL FOR NEXT